ETV Bharat / bharat

ಪಂಚ ರಾಜ್ಯಗಳ ಚುನಾವಣೆ ರಿಸಲ್ಟ್​​: ಯಾರಿಗೆ ಯಾವ ರಾಜ್ಯದ ಗದ್ದುಗೆ? ಕಣದಲ್ಲಿರುವ ಪ್ರಮುಖರು ಇವರು!

author img

By

Published : Mar 10, 2022, 7:32 AM IST

Elections 2022: 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಇಂದು ಬಹಿರಂಗಗೊಳ್ಳಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಐದು ರಾಜ್ಯಗಳಲ್ಲಿ ಕಣದಲ್ಲಿರುವ ಪ್ರಮುಖರ ಲಿಸ್ಟ್​ ಇಂತಿದೆ.

five states Election Results
five states Election Results

ಹೈದರಾಬಾದ್​: ಮಹಾಮಾರಿ ಕೊರೊನಾ, ಒಮಿಕ್ರಾನ್​ ವೈರಸ್ ಭೀತಿ ನಡುವೆ ಕೇಂದ್ರ ಚುನಾವಣಾ ಆಯೋಗದಿಂದ ಐದು ರಾಜ್ಯಗಳಲ್ಲಿ 2022ರ ವಿಧಾನಸಭಾ ಚುನಾವಣಾ ನಡೆದಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ವಿಧಾನಸಭೆಗೆ ಮತದಾನವಾಗಿದ್ದು, ಎಲ್ಲ ರಾಜ್ಯಗಳ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ.

ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ: 2024ರ ಲೋಕಸಭೆ ಚುನಾವಣೆಯಲ್ಲಿ ದೇಶದ ಗದ್ದುಗೆ ಹಿಡಿಯುವಲ್ಲಿ ಮುಖ್ಯ ಪಾತ್ರವಹಿಸುವ ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಮತದಾನವಾಗಿದೆ. ಪ್ರಮುಖವಾಗಿ ಕಾಂಗ್ರೆಸ್​, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಕಣದಲ್ಲಿರುವ ಪ್ರಮುಖ ಮುಖಗಳು: ಯೋಗಿ ಆದಿತ್ಯನಾಥ್​(ಗೋರಖ್​ಪುರ್​) ಅಖಿಲೇಶ್ ಯಾದವ್​​(ಕರೂಲ್​ ಬಾದ್​), ಕೇಶವ್ ಪ್ರಸಾದ್ ಮೌರ್ಯ, ಸ್ವಾಮಿ ಪ್ರಸಾದ್ ಮೌರ್ಯ, ವಿನಯ್ ಶಂಕರ್ ತಿವಾರಿ, ಅನಿಲ್​ ರಾಜ್ಬರ್​, ಅಬ್ದುಲ್​ ಆಜಂ ಖಾನ್​, ಚಂದ್ರಶೇಖರ್ ಆಜಾದ್​​

ದೇವಭೂಮಿ ಉತ್ತರಾಖಂಡದ ಉತ್ತರಾಧಿಕಾರಿ ಯಾರು?:70 ಸ್ಥಾನಗಳ ಉತ್ತರಾಖಂಡ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ, ಆಮ್ ಆದ್ಮಿ ಪಕ್ಷ, ಬಿಎಸ್‌ಪಿ ಮತ್ತು ಹಲವು ಸಣ್ಣ ಪಕ್ಷಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಇಲ್ಲಿ ಸಿಎಂ ತಿರತ್​ ಸಿಂಗ್ ರಾವತ್​, ಮಾಜಿ ಸಿಎಂ ಪುಷ್ಕರ್ ಸಿಂಗ್ ಧಾಮಿ, ತ್ರಿವೇಂದ್ರ ಸಿಂಗ್​​​​, ಸೇರಿದಂತೆ ಕಾಂಗ್ರೆಸ್​ನ ​ ಪ್ರಮುಖರು ಕಣದಲ್ಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತಎಣಿಕೆಗೆ ಕ್ಷಣಗಣನೆ...

ಪಂಜಾಬ್​​ನಲ್ಲಿ ಯಾರಿಗೆ ಸಿಹಿ?: 117 ಸ್ಥಾನಗಳ ಪಂಜಾಬ್‌ನಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನ ಗೆಲ್ಲುವ ಮೂಲಕ ಹತ್ತು ವರ್ಷಗಳ ನಂತರ ಅಧಿಕಾರಕ್ಕೆ ಮರಳಿತು. ಆದರೆ, ಶಿರೋಮಣಿ ಅಕಾಲಿದಳ - ಬಿಜೆಪಿ ಕೇವಲ 18 ಸ್ಥಾನಗಳಿಗೆ ಇಳಿದು ಆಮ್ ಆದ್ಮಿ ಪಕ್ಷವು ಪ್ರಮುಖ ಪ್ರತಿಪಕ್ಷವಾಯಿತು. 20 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾದರು, ಆದರೆ, ನಾಲ್ಕು ವರ್ಷಗಳ ನಂತರ ಕಾಂಗ್ರೆಸ್ ಕ್ಯಾಪ್ಟನ್ ಅಮರಿಂದರ್ ಅವರನ್ನು ಬದಲಾಯಿಸಿ ಚರಣ್​​​ಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿ ಮಾಡಿತು.

ಇದನ್ನೂ ಓದಿರಿ: ಇಡೀ ದೇಶದ ಚಿತ್ತ ಯುಪಿ ಫಲಿತಾಂಶದತ್ತ!: ಜಿದ್ದಾಜಿದ್ದಿನ ಮತಸಮರದಲ್ಲಿ ಗೆದ್ದು ಬೀಗುವವರಾರು?

ಕಣದಲ್ಲಿರುವ ಪ್ರಮುಖರು: ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (ಚಮ್ಕೂರ್ ಸಾಹಿಬ್ ಕ್ಷೇತ್ರ), ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (ಅಮೃತಸರ ಪೂರ್ವ ಕ್ಷೇತ್ರ), ಮತ್ತು ಮಾಜಿ ಮುಖ್ಯಮಂತ್ರಿ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ ಕ್ಯಾಪ್ಟನ್ ಅಮರಿಂದರ್ ಸಿಂಗ್ (ಪಟಿಯಾಲ ಕ್ಷೇತ್ರ) ) ಅಲ್ಲದೆ, ಅಮೃತಸರ ಪೂರ್ವ ಕ್ಷೇತ್ರದಿಂದ ಬಿಕ್ರಮ್ ಸಿಂಗ್ ಮಜಿಥಿಯಾ, ಲಂಬಿ ಕ್ಷೇತ್ರದಿಂದ ಸುಖ್‌ಬೀರ್ ಸಿಂಗ್ ಬಾದಲ್ ನಿಂತಿದ್ದಾರೆ. ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಧುರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಮಣಿಪುರದಲ್ಲಿ ಮತ್ತೊಮ್ಮೆ ಕಮಲ ಕಿಲಕಿಲ?: ಈಶಾನ್ಯದ 60 ಸ್ಥಾನಗಳ ಮಣಿಪುರಕ್ಕೆ ಎರಡು ಹಂತಗಳಲ್ಲಿ ವೊಟಿಂಗ್ ಆಗಿದೆ. 2017 ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇಲ್ಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಎನ್ ಬಿರೇನ್ ಸಿಂಗ್, ಅಸೆಂಬ್ಲಿ ಸ್ಪೀಕರ್ ವೈ ಖೇಮಚಂದ್ ಸಿಂಗ್, ಉಪಮುಖ್ಯಮಂತ್ರಿ ಮತ್ತು ಎನ್ಪಿಪಿ ಅಭ್ಯರ್ಥಿ ಯುಮ್ನಮ್ ಜಾಯ್ಕುಮಾರ್ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

ಗೋವಾದಲ್ಲಿ ಯಾರಿಗೆ ಗೆಲುವಿನ ಮಾಲೆ?: 40 ಸ್ಥಾನಗಳ ಗೋವಾ ವಿಧಾನಸಭೆ ಕೂಡ ತೀವ್ರ ಕುತೂಹಲ ಮೂಡಿಸಿದೆ. 2017ರಲ್ಲಿ ಕಾಂಗ್ರೆಸ್​ 15 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ರೂ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು. ಇದರ ಲಾಭ ಪಡೆದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿ, ಕಾಂಗ್ರೆಸ್, ಟಿಎಂಸಿ ಹಾಗೂ ಆಮ್​ ಆದ್ಮಿ ಪಕ್ಷ ಪ್ರಮುಖ ಪಕ್ಷಗಳ ನಡುವೆ ಸ್ಪರ್ಧೆ ಇದೆ. ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಪ್ರಮೋದ್ ಸಾವಂತ್​ ಸೇರಿದಂತೆ ಅನೇಕರು ಕಣದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.