ETV Bharat / bharat

ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್: ಸಚಿವ ದಾರಾ ಸಿಂಗ್​ ಚೌಹಾಣ್​ ರಾಜೀನಾಮೆ - ಸಚಿವ ದಾರಾ ಸಿಂಗ್​ ಚೌಹಾಣ್​ ರಾಜೀನಾಮೆ

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ವಿವಿಧ ಪಕ್ಷಗಳ ಮುಖಂಡರ ಪಕ್ಷಾಂತರ ಪರ್ವ ಶುರುವಾಗಿದೆ. ಇದೀಗ ಆಡಳಿತ ಪಕ್ಷ ಬಿಜೆಪಿಯ ಮತ್ತೋರ್ವ ಸಚಿವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಕಾಂಗ್ರೆಸ್‌ ಹಾಗು ಸಮಾಜವಾದಿ ಪಕ್ಷದ ಶಾಸಕರು, ಪ್ರಮುಖ ಮುಖಂಡರು ಬಿಜೆಪಿ ಸೇರಿದ್ದರು.

BJP leader Dara Singh Chauhan quits
BJP leader Dara Singh Chauhan quits
author img

By

Published : Jan 12, 2022, 4:21 PM IST

ಲಖನೌ(ಉತ್ತರ ಪ್ರದೇಶ): ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಗೆ ಉತ್ತರ ಪ್ರದೇಶದಲ್ಲಿ ಮೇಲಿಂದ ಮೇಲೆ ಗುದ್ದು ಬೀಳುತ್ತಿದ್ದು ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಮೂವರು ಶಾಸಕರು ಪಕ್ಷ ತೊರೆದ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಮುಖ ಸಚಿವ ಯೋಗಿ ಕ್ಯಾಬಿನೆಟ್​ನಿಂದ ಹೊರನಡೆದಿದ್ದಾರೆ.

ಯೋಗಿ ಆದಿತ್ಯನಾಥ್​​​ ಸಚಿವ ಸಂಪುಟದಲ್ಲಿ ಪ್ರಮುಖ ಮಂತ್ರಿಯಾಗಿದ್ದ ದಾರಾ ಸಿಂಗ್​ ಚೌಹಾಣ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯಪಾಲರು ಹಾಗೂ ಸಿಎಂಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

BJP leader Dara Singh Chauhan quits

ಇದನ್ನೂ ಓದಿ: ಕಾರು ಕಾಲುವೆಗೆ ಬಿದ್ದು ಸರ್ಕಾರಿ ಸಚೇತಕರ ಕುಟುಂಬಸ್ಥರಿಬ್ಬರ ದುರ್ಮರಣ

ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು

  • Congress MLA from Behat (Saharanpur) Naresh Saini, Sirsaganj (Firozabad) MLA Hari Om Yadav, and former SP MLA Dr Dharmpal Singh join BJP in presence of senior Uttar Pradesh BJP leaders in Delhi pic.twitter.com/9LWh0KPQXO

    — ANI (@ANI) January 12, 2022 " class="align-text-top noRightClick twitterSection" data=" ">

ಇಂದು ಬೆಳಗ್ಗೆ ಸಹರನ್​ಪುರ್​ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಫಿರೋಜಾಬಾದ್​ನ ಶಾಸಕ ಹರಿ ಓಂ ಯಾದವ್​ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಡಾ.ಧರ್ಮಪಾಲ್​​ ಸಿಂಗ್​ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್​ ಪಕ್ಷದ ಪ್ರಮುಖ ಮುಖಂಡರಾಗಿದ್ದ ಇಮ್ರಾನ್​ ಮಾಸೂದ್​ ಸಮಾಜವಾದಿ ಪಕ್ಷ ಸೇರಿಕೊಂಡಿದ್ದಾರೆ.

ನಿನ್ನೆ ನಡೆದ ಮಹತ್ವದ ವಿದ್ಯಮಾನದಲ್ಲಿ ಸಹಜಾನಪುರ್​ ಬಿಜೆಪಿ ಶಾಸಕರಾದ ರೋಷನ್​ ಲಾಲ್​ ವರ್ಮಾ, ಬಿಲ್ಹೌರ್​ ಕ್ಷೇತ್ರದ ಶಾಸಕ ಭಗವತಿ ಪ್ರಸಾದ್​ ಸಾಗರ್ ಮತ್ತು ತಿಂದವಾರಿ ಶಾಸಕ ಬ್ರಜೇಶ್​ ಪ್ರಜಾಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.