ETV Bharat / bharat

ದೆಹಲಿ ಹಿಂಸಾಚಾರ ಪ್ರಕರಣ; ದೀಪ್ ಸಿಧು ಮಾಹಿತಿ ನೀಡಿದವರಿಗೆ ಲಕ್ಷ ರೂಪಾಯಿ ಬಹುಮಾನ - ಣರಾಜ್ಯೋತ್ಸವದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟ ದೀಪ್ ಸಿಧು

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆ ಎತ್ತಿ ಹಿಡಿಯಲು ಜನವರಿ 26 ರಂದು ರೈತ ಸಂಘಗಳು ಕರೆದ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟ ದೀಪ್ ಸಿಧು ಹೆಸರು ಕೇಳಿ ಬಂದಿದ್ದು, ಮಾಹಿತಿ ನೀಡಿದವರಿಗೆ ಪೊಲೀಸರು 1 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದ್ದಾರೆ.

Deep Sidhu
ದೀಪ್ ಸಿಧು
author img

By

Published : Feb 3, 2021, 12:48 PM IST

ನವದೆಹಲಿ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ನಟ ದೀಪ್ ಸಿಧು ಹೆಸರು ಕೇಳಿ ಬಂದಿದ್ದು, ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದ್ದಾರೆ.

  • Delhi Police announce cash reward of Rs 1 lakh each for information leading to arrest of Deep Sidhu, Jugraj Singh, Gurjot Singh & Gurjant Singh, & Rs 50,000 each for arrest of Jajbir Singh, Buta Singh, Sukhdev Singh & Iqbal Singh for their alleged involvement in Jan 26 violence.

    — ANI (@ANI) February 3, 2021 " class="align-text-top noRightClick twitterSection" data=" ">

ಸಿಧು ಜೊತೆ ಬುಟಾ ಸಿಂಗ್, ಸುಖದೇವ್ ಸಿಂಗ್ ಹಾಗೂ ಇನ್ನಿಬ್ಬರ ಮಾಹಿತಿಗೆ 50 ಸಾವಿರ ರೂ.ಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಎತ್ತಿ ಹಿಡಿಯಲು ಜನವರಿ 26 ರಂದು ರೈತ ಸಂಘಗಳು ಕರೆದ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಸಾವಿರಾರು ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು.

ಅನೇಕ ಪ್ರತಿಭಟನಾಕಾರರು, ಟ್ರ್ಯಕ್ಟರ್​​​ಗಳನ್ನು ಓಡಿಸಿ, ಕೆಂಪು ಕೋಟೆಯನ್ನು ತಲುಪಿ ಸ್ಮಾರಕವನ್ನು ಪ್ರವೇಶಿಸಿದರು. ಕೆಲವು ಪ್ರತಿಭಟನಾಕಾರರು ಅದರ ಗುಮ್ಮಟಗಳ ಮೇಲೆ ಧಾರ್ಮಿಕ ಧ್ವಜಗಳನ್ನು ಹಾಗೂ ಅಲ್ಲಿನ ಕಮಾನಿನಲ್ಲಿ ಒಂದು ಧ್ವಜಸ್ತಂಭವನ್ನು ನೆಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.