ETV Bharat / bharat

ಶೀಘ್ರದಲ್ಲಿ ಸಚಿವ ಸಂಪುಟ ಪುನಾರಚನೆ: ಆಂಧ್ರ ಸಿಎಂ ಜಗನ್‌

author img

By

Published : Mar 16, 2022, 9:18 AM IST

ಆಂಧ್ರ ಪ್ರದೇಶದ ಸಚಿವ ಸಂಪುಟ ಪುನರ್‌ ರಚನೆಗೆ ಸಿಎಂ ಜಗನ್‌ ಮೋಹನ್‌ ರೆಡ್ಡಿ ಮುಂದಾಗಿದ್ದಾರೆ. ಸಚಿವ ಸ್ಥಾನ ಕಳೆದುಕೊಳ್ಳುವವರಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಬೇರೆ ಬೇರೆ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಎಂದು ಜಗನ್‌ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

cabinet revamp soon; andhra cm jagan
ಶೀಘ್ರದಲ್ಲಿ ಸಚಿವ ಸಂಪುಟ ಪುನರ್‌ ರಚನೆ: ಆಂಧ್ರ ಸಿಎಂ ಜಗನ್‌

ಅಮರಾವತಿ: ವಿಳಂಬವಾಗಿರುವ ಸಚಿವ ಸಂಪುಟದ ಪುನರ್‌ ರಚನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಸಚಿವ ಸ್ಥಾನ ಕಳೆದುಕೊಳ್ಳುವವರಿಗೆ ಪಕ್ಷದ ಜವಾಬ್ದಾರಿಗಳನ್ನು ವಹಿಸಲಾಗುವುದು ಎಂದು ಆಂಧ್ರ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಹಿತಿ ನೀಡಿದ ಜಗನ್‌, ಸಚಿವ ಸಂಪುಟ ಪುನರ್‌ ರಚನೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸುವುದಾಗಿ ಶಾಸಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಎರಡೂವರೆ ವರ್ಷಗಳ ನಂತರ ಎಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಹೊಸ ತಂಡವನ್ನು ರಚಿಸುವುದು ಆರಂಭಿಕ ಯೋಜನೆಯಾಗಿದ್ದರೂ, ಇವರಲ್ಲಿ ಕೆಲವರಿಗೆ ಮತ್ತೆ ಅವಕಾಶ ನೀಡಬಹುದು ಎಂದು ಜಗನ್ ಸುಳಿವು ನೀಡಿದ್ದಾರೆ. ಜಾತಿ ಸಮೀಕರಣವೂ ಮುಂದುವರಿದಿದ್ದು, ಯಾರಿಗೆ ಮಣೆ ಹಾಕಲಿದ್ದಾರೆ..? ಯಾರಿಗೆ ಕೊಕ್‌ ನೀಡ್ತಾರೆ ಅನ್ನೋದು ಭಾರಿ ಕುತೂಹಲ ಮೂಡಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಪುಟ ಪುನರ್‌ ರಚನೆ ಮಾಡಬೇಕಾಗಿತ್ತು. ಆದರೆ, ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಈಗ ರಾಜ್ಯದ ಜಿಲ್ಲೆಗಳನ್ನು ವಿಭಜಿಸಿ ದ್ವಿಗುಣಗೊಳಿಸಲಾಗುತ್ತಿದ್ದು, ಏಪ್ರಿಲ್ 2 ರ ನಂತರ ಸಚಿವ ಸಂಪುಟ ಪುನಾರಚನೆ ಮಾಡಲು ನಿರ್ಧರಿಸಿದ್ದೇನೆ. ಸಚಿವ ಸಂಪುಟದಿಂದ ತೆಗೆದುಹಾಕುವುದು ಎಂದರೆ ಅವರನ್ನು ಪಕ್ಕಕ್ಕೆ ತಳ್ಳುವುದು ಅಲ್ಲ ಎಂದು ಸಿಎಂ ಜಗನ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಪುಟದಿಂದ ಕೈಬಿಡುವ ಕೆಲವರನ್ನು ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರನ್ನಾಗಿ ಮಾಡಲಾಗುವುದು. ಇನ್ನು ಕೆಲವರನ್ನು ಪ್ರಾದೇಶಿಕ ಸಂಯೋಜಕರನ್ನಾಗಿ ನೇಮಿಸಲಾಗುವುದು. ಅವರು ಸಚಿವರಾಗಿ ಉನ್ನತಿ ಮತ್ತು ವೈಯಕ್ತಿಕ ಖ್ಯಾತಿ ಗಳಿಸಿದ್ದರಿಂದ ನಾವು ಅವರಿಗೆ ಪಕ್ಷದ ಜವಾಬ್ದಾರಿಗಳನ್ನು ನೀಡುತ್ತಿದ್ದೇವೆ ಎಂದು ಜಗನ್ ತಿಳಿಸಿದ್ದಾರೆ.

ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ನಿಮಗಿದೆ. ನೀವು ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೀರಿ ಹಾಗೂ ಇತರರನ್ನು ಗೆಲ್ಲುವಂತೆ ಮಾಡಿ, ನೀವು ಮತ್ತೆ ಸಚಿವ ಸಂಪುಟಕ್ಕೆ ಬರುತ್ತೀರಿ. ಈ ವ್ಯವಸ್ಥೆಯು ಹೀಗೆಯೇ ಮುಂದುವರಿಯುತ್ತದೆ ಎಂದು ಸಿಎಂ ತಮ್ಮ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇನ್ನು ಮುಂದೆ ಮನೆ ಮನೆಗೆ ಭೇಟಿ ನೀಡುವಂತೆ ಶಾಸಕರಿಗೆ ಇದೇ ವೇಳೆ ಸೂಚಿಸಿದ್ದಾರೆ.

ನಾವು 34 ತಿಂಗಳು ಪೂರ್ಣಗೊಳಿಸಿದ್ದೇವೆ. ಇದು ಸುಮಾರು ಮೂರು ವರ್ಷಗಳು. ಮನೆ - ಮನೆಗೆ ಹೋಗುವುದಕ್ಕಿಂತ ಹೆಚ್ಚು ಪರಿಣಾಮಕಾರಿ ಏನೂ ಇಲ್ಲ. ಒಬ್ಬ ವ್ಯಕ್ತಿ ಶಾಸಕನಾಗಿ ಗೆದ್ದು ವಿಧಾನಸಭೆಗೆ ಕುಳಿತುಕೊಳ್ಳಬೇಕಾದರೆ ಕನಿಷ್ಠ ಮೂರು ಬಾರಿಯಾದರೂ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ ಹೊಸದಾಗಿ 13 ಜಿಲ್ಲೆಗಳ ರಚನೆ, ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.