ETV Bharat / bharat

ಗುಜರಾತ್‌ನ ರಿಯಲ್‌ ಎಸ್ಟೇಟ್‌ ಗ್ರೂಪ್‌ಗೆ ಐಟಿ ಶಾಕ್‌: ₹1 ಸಾವಿರ ಕೋಟಿ ಅವ್ಯವಹಾರ ಪತ್ತೆ

ಗುಜರಾತ್‌ ಮೂಲಕ ಸಂಭವ್‌ ರಿಯಲ್‌ ಎಸ್ಟೇಟ್‌ ಗ್ರೂಪ್‌ಗೆ ಆದಾಯ ತೆರಿಗೆ ಇಲಾಖೆ ಇಂದು ದೊಡ್ಡ ಆಘಾತ ನೀಡಿದೆ. ಈ ಸಂಸ್ಥೆಯಲ್ಲಿ ನಡೆದ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಅವ್ಯವಹಾರವನ್ನು ಇಲಾಖೆ ಪತ್ತೆ ಹಚ್ಚಿದೆ.

Found over Rs 1k-cr unaccounted transactions: CBDT after raids on Gujarati media, real estate group
ಗುಜರಾತ್‌ನ ಸಂಭವ್‌ ರಿಯಲ್‌ ಎಸ್ಟೇಟ್‌ ಗ್ರೂಪ್‌ಗೆ ಐಟಿ ಶಾಕ್‌; 1 ಸಾವಿರ ಕೋಟಿ ರೂ.ಅವ್ಯವಹಾರ ಪತ್ತೆ
author img

By

Published : Sep 10, 2021, 8:14 PM IST

ನವದೆಹಲಿ: ತೆರಿಗೆ ವಂಚಿಸಿ ಅಕ್ರಮ ವ್ಯವಹಾರ ಮಾಡುತ್ತಿದ್ದ ಗುಜರಾತ್‌ನ ರಿಯಲ್‌ ಎಸ್ಟೇಟ್‌ ಕಂಪನಿ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ಅಹಮಾಬಾದ್‌ ಮೂಲದ ರಿಯಲ್‌ ಎಸ್ಟೇಟ್‌ ಗ್ರೂಪ್‌ ಮೇಲೆ ತನಿಖೆ ಕೊಂಡಿದ್ದ ತೆರಿಗೆ ಅಧಿಕಾರಿಗಳು 1,000 ಕೋಟಿ ರೂಪಾಯಿಗಳ ಅವ್ಯವಹಾರವನ್ನು ಪತ್ತೆ ಮಾಡಿದ್ದಾರೆ.

ಸಂಭವ್‌ ರಿಯಲ್‌ ಎಸ್ಟೇಟ್‌ ಸಂಸ್ಥೆಯ ಮೇಲೆ ದಾಳಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್‌ 8 ರಂದು ಈ ಸಂಸ್ಥೆಗೆ ಸೇರಿದ ಗುಜರಾತಿನ 20 ಕಡೆ ದಾಳಿ ಮಾಡಲಾಗಿತ್ತು. ಈ ಸಂಸ್ಥೆಯು ಎಲೆಕ್ಟ್ರಾನಿಕ್ಸ್, ಡಿಜಿಟಲ್ ಹಾಗೂ ಮುದ್ರಣ ಮಾಧ್ಯಮ ಹೊಂದಿದೆ ಎಂದು ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಶೋಧ ಕಾರ್ಯದ ವೇಳೆ ಸುಮಾರು 1,000 ಕೋಟಿಗಿಂತ ಹೆಚ್ಚಿನ ಮೊತ್ತದ ಅವ್ಯವಹಾರವನ್ನು ಪತ್ತೆ ಹಚ್ಚಲಾಗಿದೆ. 1 ಕೋಟಿ ರೂ. ನಗದು, 2.70 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. 14 ಲಾಕರ್‌ಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.