ETV Bharat / bharat

ಸ್ನೇಹಿತನ ಕಾರಿನಲ್ಲಿ ಲಿಫ್ಟ್​ ಪಡೆದು, ಆತನ ಪತ್ನಿಗೆ ಕಿರುಕುಳ ಆರೋಪ: ಎಸಿಪಿ ವಿರುದ್ಧ ಕೇಸ್​ ದಾಖಲು

author img

By

Published : Jan 15, 2023, 4:11 PM IST

ಮಹಾರಾಷ್ಟ್ರದ ಔರಂಗಾಬಾದ್ ಪೊಲೀಸ್​ ಅಧಿಕಾರಿಯೊಬ್ಬರು ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸ್ನೇಹಿತನ ಕಾರಿನಲ್ಲಿ ಲಿಫ್ಟ್​ ಪಡೆದು, ಆತನ ಪತ್ನಿಗೆ ಕಿರುಕುಳ ಕೊಟ್ಟಿದ್ದಲ್ಲದೇ, ಮನೆಯಲ್ಲಿ ಗಲಾಟೆ ಮಾಡಿರುವ ಕುರಿತು ದೂರು ದಾಖಲಾಗಿದೆ.

case-filed-against-aurangabad-acp-vishal-dhume-for-molesting-a-woman
ಸ್ನೇಹಿತನ ಕಾರಿನಲ್ಲಿ ಲಿಫ್ಟ್​ ಪಡೆದು, ಆತನ ಪತ್ನಿಗೆ ಕಿರುಕುಳ ಆರೋಪ: ಎಸಿಪಿ ವಿರುದ್ಧ ಕೇಸ್​ ದಾಖಲು

ಔರಂಗಾಬಾದ್ (ಮಹಾರಾಷ್ಟ್ರ): ಗೆಳೆಯನ ಮನೆಗೆ ಹೋಗಿ ಗಲಾಟೆ ಮಾಡಿ, ಆತನ ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ ಸಹಾಯಕ ಪೊಲೀಸ್ ಕಮೀಷನರ್​ (ಎಸಿಪಿ) ವಿಶಾಲ್ ಧುಮೆ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತ ಸಿಸಿಟಿವಿ ದೃಶ್ಯಾವಳಿ ಸಹ ಬಹಿರಂಗವಾಗಿದ್ದು, ಎಸಿಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಎಸಿಪಿ ವಿಶಾಲ್ ಧುಮೆ ಮನೆಯ ಮೆಟ್ಟಿಲುಗಳ ಮೇಲೆ ನಿಂತು ಗಲಾಟೆ ಮಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಯ ಸಮೇತವಾಗಿ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮನೆಗೆ ನುಗ್ಗಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಎಸಿಪಿ ಧುಮೆ ವಿರುದ್ಧ ಮಖಾನಿ ನಗರ ಚೌಕ್ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಡೆದಿದ್ದು ಏನು?: ಔರಂಗಾಬಾದ್ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಆಗಿರುವ ವಿಶಾಲ್ ಧುಮೆ ಕೆಲ ದಿನಗಳ ಹಿಂದೆ ರಾತ್ರಿ ಮದ್ಯಪಾನ ಮಾಡಲೆಂದು ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಧುಮೆ ಅವರಿಗೆ ಪರಿಚಯದ ಗೆಳೆಯರೊಬ್ಬರು ತಮ್ಮ ಪತ್ನಿಯೊಂದಿಗೆ ಬಂದಿದ್ದರು. ಹಾಗಾಗಿ ಇಬ್ಬರು ಭೇಟಿಯಾಗಿದ್ದಾರೆ. ಆದರೆ, ಈ ಸಮಯದಲ್ಲಿ ಧುಮೆ ತನ್ನ ಬಳಿ ಕಾರು ಇಲ್ಲ ಎಂದು ಹೇಳಿಕೊಂಡು ಗೆಳೆಯನ ಬಳಿ ಲಿಫ್ಟ್ ಸಿಗಬಹುದೇ ಎಂದು ತನ್ನ ಸ್ನೇಹಿತನನ್ನು ಕೇಳಿದ್ದಾರೆ.

ಕಾರಿನಲ್ಲೇ ಧುಮೆ ಕೀಟಲೆ: ವಿಶಾಲ್ ಧುಮೆ ಒಬ್ಬ ಎಸಿಪಿ, ಅದರಲ್ಲೂ ಪರಿಚಯಸ್ಥರು ಎಂಬ ಕಾರಣಕ್ಕೆ ಗೆಳೆಯ ಲಿಫ್ಟ್​ ನೀಡಲು ಒಪ್ಪಿಕೊಂಡಿದ್ದಾರೆ. ಅಲ್ಲದೇ, ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆ ನಂತರ ಕಾರಿನಲ್ಲೇ ವಿಶಾಲ್ ಧುಮೆ ತನ್ನ ಕೀಟಲೆ ಆರಂಭಿಸಿದರು. ಗೆಳೆಯನ ಮತ್ತು ಆತನ ಪತ್ನಿ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಎಸಿಪಿ ಧುಮೆ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಕಾರಿನಲ್ಲಿ ಕುಳಿತ ತಕ್ಷಣ ಕುಡಿದ ಅಮಲಿನಲ್ಲಿದ್ದ ಧುಮೆ ಮಹಿಳೆಯನ್ನು ಚುಡಾಯಿಸತೊಡಗಿದರು. ಮಹಿಳೆಯ ಬೆನ್ನಿಗೆ ತನ್ನ ಕೈ ಹಾಕಲು ಶುರು ಮಾಡಿದರು ಎಂದು ಗೆಳೆಯನ ಕುಟುಂಬಸ್ಥರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಮನೆಗೆ ಬಂದು ಎಸಿಪಿ ಗಲಾಟೆ: ಇಷ್ಟೇ ಅಲ್ಲ, ಮುಂದೆ ಬಂದಾಗ ಎಸಿಪಿ ವಿಶಾಲ್ ಧುಮೆ ನಾನು ವಾಶ್‌ರೂಮ್‌ಗೆ ಹೋಗಬೇಕು. ನಿಮ್ಮ ಮನೆಗೆ ಕರೆದುಕೊಂಡು ಹೋಗುವಂತೆ ಗೆಳೆಯನನ್ನು ಕೇಳಿಕೊಂಡಿದ್ದಾರೆ. ಅಂತೆಯೇ, ಮನೆಗೆ ಕರೆದುಕೊಂಡ ಬಂದಾಗ ಅಲ್ಲಿ ಕೂಡ ತನ್ನ ಕೀಟಲೆಯನ್ನು ಎಸಿಪಿ ಶುರು ಮಾಡಿದರು ಎಂದು ದೂರಲಾಗಿದೆ. ನಾನು ನಿಮ್ಮ ಬೆಡ್​ರೂಮ್​ನ ವಾಶ್‌ರೂಮ್ ಬಳಸಲು ಬಯಸುತ್ತೇನೆ ಎಂದೆಲ್ಲ ಹೇಳಿ ಗಲಾಟೆ ಮಾಡಿದರು. ಆಗ ಗೆಳೆಯ ಮತ್ತು ಆತನ ಪತ್ನಿ, ತಾಯಿ ಸೇರಿಕೊಂಡು ನೀವು ನಿಮ್ಮ ಮನೆಗೆ ಹೋಗಿ ಎಂದು ಎಸಿಪಿಗೆ ತಿಳಿಸಿದೆವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಎಸಿಪಿ ತನ್ನ ದುರ್ವತನೆಯನ್ನು ಹಾಗೆ ಮುಂದುವರೆಸಿದ್ದರು. ಇದನ್ನು ಪ್ರಶ್ನಿಸಿದಾಗ ಗೆಳೆಯನಿಗೆ ಎಸಿಪಿ ಥಳಿಸಿದರು. ಅಲ್ಲದೇ, ಈ ಬಗ್ಗೆ ರಾತ್ರಿ ಪೊಲೀಸರಿಗೆ ಕರೆ ಮಾಡಿದಾಗ ಧುಮೆ ಜಗಳವಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯನ್ನೂ ದೂರುದಾರರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಎಸಿಪಿ ವಿಶಾಲ್ ಧುಮೆ ಹಾಗೂ ಮಹಿಳೆಯರು ಸೇರಿ ಕೆಲವರು ನಿಂತು ವಾಗ್ವಾದ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು, ಈ ಹಿಂದೆ ಕೂಡ ವಿಶಾಲ್ ಧುಮೆ ನಾಗರಿಕರೊಂದಿಗೆ ವಾಗ್ವಾದ ನಡೆಸಿ ಅವರನ್ನು ಥಳಿಸಿರುವ ಆರೋಪವೂ ಇದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನ ಖಾಲಿ ಕಂಪಾರ್ಟ್‌ಮೆಂಟ್​ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಕಾನ್ಸ್​​ಟೇಬಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.