ಕಟಿಹಾರ್ (ಬಿಹಾರ): ಸರಕು ಸಾಗಣೆ (ಕಾರ್ಗೊ) ಹಡಗು ಮಗುಚಿ ಬಿದ್ದು ಘಟನೆ ಬಿಹಾರದ ಗಂಗಾ ನದಿಯಲ್ಲಿ ನಡೆದಿದ್ದು, ಇದರಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ.
ಜಾರ್ಖಂಡ್ ಮತ್ತು ಬಿಹಾರ ಸಂಪರ್ಕಿಸುವ ಸಾಹಿಬ್‌ಗಂಜ್ ಮತ್ತು ಮಣಿಹಾರಿ ನಡುವೆ ಗಂಗಾ ನದಿಗೆ ಸೇತುವೆ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಯು ದಿಲೀಪ್ ಬಿಲ್ಡ್‌ಕಾನ್ ಕಂಪನಿ (ಡಿಬಿಎಲ್) ವಹಿಸಿಕೊಂಡಿದ್ದು, ಸರಕು ಸಾಗಣೆ ಹಡಗಿನಲ್ಲಿ ಲಾರಿ ಸಿಮೆಂಟ್ ಸಾಗಿಸಲಾಗಿತ್ತು. ಈ ವೇಳೆ ಆ ಹಡಗು ಮಗುಚಿ ಬಿದ್ದಿದೆ. ಈ ವೇಳೆ ಲಾರಿ ಮೇಲೆ ಇಬ್ಬರು ಚಾಲಕರು ಮಲಗಿದ್ದರು ಎಂದು ತಿಳಿದು ಬಂದಿದೆ.
ಈ ದುರಂತ ಸಂಭವಿಸುತ್ತಿದ್ದಂತೆ ಇಬ್ಬರೂ ಕೂಡ ನದಿಯೊಳಗೆ ಬಿದ್ದಿದ್ದಾರೆ. ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇಬ್ಬರು ಲಾರಿ ಚಾಲಕರು ಸಹ ನೀರಿನಲ್ಲಿ ಸಜೀವ ಸಮಾಧಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.
ನದಿಯಲ್ಲಿ ಬಿದ್ದ ಚಾಲಕರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ಭಾನು ತಿಳಿಸಿದ್ದಾರೆ. ಇದೇ ವೇಳೆ ಮಂಜು ಹೆಚ್ಚಾಗಿರುವ ಕಾರಣ ಶೋಧ ಕಾರ್ಯಕ್ಕೆ ತೊಂದರೆಯಾಗಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ ಹೊತ್ತು ಮಹಿಳಾ ರಿಕ್ಷಾ ಏರಿ ಲೈಂಗಿಕ ಹಿಂಸೆ: ಬೆತ್ತಲಾಗಿ ಚಾಲಕಿಯ ಬೆನ್ನಟ್ಟಿದ ಕಾಮುಕ