ಹೈದರಾಬಾದ್: ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್ನಲ್ಲಿ ಕೇಸ್ ದಾಖಲಾಗಿದೆ.
ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಎಚ್ಎಂಸಿ) ಚುನಾವಣೆ ಸಂಬಂಧ ಪಕ್ಷದ ಪರ ಪ್ರಚಾರಕ್ಕೆ ಹೈದರಾಬಾದ್ಗೆ ತೆರಳಿದ್ದ ತೇಜಸ್ವಿ ಸೂರ್ಯ ಪೂರ್ವಾನುಮತಿಯಿಲ್ಲದೇ ನಗರದ ಒಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದೊಳಗೆ ಪ್ರವೇಶಿಸಿದ್ದರು. ಈ ಹಿನ್ನೆಲೆ ಒಸ್ಮಾನಿಯಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ತೇಜಸ್ವಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಾದ ಬಗ್ಗೆ ತೆಲಂಗಾಣ ಡಿಜಿಪಿ ಮಾಹಿತಿ ನೀಡಿದ್ದಾರೆ.