ETV Bharat / bharat

ಕಪಿಲ್​ ಶರ್ಮಾಗೆ ವಂಚನೆ ಪ್ರಕರಣ: ಕಾರು ಡಿಸೈನರ್​​​ ದಿಲೀಪ್​​​ ಛಾಬ್ರಿಯಾ ಪುತ್ರನ ಬಂಧನ - ಕಾರು ಡಿಸೈನರ್​​​ ದಿಲೀಪ್​​​ ಛಾಬ್ರಿಯಾ ಮಗ

ವಂಚನೆ ಮಾಡಿರುವ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕಾರು ಡಿಸೈನರ್​ ದಿಲೀಪ್​ ಛಾಬ್ರಿಯಾ ಅವರ ಮಗನ ಬಂಧನ ಮಾಡಲಾಗಿದೆ.

comedian Kapil Sharma
comedian Kapil Sharma
author img

By

Published : Sep 25, 2021, 3:23 PM IST

ಮುಂಬೈ: ಕಾಮಿಡಿಯನ್​​ ಕಪಿಲ್​ ಶರ್ಮಾಗೆ ವಂಚನೆ ಮಾಡಿರುವ ಪ್ರಕರಣವೊಂದರಲ್ಲಿ ಖ್ಯಾತ ಕಾರು ಡಿಸೈನರ್​​​​ ದಿಲೀಪ್​​ ಛಾಬ್ರಿಯಾ ಅವರ ಮಗನ ಬಂಧನ ಮಾಡಲಾಗಿದೆ. ಮುಂಬೈ ಕ್ರೈಂ ಬ್ರಾಂಚ್​​ ಪೊಲೀಸರು ಆತನ ಬಂಧನ ಮಾಡಿದ್ದಾರೆಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮ ಮೇಲಿನ ವಂಚನೆಗೆ ಸಂಬಂಧಿಸಿದಂತೆ ಕಪಿಲ್​ ಶರ್ಮಾ ಕಳೆದ ವರ್ಷ ಮುಂಬೈನಲ್ಲಿ ದೂರು ದಾಖಲು ಮಾಡಿದ್ದರು. ಜೊತೆಗೆ ತಮಗೆ 5.3 ಕೋಟಿ ರೂ. ದಿಲೀಪ್​​​ ಛಾಬ್ರಿಯಾ ಹಾಗೂ ಆತನ ಮಗನಿಂದ ವಂಚನೆಯಾಗಿದೆ ಎಂದು ತಿಳಿಸಿದ್ದರು.

ಏನಿದು ಸಂಪೂರ್ಣ ಪ್ರಕರಣ

ಕಪಿಲ್ ಶರ್ಮಾ ನೀಡಿರುವ ದೂರಿನ ಪ್ರಕಾರ, 2017ರ ಮಾರ್ಚ್​​​ ಹಾಗೂ ಮೇ ತಿಂಗಳ ನಡುವೆ 5 ಕೋಟಿ ರೂ. ನೀಡಿ ವಿಶೇಷವಾದ ಬಸ್​ ತಯಾರಿಸಲು ತಿಳಿಸಿದ್ದರು. ಆದರೆ, 2019ರವರೆಗೆ ಅದರ ಯಾವುದೇ ಕಾರ್ಯಾಚರಣೆ ಆರಂಭಗೊಂಡಿರಲಿಲ್ಲ. ಹೀಗಾಗಿ ಕಪಿಲ್​ ಶರ್ಮಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(NCLT) ಮೊರೆ ಹೋಗಿದ್ದರು.

ಇದರ ಬೆನ್ನಲ್ಲೇ ದಿಲೀಪ್​​​ ಛಾಬ್ರಿಯಾ ಕಂಪನಿ ವಿಶೇಷ್​ ಬಸ್​ನ ಪಾರ್ಕಿಂಗ್​ಗೋಸ್ಕರ 1.20 ಕೋಟಿ ರೂಪಾಯಿ ಜಮಾ ಮಾಡುವಂತೆ ಬಿಲ್​​ ಕಳುಹಿಸಿಕೊಟ್ಟಿತ್ತು. ಹೀಗಾಗಿ ಕಪಿಲ್​ ಶರ್ಮಾ ಪೊಲೀಸರ ಮುಂದೆ ಮೊರೆ ಹೋಗಿದ್ದರು.

ಇದನ್ನೂ ಓದಿರಿ: ಅಕ್ಕನ ಹಾದಿಯಲ್ಲಿ ತಂಗಿ..UPSCಯಲ್ಲಿ 15ನೇ ಸ್ಥಾನ ಪಡೆದ IAS ಟಾಪರ್ ಟೀನಾ ಡಾಬಿ ಸಹೋದರಿ!

ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್​ ಛಾಬ್ರಿಯಾ ಮಗನನ್ನ ವಿಚಾರಣೆ ಮಾಡಲು ಠಾಣೆಗೆ ಕರೆದಾಗ ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಬೇರೆ ಪ್ರಕರಣದಲ್ಲಿ ದಿಲೀಪ್​ ಛಾಬ್ರಿಯಾ ಅವರನ್ನ ಪೊಲೀಸರು ಬಂಧನ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.