ETV Bharat / bharat

ಮಧ್ಯೆದಲ್ಲೇ ಸಿಲುಕಿತು 11 ಪ್ರವಾಸಿಗರಿದ್ದ ಕೇಬಲ್ ಕಾರ್​ : ರಕ್ಷಣಾ ಕಾರ್ಯಾಚರಣೆ ಚುರುಕು -Video - ಮಧ್ಯೆದಲ್ಲೇ ಸಿಲುಕಿದ ಪ್ರವಾಸಿಗರಿದ್ದ ಕೇಬಲ್ ಕಾರ್​

ತಾಂತ್ರಿಕ ಸಮಸ್ಯೆಯಿಂದ ಪರ್ವಾನೂ ಟಿಂಬರ್ ಟ್ರಯಲ್ ನಲ್ಲಿ ಪ್ರಯಾಣಿಕರು ತುಂಬಿದ್ದ ಕೇಬಲ್ ಕಾರ್​ನ ಟ್ರಾಲಿ ಸಿಲುಕಿಕೊಂಡಿದೆ ಎನ್ನಲಾಗಿದೆ. ಈ ರೀತಿಯಾಗಿ ಒಂದು ಗಂಟೆ ಕಾಲ ಅವರೆಲ್ಲರೂ ಅಲ್ಲೇ ಇದ್ದರು ಎನ್ನಲಾಗ್ತಿದೆ. ಈಗಿನ ಮಾಹಿತಿ ಪ್ರಕಾರ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯೆದಲ್ಲೇ ಸಿಲುಕಿದ ಪ್ರವಾಸಿಗರಿದ್ದ ಕೇಬಲ್ ಕಾರ್

author img

By

Published : Jun 20, 2022, 3:27 PM IST

Updated : Jun 20, 2022, 3:56 PM IST

ಸೋಲನ್ ( ಹಿಮಾಚಲ ಪ್ರದೇಶ) : ಹಿಮಾಚಲ ಪ್ರದೇಶದ ಸೋಲನ್‌ನಲ್ಲಿರುವ ಟಿಂಬರ್ ಟ್ರಯಲ್ ರೋಪ್‌ವೇಯಲ್ಲಿ ತಾಂತ್ರಿಕ ದೋಷದಿಂದ ಟ್ರಾಲಿಯೊಂದು ಮಧ್ಯದಲ್ಲಿಯೇ ಸಿಲುಕಿಕೊಂಡಿದೆ. ಈ ಟ್ರಾಲಿಯಲ್ಲಿ 11 ಮಂದಿ ಇದ್ದರು. ಅವರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಪ್ರವಾಸಿಗರನ್ನು ಟ್ರಾಲಿಯಿಂದ ಹೊರಗೆ ಕರೆದೊಯ್ಯಲು ಮತ್ತೊಂದು ಕೇಬಲ್ ಕಾರ್ ಬಳಸಲಾಗುತ್ತಿದೆ. 4 ರಿಂದ 5 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಇನ್ನೂ ಕೆಲ ಪ್ರವಾಸಿಗರು ಟ್ರಾಲಿಯಲ್ಲಿಯೇ ಇದ್ದಾರೆ. ಈ ಪ್ರವಾಸಿಗರಸನ್ನು ಸ್ಥಳಾಂತರಿಸಲು ರೋಪ್‌ವೇಯ ತಾಂತ್ರಿಕ ತಜ್ಞರೊಂದಿಗೆ ಹಿಮಾಚಲ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮಧ್ಯೆದಲ್ಲೇ ಸಿಲುಕಿತು 11 ಪ್ರವಾಸಿಗರಿದ್ದ ಕೇಬಲ್ ಕಾರ್​ : ರಕ್ಷಣಾ ಕಾರ್ಯಾಚರಣೆ ಚುರುಕು

ಎಸ್ಪಿ ವೀರೇಂದ್ರ ಶರ್ಮಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮ. 1:30 ರ ಸುಮಾರಿಗೆ ಪರ್ವಾನೂದಲ್ಲಿ ಟಿಂಬರ್ ಟ್ರಯಲ್ ರೋಪ್‌ವೇಯಲ್ಲಿ ತಾಂತ್ರಿಕ ದೋಷದಿಂದಾಗಿ ಕೇಬಲ್ ಕಾರ್ ಮಧ್ಯದಲ್ಲಿ ಸಿಲುಕಿಕೊಂಡಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ಮತ್ತೊಂದು ಕೇಬಲ್ ಕಾರನ್ನು ರಕ್ಷಣೆಗಾಗಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು. 1992ರಲ್ಲೂ ಇದೇ ರೋಪ್‌ವೇಯಲ್ಲಿ ಈ ರೀತಿಯ ಘಟನೆ ನಡೆದಿತ್ತು ಎಂಬುದು ಗಮನಾರ್ಹ.

ಇದನ್ನೂ ಓದಿ: ಆಂಧ್ರದಲ್ಲಿ ಜನ, ಜಾನುವಾರುಗಳ ಮೇಲೆ ಕರಡಿ ದಾಳಿ

Last Updated : Jun 20, 2022, 3:56 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.