ETV Bharat / bharat

Cryptocurrency: ಕ್ರಿಪ್ಟೋ ನಿಲ್ಲಿಸುವುದು ಅಸಾಧ್ಯ; ನಿಯಂತ್ರಣ ಅಗತ್ಯ- ಸಂಸದೀಯ ಸಮಿತಿ ಸಭೆ

ಜಗತ್ತಿನಾದ್ಯಂತ ನಿಬ್ಬೆರಗು ಸೃಷ್ಟಿ ಮಾಡಿರುವ ಕ್ರಿಪ್ಟೋಕರೆನ್ಸಿ ಬಗ್ಗೆ ಇನ್ನಿಲ್ಲದ ಚರ್ಚೆ ನಡೆಯುತ್ತಿದ್ದು, ಇದರ ನಿಯಂತ್ರಣ ಹಾಗೂ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸಂಸದೀಯ ಸಮಿತಿ ಹಾಗೂ ವಿವಿಧ ಕೈಗಾರಿಕೋದ್ಯಮಿಗಳ ಸಭೆಯನ್ನು ಇಂದು ಕರೆಯಲಾಗಿತ್ತು.

Cryptocurrency
Cryptocurrency
author img

By

Published : Nov 15, 2021, 9:19 PM IST

ನವದೆಹಲಿ: ದೇಶದಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ಇನ್ನಿಲ್ಲದ ಚರ್ಚೆ ಹುಟ್ಟು ಹಾಕಿದ್ದು, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರಿ ಕೋಲಾಹಲವನ್ನೂ ಸೃಷ್ಟಿಸಿದೆ.

ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಕೂಡ ಎಚ್ಚೆತ್ತುಕೊಂಡಿದೆ. ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಸಿ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಂದು ನಡೆದ ಸಂಸದೀಯ ಸಮಿತಿ (Parliamentary panel meet) ಸಭೆಯಲ್ಲೂ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.

ಕ್ರಿಪ್ಟೋ ಬಗ್ಗೆ ಎಚ್ಚರಿಕೆ ನೀಡಿರುವ ಸಂಸದರು, ದೇಶದಲ್ಲಿ ಅದನ್ನು ನಿಲ್ಲಿಸುವುದು ಅಸಾಧ್ಯ. ಆದರೆ ನಿಯಂತ್ರಣದ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ, ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಜೊತೆಗೆ ಯಾವುದೇ ಸಂಸ್ಥೆಯ ನಿಯಂತ್ರಣ ಕೂಡ ಇದರ ಮೇಲಿಲ್ಲ. ಹೀಗಾಗಿ ಅಗತ್ಯ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಒಮ್ಮತ ಮೂಡಿದೆ.

ಇದನ್ನೂ ಓದಿ: Cryptocurrency-Bitcoin: ಏನಿದು ಕ್ರಿಪ್ಟೋಕರೆನ್ಸಿ? ಭಾರತದಲ್ಲಿ ಬಿಟ್ ಕಾಯಿನ್ ವ್ಯವಹಾರ ಹೇಗಿದೆ?

ಹಣಕಾಸು ಸಂಸದೀಯ ಸ್ಥಾಯಿ (Committee on Finance) ಸಮಿತಿಯಿಂದ ಕ್ರಿಪ್ಟೋ ವಿಷಯದ ಬಗ್ಗೆ ನಡೆದ ಮೊದಲ ಸಭೆ ಇದಾಗಿದ್ದು, ಬಿಜೆಪಿ ನಾಯಕ ಜಯಂತ್ ಸಿನ್ಹಾ ಸಮಿತಿಯ ನೇತೃತ್ವ ವಹಿಸಿದ್ದರು. ಇಂದಿನ ಸಭೆಯಲ್ಲಿ ಕ್ರಿಪ್ಟೋ ಕರೆನ್ಸಿ ನಿಯಂತ್ರಣಕ್ಕೆ ಯಾವ ರೀತಿಯ ಕಾರ್ಯವಿಧಾನ ಜಾರಿಗೆ ತರಬೇಕು ಎಂಬುದರ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದ್ದರೂ, ಮಧ್ಯಸ್ಥಗಾರರಾಗಿ ನಿಯಂತ್ರಣದ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಕಂಡುಬಂದಿಲ್ಲ.

ಕ್ರಿಪ್ಟೋ ಕರೆನ್ಸಿ ನಿಷೇಧಿಸುವ ಆರ್​ಬಿಸಿ ಸುತ್ತೋಲೆ ಈ ಹಿಂದೆ ಮಾರ್ಚ್​ 2020ರಲ್ಲೇ ರದ್ದುಗೊಂಡಿತ್ತು. ಇದರ ಬೆನ್ನಲ್ಲೇ ಬಿಟ್​ಕಾಯಿನ್​ನಂತಹ ಕ್ರಿಪ್ಟೋಕರೆನ್ಸಿ ಎದುರಿಸಲು ಆರ್​ಬಿಐ ಅಧಿಕೃತ ಡಿಜಿಟಲ್​ ಕರೆನ್ಸಿ ಹೊರತರಲು ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.