ಮುಂಬೈ : ಬಿಜೆಪಿ ರಾಜ್ಯ ಮಹಿಳಾ ಉಪಾಧ್ಯಕ್ಷ ಚಿತ್ರಾ ವಾಘ್ ಅವರ ಪತಿ ಕಿಶೋರ್ ವಾಘ್ ವಿರುದ್ಧ ಮುಂಬೈನ ಭ್ರಷ್ಟಾಚಾರ ನಿಗ್ರಹ ದಳವು ಆದಾಯಕ್ಕಿಂದ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದೆ.
ಕಿಶೋರ್ ಅವರು ಪ್ಯಾರೆಲ್‌ನ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯಕೀಯ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 4 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆ ಇವರ ವಿರುದ್ಧ ಜುಲೈ 5, 2016ರಂದು ಪ್ರಕರಣ ದಾಖಲಾಗಿತ್ತು.
ಆ ಬಳಿಕ ಅವರನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲ, ಕೆಲಸದಿಂದ ವಜಾಗೊಳಿಸಲಾಗಿತ್ತು. ಆದಾಯಕ್ಕಿಂದ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಎಸಿಬಿ ದೂರು ದಾಖಲಿಸಿತ್ತು. ಬಳಿಕ ಡಿಸೆಂಬರ್1, 2006ರಿಂದ ಜುಲೈ 5, 2016ರವರೆಗೆ ವಿಚಾರಣೆ ನಡೆಸಲಾಯಿತು.