ಕೋಲ್ಕತ್ತಾ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರನ್ನು ಶಾಂತಿನಿಕೇತನದಲ್ಲಿರುವ ಅವರ ಭೂಮಿಯಿಂದ ಹೊರಹೋಗುವಂತೆ ವಿಶ್ವಭಾರತಿ ವಿಶ್ವವಿದ್ಯಾಲಯ ನೀಡಿದ್ದ ನೋಟಿಸ್‌ಗೆ ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಬಿಭಾಸ್ ರಂಜನ್ ಡಿ ಅವರಿದ್ದ ಪೀಠ ಗುರುವಾರ ಈ ಆದೇಶ ನೀಡಿದೆ. ಮೇ 15 ರಂದು ಕೆಳಹಂತದ ನ್ಯಾಯಾಲಯದಲ್ಲಿ ನಡೆಯಲಿರುವ ಈ ಕುರಿತ ವಿಚಾರಣೆಯ ಆದೇಶ ಬರುವರೆಗೆ ಆ ನೋಟಿಸ್‌ಗೆ ತಡೆ ನೀಡಲಾಗಿದೆ.
ಮೇ 6 ರೊಳಗೆ ಶಾಂತಿನಿಕೇತನದಲ್ಲಿರುವ ತಮ್ಮ ಪೂರ್ವಜರ ನಿವಾಸವಿರುವ 5,500 ಚದರ ಅಡಿ ಜಾಗವನ್ನು ತೆರವು ಮಾಡುವಂತೆ ವಿಶ್ವವಿದ್ಯಾನಿಲಯವು ಆದೇಶಿಸಿದ ನೀಡಿದ್ದ ನೋಟಿಸ್ ಪ್ರಶ್ನಿಸಿ, ಸೇನ್ ಪರಿಹಾರಕ್ಕಾಗಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಸೇನ್ ಅವರು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಕೇಂದ್ರೀಯ ವಿಶ್ವವಿದ್ಯಾಲಯವು ನೀಡಿದ ಗಡುವಿನೊಳಗೆ ಆ ಭೂಮಿಯಿಂದ ಸೇನ್ ತೆರವು ಮಾಡಲು ವಿಫಲವಾದರೆ ಅವರನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಗುವುದು ಎಂದು ನೊಟೀಸ್ನಲ್ಲಿ ಎಚ್ಚರಿಸಿದೆ. 1943ರ ಅಕ್ಟೋಬರ್‌ನಲ್ಲಿ ಅಂದಿನ ವಿಶ್ವಭಾರತಿ ಪ್ರಧಾನ ಕಾರ್ಯದರ್ಶಿ ರತೀಂದ್ರನಾಥ ಠಾಗೋರ್ ಅವರು ತಮ್ಮ ತಂದೆ ಅಶುತೋಷ್ ಸೇನ್ ಅವರಿಗೆ 1.38 ಎಕರೆ ಭೂಮಿಯನ್ನು 99 ವರ್ಷಗಳ ಗುತ್ತಿಗೆಗೆ ನೀಡಿದ್ದರು. ನಂತರ ಅವರು ಶಾಂತಿನಿಕೇತನದಲ್ಲಿ 'ಪ್ರತಿಚಿ' ಮನೆಯನ್ನು ನಿರ್ಮಿಸಿದ್ದರು ಎಂದು ಅರ್ಥಶಾಸ್ತ್ರಜ್ಞರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಇದನ್ನೂ ಓದಿ: ಅಮರ್ತ್ಯ ಸೇನ್ ಮನೆ 'ಪ್ರತಿಚಿ' ಬಳಿ ಮೇ 6ಕ್ಕೆ ಬುದ್ಧಿಜೀವಿಗಳಿಂದ ಅಹೋರಾತ್ರಿ ಧರಣಿ: ಮಮತಾ ಭಾಗವಹಿಸುವ ಸಾಧ್ಯತೆ
ಅಮರ್ತ್ಯ ಸೇನ್ ಅವರು ಸಲ್ಲಿಸಿದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಭಾಸ್ ರಂಜನ್ ಡಿ ಅವರು ವಿಶ್ವವಿದ್ಯಾಲಯ ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೊಂಡು ಆದೇಶ ಬರುವರೆಗೆ ಅರ್ಥ ಶಾಸ್ತ್ರಜ್ಞರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಅಮರ್ತ್ಯ ಸೇನ್ ಅವರ ಭೂಮಿಯನ್ನು ತೆರವು ಮಾಡುವ ಆದೇಶದ ಮೇಲೆ ಸೂರಿ ನ್ಯಾಯಾಲಯ ನೀಡಿದ್ದ ಅಮಾನತು ಆದೇಶವು ಪ್ರಕರಣದ ಇತ್ಯರ್ಥವಾಗುವವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶಿಸಿದ್ದಾರೆ. ಕೆಳ ಹಂತದ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆಯನ್ನು ಮೇ 15 ರಂದು ನಿಗದಿಪಡಿಸಲಾಗಿತ್ತು, ಪರ ವಿರೋಧ ವಾದಗಳನ್ನು ಆಲಿಸಿದ ಹೈಕೋರ್ಟ್, ಜಿಲ್ಲಾ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮೇ 10 ಕ್ಕೆ ವಿಚಾರಣೆ ನಡೆಸುವಂತೆ ಆದೇಶಿಸಿದೆ.
ವಿಶ್ವಕವಿ ರತೀಂದ್ರನಾಥ ಟ್ಯಾಗೋರ್ ಅವರ ಮಗ ರತೀಂದ್ರನಾಥ ಟ್ಯಾಗೋರ್ ಅವರು 1.38 ಎಕರೆ ಭೂಮಿಯನ್ನು 99 ವರ್ಷಗಳ ಕಾಲ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ತಂದೆ ಅಶುತೋಷ್ ಸೇನ್ ಅವರಿಗೆ ಗುತ್ತಿಗೆ ನೀಡಿದ್ದರು. ಅಶುತೋಷ್ ಸೇನ್ ಅವರು ತನಗೆ ಗುತ್ತಿಗೆ ನೀಡಿದ ಭೂಮಿಯಲ್ಲಿ ಮನೆಯನ್ನು ಕಟ್ಟಿ ಪ್ರತಿಚಿ ಎಂದು ಹೆಸರಿಟ್ಟಿದ್ದರು.
ಇದನ್ನೂ ಓದಿ: ಭೂ ವಿವಾದ: ಕಾನೂನು ಹೋರಾಟ ಆರಂಭಿಸಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್