ಜಶ್‌ಪುರ(ಛತ್ತೀಸ್‌ಗಢ): ದಸರಾ ಮೆರವಣಿಗೆ ವೇಳೆ ವೇಗವಾಗಿ ಬಂದಿರುವ ಕಾರೊಂದು ಹತ್ತಾರು ಜನರ ಮೇಲೆ ಹರಿದು ಹೋಗಿರುವ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಛತ್ತೀಸ್ಗಢದ ಜಶ್ಪುರ್ದಲ್ಲಿ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾತಲಗಾಂವ್ ಗ್ರಾಮದಲ್ಲಿ ದಸರಾ ಮೆರವಣಿಗೆ ವೇಳೆ ಮೂರ್ತಿ ನಿಮಜ್ಜನ ಮಾಡಲು ನೂರಾರು ಜನರು ಒಟ್ಟಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಏಕಾಏಕಿ ಕಾರು ಹರಿದು ಹೋಗಿದೆ. ಹೀಗಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಸುದೀರ್ಘ ಹುಡುಕಾಟದ ಬಳಿಕ ಜೀವಂತ ಸೆರೆ ಸಿಕ್ಕ ನರಭಕ್ಷಕ ವ್ಯಾಘ್ರ..
ಲಭ್ಯವಾಗಿರುವ ಮಾಹಿತಿ ಪ್ರಕಾರ ಕಾರಿನಲ್ಲಿ ಭಾರಿ ಪ್ರಮಾಣದ ಗಾಂಜಾ ಇತ್ತು ಎಂದು ತಿಳಿದು ಬಂದಿದ್ದು, ಘಟನೆಯಿಂದ ಆಕ್ರೋಶಗೊಂಡಿರುವ ನೂರಾರು ಜನರು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.