ETV Bharat / bharat

ಲಂಚ ಪ್ರಕರಣ: ರೈಲ್ವೆ ಉಪ ಮುಖ್ಯ ಇಂಜಿನಿಯರ್​ನ ಬಂಧನ.. 2 ಕೋಟಿ ರೂ ವಶಕ್ಕೆ - ಲಕ್ನೋದ ಸಕ್ಷಮ ನ್ಯಾಯಾಲಯ

11 ಲಕ್ಷ ಮೌಲ್ಯದ ಚಿನ್ನಾಭರಣ, ವಿವಿಧ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಮತ್ತು ರೈಲ್ವೆ ಗುತ್ತಿಗೆದಾರರು ಸೇರಿದಂತೆ ವಿವಿಧ ಪಕ್ಷಗಳಿಗೆ ಸಂಬಂಧಿಸಿದ ವಿತ್ತೀಯ ವಹಿವಾಟುಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ತನಿಖಾ ಅಧಿಕಾರಿ ತಿಳಿಸಿದ್ದಾರೆ.

Bribery Case; Arrest of Railway Deputy Chief Engineer
ಲಂಚ ಪ್ರಕರಣ; ರೈಲ್ವೇ ಉಪ ಮುಖ್ಯ ಇಂಜಿನಿಯರ್​ನ ಬಂಧನ
author img

By

Published : Dec 6, 2022, 5:51 PM IST

ನವದೆಹಲಿ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ರೈಲ್ವೆ ಉಪ ಮುಖ್ಯ ಇಂಜಿನಿಯರ್ ಅವರನ್ನು ಬಂಧಿಸಿರುವುದಾಗಿ ಮತ್ತು ದಾಳಿಯ ವೇಳೆ ಆರೋಪಿಯಿಂದ 1 ಕೋಟಿ ನಗದು ಸೇರಿ 2 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಮಂಗಳವಾರ ತಿಳಿಸಿದೆ. ಆರೋಪಿಯನ್ನು ಅರುಣ್ ಕುಮಾರ್ ಮಿತ್ತಲ್ ಎಂದು ಹೇಳಲಾಗುತ್ತಿದೆ.

ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ 1 ಕೋಟಿ ರೂಪಾಯಿ ನಗದು, ಹಾಗೆ 38 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಬೇರೆ ಸ್ಥಳದಿಂದ ವಶಪಡಿಸಿಕೊಂಡಿದ್ದೇವೆ. ಇದಲ್ಲದೇ ಆರೋಪಿ ಹಾಗೂ ಅವನ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ 1.13 ಕೋಟಿ ರೂ. ಇರುವುದನ್ನು ಸಿಬಿಐ ಪತ್ತೆ ಹಚ್ಚಿದೆ.

11 ಲಕ್ಷ ಮೌಲ್ಯದ ಚಿನ್ನಾಭರಣ, ವಿವಿಧ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಮತ್ತು ರೈಲ್ವೆ ಗುತ್ತಿಗೆದಾರರು ಸೇರಿದಂತೆ ವಿವಿಧ ಪಕ್ಷಗಳಿಗೆ ಸಂಬಂಧಿಸಿದ ವಿತ್ತೀಯ ವಹಿವಾಟುಗಳ ದಾಖಲೆಗಳನ್ನುಮರು ಪಡೆಯಲಾಗಿದೆ ಎಂದು ಹಿರಿಯ ತನಿಖಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲಖನೌದ ಚಾರ್‌ಬಾಗ್‌ನಲ್ಲಿ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿರುವ ತನ್ನ ಸಂಸ್ಥೆಯ ಬಿಲ್‌ಗಳನ್ನು ಪಾಸ್ ಮಾಡುವ ಬದಲು ಆರೋಪಿ ದೂರುದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರುದಾರರಿಂದ 50,000 ರೂಪಾಯಿ ಬೇಡಿಕೆ ಇಟ್ಟಿದ್ದು, ಈ ಹಣ ಸ್ವೀಕರಿಸುವ ಸಂದರ್ಭದಲ್ಲಿ ಸಿಬಿಐ ಬಲೆ ಬೀಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ.

ದೆಹಲಿ ಮತ್ತು ಲಖನೌ ಸೇರಿದಂತೆ ಆರೋಪಿಯ ಆವರಣ ಮತ್ತು ಬ್ಯಾಂಕ್ ಲಾಕರ್‌ಗಳಲ್ಲಿ ಶೋಧ ನಡೆಸಲಾಗಿದ್ದು, ಅಪಾರ ಪ್ರಮಾಣದ ನಗದು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಲಖನೌದ ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: 80 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.