ETV Bharat / bharat

ಬಿಹಾರದಲ್ಲಿ ಜಾತಿವಾರು ಜನಗಣತಿ ಆರಂಭ: ಎರಡು ಹಂತದಲ್ಲಿ ಜನಗಣತಿ - ಈಟಿವಿ ಭಾರತ ಕನ್ನಡ

ಬಿಹಾರದಲ್ಲಿ ಜಾತಿವಾರು ಜನಗಣತಿ - ಮೊದಲ ಹಂತದ ಗಣತಿಯಲ್ಲಿ ಮನೆಗಳ ಎಣಿಕೆ - ಎರಡನೇ ಹಂತದಲ್ಲಿ ಸಂಪೂರ್ಣ ದತ್ತಾಂಶ ಸಂಗ್ರಹ

Cast Census in Bihar
ಬಿಹಾರದಲ್ಲಿ ಜಾತಿವಾರು ಜನಗಣತಿ ಆರಂಭ : ಎರಡು ಹಂತದಲ್ಲಿ ಜನಗಣತಿ
author img

By

Published : Jan 7, 2023, 9:30 PM IST

ಪಾಟ್ನಾ(ಬಿಹಾರ) : ಬಿಹಾರದಲ್ಲಿ ಇಂದಿನಿಂದ ಜಾತಿವಾರು ಜನಗಣತಿ ಆರಂಭವಾಗಿದೆ. ರಾಜ್ಯ ಸರ್ಕಾರವು ಈ ಯೋಜನೆಗೆ ಸುಮಾರು 500 ಕೋಟಿ ವೆಚ್ಚ ಮಾಡುತ್ತಿದೆ. ಜಾತಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆಗಳ ಎಣಿಕೆ ಕಾರ್ಯ ನಡೆಯಲಿದೆ. ಮೊದಲ ಹಂತದ ಗಣತಿ ಜನವರಿ 21ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಇನ್ನು ಎರಡನೇ ಹಂತದ ಜಾತಿ ಗಣತಿ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಮೇ 31, 2023ಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಎರಡನೇ ಹಂತದಲ್ಲಿ ಮನೆಗಳಲ್ಲಿ ವಾಸಿಸುವ ಜನರನ್ನು ಎಣಿಸಲಾಗುತ್ತದೆ. ಈ ವೇಳೆ ಜಾತಿ, ವೃತ್ತಿ ಸೇರಿದಂತೆ 26 ಕಾಲಂ ನಮೂನೆಗಳನ್ನು ಭರ್ತಿ ಮಾಡಲಾಗುತ್ತದೆ. ಬಿಹಾರದ ರಾಜಧಾನಿ ಪಾಟ್ನಾದ ಪಾಟಲೀಪುತ್ರ ವಲಯದ ವಾರ್ಡ್ ಸಂಖ್ಯೆ 27ರ ಬ್ಯಾಂಕ್ ರಸ್ತೆಯಿಂದ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಜಾತಿ ಗಣತಿಗೆ ಚಾಲನೆ ನೀಡಿದರು.

20 ಲಕ್ಷ ಕುಟುಂಬಗಳ ಜನಗಣತಿ : ಬಳಿಕ ಪ್ರತಿಕ್ರಿಯಿಸಿರುವ ಅವರು, 'ಇಂದಿನಿಂದ ಈ ಜಾತಿವಾರು ಜನಗಣತಿ ಕಾರ್ಯ ಆರಂಭವಾಗಿದೆ. ಎರಡು ಹಂತದಲ್ಲಿ ಗಣತಿ ಪೂರ್ಣಗೊಳ್ಳಲಿದೆ. ಮೊದಲನೆಯದಾಗಿ ಇಂದಿನಿಂದ ಮನೆಗಳ ಎಣಿಕೆ ಕಾರ್ಯ ನಡೆಯಲಿದ್ದು, ಬಳಿಕ ಜಾತಿ, ಉಪಜಾತಿ, ಧರ್ಮದ ಬಗ್ಗೆ ಮಾಹಿತಿ ಪಡೆಯಲಾಗುವುದು. ಇದೊಂದು ಮಹತ್ವದ ಕಾರ್ಯ.ಇದು ಪೂರ್ಣಗೊಳ್ಳಲು ಕನಿಷ್ಟ 5 ತಿಂಗಳು ಬೇಕು. ಜಾತಿಗಣತಿಗೆ ಜಿಲ್ಲೆಯ ಶಿಕ್ಷಕರು, ಅಂಗನವಾಡಿ, ಎಂಎನ್‌ಆರ್‌ಇಜಿಎ ರನ್ನು ಕಾರ್ಯಕರ್ತರನ್ನಾಗಿ ಬಳಸಿಕೊಳ್ಳಲಾಗುವುದು. ಆ್ಯಪ್ ಮೂಲಕ ಮನೆ-ಮನೆಗೆ ತೆರಳಿ ಜನರ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆ. ಪಾಟ್ನಾದಲ್ಲಿ ಸುಮಾರು 20 ಲಕ್ಷ ಕುಟುಂಬಗಳ ಜನಗಣತಿಯನ್ನು ಮಾಡಬೇಕಿದೆ. ಇನ್ನು ಮನೆಯಿಂದ ದೂರವಿದ್ದು, ವಿವಿಧೆಡೆ ನೆಲೆಸಿರುವ ಜನರನ್ನು ಇದರಲ್ಲಿ ಸೇರಿಸಲಾಗುತ್ತದೆ.ಜನರಲ್ಲಿ ಸಾಕಷ್ಟು ಉತ್ಸಾಹ ಇದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಮನೆಗಳ ಲೆಕ್ಕ : ರಾಜ್ಯದಲ್ಲಿ ಜಾತಿವಾರು ಜನಗಣತಿ ನಡೆಸುವ ಜವಾಬ್ದಾರಿಯನ್ನು ಸರ್ಕಾರವು ಜನರಲ್​​ ಅಡ್ಮಿನಿಸ್ಟ್ರೇಷನ್​ ಡಿಪಾರ್ಟ್​ಮೆಂಟ್​ಗೆ ವಹಿಸಿದೆ. ಜನಗಣತಿಗೆ ಶಿಕ್ಷಕರು, ಅಂಗನವಾಡಿ, ಎಂಎನ್‌ಆರ್‌ಇಜಿಎ ಕಾರ್ಯಕರ್ತರು ಸೇರಿದ್ದಾರೆ. ಅವರು ರಾಜ್ಯದ ಎಲ್ಲಾ ಮನೆಗಳನ್ನು ಲೆಕ್ಕ ಮಾಡಲಿದ್ದಾರೆ.

ಇನ್ನು ಏಪ್ರಿಲ್​​ನಲ್ಲಿ ಪ್ರಾರಂಭವಾಗುವ ಎರಡನೇ ಹಂತದ ಗಣತಿಯಲ್ಲಿ ಎಲ್ಲಾ ಜಾತಿಗಳು, ಉಪಜಾತಿಗಳು ಮತ್ತು ಧರ್ಮಗಳಿಗೆ ಸಂಬಂಧಿಸಿದ ಜನರ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ತೊಡಗಿರುವವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಪಂಚಾಯತಿಯಿಂದ ಜಿಲ್ಲಾ ಮಟ್ಟದವರೆಗೆ ಎಂಟು ಹಂತದ ಸಮೀಕ್ಷೆಯಡಿ ಗಣತಿ ಮಾಡಲಾಗುತ್ತದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಈ ಆ್ಯಪ್ ಸ್ಥಳ, ಜಾತಿ, ಕುಟುಂಬದ ಜನರ ಸಂಖ್ಯೆ, ಅವರ ವೃತ್ತಿ ಮತ್ತು ವಾರ್ಷಿಕ ಆದಾಯದ ಕುರಿತಾದ ಪ್ರಶ್ನೆಗಳನ್ನು ಹೊಂದಿರುತ್ತದೆ.

ಜಿಲ್ಲಾಮಟ್ಟದಲ್ಲಿ ಗಣತಿಗೆ ಸಕಲ ಸಿದ್ಧತೆ : ಜಿಲ್ಲಾ ಮಟ್ಟದಲ್ಲಿ ಜನಗಣತಿಗೆ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳನ್ನೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಗಣತಿ ಸಿದ್ಧತೆ ಪೂರ್ಣಗೊಂಡಿದೆ. ಜಿಲ್ಲಾಡಳಿತ ಆಯಾ ಜಿಲ್ಲೆಗಳಲ್ಲಿ ಗಣತಿ ಕಾರ್ಯ ಆರಂಭಿಸಿದೆ. ಇಂದಿನಿಂದ ಮೊದಲ ಹಂತದಲ್ಲಿ ಎಲ್ಲ ಗಣತಿದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮನೆಗಳ ಪಟ್ಟಿ ಮಾಡಲಿದ್ದಾರೆ.

ಒಬಿಸಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಸಿಕ್ಕಿಲ್ಲ: ಮೊದಲ ಜಾತಿ ಆಧಾರಿತ ಜನಗಣತಿಯನ್ನು 1931 ರಲ್ಲಿ ಮಾಡಲಾಗಿತ್ತು. ಆದರೆ ಇದುವರೆಗೂ ಅದನ್ನು ಪ್ರಕಟಿಸಲಾಗಿಲ್ಲ. ಆಗ ಭಾರತವು ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಒಳಗೊಂಡಿದ್ದು, ದೇಶದ ಜನಸಂಖ್ಯೆ ಸುಮಾರು 30 ಕೋಟಿಯಷ್ಟಿತ್ತು. ಇದೇ ದತ್ತಾಂಶಗಳ ಆಧಾರದಲ್ಲಿ ಈವರೆಗೆ ದೇಶದಲ್ಲಿ ವಿವಿಧ ಜಾತಿಯವರು ಎಷ್ಟು ಜನ ಇದ್ದಾರೆ ಎಂದು ಅಂದಾಜಿಸಲಾಗುತ್ತಿತ್ತು. 1931ರ ಜನಗಣತಿ ಪ್ರಕಾರ, ಒಬಿಸಿ ಜನಸಂಖ್ಯೆಯು ಶೇ.52ರಷ್ಟಿತ್ತು ಎಂದು ಅಂದಾಜಿಸಲಾಗಿದೆ.

ಇದಾದ ನಂತರ 2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸಾಮಾಜಿಕ - ಆರ್ಥಿಕ ಮತ್ತು ಜಾತಿ ಗಣತಿ ನಡೆಸಿದ್ದರೂ ಜಾತಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರಲಿಲ್ಲ. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಒಬಿಸಿ ವಿಷಯದಲ್ಲಿ ಇದು ನಡೆದಿಲ್ಲ ಎಂದು ಹೇಳಲಾಗುತ್ತದೆ.

ಜಾತಿ ಆಧಾರಿತ ಜನಗಣತಿಗೆ ಬೇಡಿಕೆ ಇತ್ತು: ಜಾತಿ ಗಣತಿಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಬಿಹಾರ ವಿಧಾನಸಭೆಯು 2018 ಮತ್ತು 2019 ರಲ್ಲಿ ತನ್ನ ಪರವಾಗಿ ಎರಡು ಸರ್ವಾನುಮತದ ನಿರ್ಣಯಗಳನ್ನು ಅಂಗೀಕರಿಸಿತು. ಇದರ ನಂತರ, ಜೂನ್ 2022 ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬಿಹಾರದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಈ ಸಂದರ್ಭ ಬಿಹಾರ ಸರ್ಕಾರವು ಎಸ್‌ಸಿ ಅಲ್ಲದ ಮತ್ತು ಎಸ್‌ಟಿಯೇತರರಿಗೆ ಸಂಬಂಧಿಸಿದ ದತ್ತಾಂಶಗಳ ಅನುಪಸ್ಥಿತಿಯಲ್ಲಿ, ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆಯನ್ನು ಅಂದಾಜು ಮಾಡುವುದು ಕಷ್ಟ ಎಂದು ಹೇಳಿತ್ತು.

ಜಾತಿ ಗಣತಿಯಲ್ಲಿ 204 ಜಾತಿಗಳು ಸೇರ್ಪಡೆ: ಕಳೆದ ವರ್ಷ ಆಗಸ್ಟ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ವಪಕ್ಷ ನಿಯೋಗವು ಆಗಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬಿಹಾರದಲ್ಲಿ ಜಾತಿ ಗಣತಿಗೆ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ಕೇಂದ್ರವು ಜಾತಿ ಆಧಾರಿತ ಜನಗಣತಿಯ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರವು ಸ್ವತಃ ಕಾರ್ಯಪ್ರವೃತ್ತವಾಗಿ ಜಾತಿಜನಗಣತಿಯನ್ನು ಆರಂಭಿಸಿತು. ಜಾತಿ ಗಣತಿಗಾಗಿ ಸುಮಾರು 204 ಜಾತಿಗಳನ್ನು ಬಿಹಾರ ಸರ್ಕಾರ ಗುರುತಿಸಿದ್ದು, ಇದರಲ್ಲಿ ಅತ್ಯಂತ ಹಿಂದುಳಿದ 113, ಹಿಂದುಳಿದ ವರ್ಗ 30, ಎಸ್‌ಸಿ 32, ಎಸ್‌ಟಿ 32 ಮತ್ತು ಸಾಮಾನ್ಯ ವರ್ಗದ 7 ಜಾತಿಗಳು ಸೇರಿವೆ.

ಇದನ್ನೂ ಓದಿ : ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ನಿವಾರಿಸಿದ ರಿಸೈಕಲ್ ಸಂಸ್ಥೆಗೆ ಡಿಜಿಟಲ್ ಇಂಡಿಯಾ ಪ್ರಶಸ್ತಿ ಗರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.