ರಂಗಾರೆಡ್ಡಿ, ತೆಲಂಗಾಣ: ಅತಿ ವೇಗವಾಗಿ ಬಂದ ಕಾರು ಜಿಲೇಬಿ ತಯಾರಿಸುವ ಅಂಗಡಿಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ದುರಂತ ಸಂಭವಿಸಿದ್ದು, ಶಾದ್ನಗರದಿಂದ ಹೈದರಾಬಾದ್ ಕಡೆಗೆ ಹೊರಟ್ಟಿದ್ದ ಹೋಂಡಾ ಸಿಟಿ ಕಾರು ಶಂಷಾಬಾದ್ ಬಳಿ ಜಿಲೇಬಿ ಅಂಗಡಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಕಾರು ಚಾಲಾಯಿಸುತ್ತಿದ್ದ ಮಹಿಳೆ ಆರ್‌ಜಿಐಎ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಬ್ರೇಕ್ ಫೇಲ್ ಆದ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾಳೆ. ಬ್ರೇಕ್ ವಿಫಲವಾದ ಕಾರಣ ಅಪಘಾತ ಸಂಭವಿಸಿದೆ ಎಂದು ಕಾರನ್ನು ಓಡಿಸಿದ ಮಹಿಳೆ ಹೇಳಿದ್ದಾಳೆ.