ಮುಂಬೈ, ಮಹಾರಾಷ್ಟ್ರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಕುಮಾರ್ ಖರಾ ಅವರಿಗೆ ಅಪಹರಣ ಮತ್ತು ಕೊಲೆ ಬೆದರಿಕೆಗಳು ಬಂದಿವೆ. ಅಪರಿಚಿತ ವ್ಯಕ್ತಿ ಬ್ಯಾಂಕ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಕ್ಟೋಬರ್ 13 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಚೇರಿಗೆ ಬಾಂಬ್ ಬೆದರಿಕೆಯ ನಂತರ ಪ್ರಕರಣವನ್ನು ದಾಖಲಿಸಲಾಗಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
-
Maharashtra | Case filed after bomb threat received at State Bank of India's HQs on Oct 13; caller claimed to be speaking from Pakistan & demanded a loan. He stated that he'll kidnap&kill bank's chairman&blow up the bank if the loan was not approved. Probe underway: Mumbai Police
— ANI (@ANI) October 14, 2022 " class="align-text-top noRightClick twitterSection" data="
">Maharashtra | Case filed after bomb threat received at State Bank of India's HQs on Oct 13; caller claimed to be speaking from Pakistan & demanded a loan. He stated that he'll kidnap&kill bank's chairman&blow up the bank if the loan was not approved. Probe underway: Mumbai Police
— ANI (@ANI) October 14, 2022Maharashtra | Case filed after bomb threat received at State Bank of India's HQs on Oct 13; caller claimed to be speaking from Pakistan & demanded a loan. He stated that he'll kidnap&kill bank's chairman&blow up the bank if the loan was not approved. Probe underway: Mumbai Police
— ANI (@ANI) October 14, 2022
ಅಕ್ಟೋಬರ್ 13ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ. ನನಗೆ ಸಾಲ ನೀಡಬೇಕೆಂದು ಎಂದು ಆರೋಪಿ ಒತ್ತಾಯಿಸಿದ್ದಾನೆ. ಸಾಲ ಮಂಜೂರು ಮಾಡದಿದ್ದರೆ ಬ್ಯಾಂಕ್ ಅಧ್ಯಕ್ಷರನ್ನೇ ಕಿಡ್ನಾಪ್ ಮಾಡಿ ಕೊಂದು ಹಾಕುತ್ತೇನೆ. ಅಷ್ಟೇ ಅಲ್ಲ ನಿಮ್ಮ ಪ್ರಧಾನ ಕಚೇರಿಯನ್ನು ಬಾಂಬ್ನಿಂದ ಉಡಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದೆ. ಫೋನ್ ಎಲ್ಲಿಂದ ಬಂತು ಎಂದು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ, ದಿನೇಶ್ ಕುಮಾರ್ ಖಾರಾ ಅವರನ್ನು ಅಕ್ಟೋಬರ್ 6 ರಂದು ಎಸ್‌ಬಿಐ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ರಜನೀಶ್ ಕುಮಾರ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದ, ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಎಟಿಎಂನಿಂದ ಹಣ ಬಾರದೇ 500 ಅಕೌಂಟ್ನಿಂದ ಕಟ್.. ವಕೀಲನಿಗೆ ಬಡ್ಡಿ ಸಮೇತ 1,02,700 ರೂ. ಪರಿಹಾರ ನೀಡಲು ಆದೇಶ