ETV Bharat / bharat

ಬಿಹಾರದಲ್ಲಿಂದು ಸಚಿವ ಸಂಪುಟ ವಿಸ್ತರಣೆ.. ಬಹುತೇಕ ಹಳಬರಿಗೆ ಮಣೆ ಸಾಧ್ಯತೆ - ನಿತೀಶ್ ಸಚಿವ ಸಂಪುಟ ವಿಸ್ತರಣೆ

Bihar Politics: ಇಂದು ಬೆಳಗ್ಗೆ 11:30ಕ್ಕೆ ಸಿಎಂ ನಿತೀಶ್ ಕುಮಾರ್ ಸಂಪುಟ ವಿಸ್ತರಣೆಯಾಗಲಿದೆ. ರಾಜಭವನದಲ್ಲಿ ರಾಜ್ಯಪಾಲ ಫಗು ಚೌಹಾಣ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಬಿಹಾರ ಸರ್ಕಾರದಲ್ಲಿ ಒಟ್ಟು 31 ಸಚಿವರು ಇರಲಿದ್ದಾರೆ. ಈ ಪಟ್ಟಿಯ ಪ್ರಕಾರ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಕೂಡ ಸಂಪುಟದಲ್ಲಿರಲಿದ್ದಾರೆ.

Nitish cabinet expansion in Bihar
ಬಿಹಾರದಲ್ಲಿಂದು ಸಚಿವ ಸಂಪುಟ ವಿಸ್ತರಣೆ
author img

By

Published : Aug 16, 2022, 8:49 AM IST

ಪಾಟ್ನಾ: ಬಿಹಾರದಲ್ಲಿ ಇಂದು ಬೆಳಗ್ಗೆ 11.30ಕ್ಕೆ ಸಿಎಂ ನಿತೀಶ್ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮಹಾಮೈತ್ರಿಕೂಟ ಸರ್ಕಾರದ ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಸಚಿವರ ಪಟ್ಟಿಗೆ ಅನುಮೋದನೆ ನೀಡಲಾಗಿದೆ.

ಮೂಲಗಳ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಸಲ್ಲಿಸಿದ್ದಾರೆ. ಈ ಪಟ್ಟಿಯ ಪ್ರಕಾರ ಆರ್‌ಜೆಡಿಯಿಂದ 16, ಜೆಡಿಯುನಿಂದ 8 ಮತ್ತು ಕಾಂಗ್ರೆಸ್​​ನ ಇಬ್ಬರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಲ್ಲದೇ ಶೀಲಾ ಮಂಡಲ್, ಜಯಂತ್ ರಾಜ್, ಅಶೋಕ್ ಚೌಧರಿ, ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್ ಮತ್ತು ಸ್ವತಂತ್ರ ಸುಮಿತ್ ಸಿಂಗ್ ಅವರ ಹೆಸರುಗಳೂ ಚರ್ಚೆಗೆ ಬಂದಿವೆ.

ಮಹಾಮೈತ್ರಿಕೂಟದ ಸರ್ಕಾರದಲ್ಲಿ 31 ಸಚಿವರು: ರಾಜಭವನದ ಮೂಲಗಳ ಪ್ರಕಾರ ಸಚಿವರ ಪ್ರಮಾಣ ವಚನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಬಹುತೇಕ ಹಳೆಯ ಸಚಿವರಿಗೆ ಅವಕಾಶ ನೀಡಲು ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಎರಡು-ಮೂರು ಜನರನ್ನು ಬಿಟ್ಟರೆ ಬಹುತೇಕ ಹಳಬರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗ್ತಿದೆ. ಶೀಲಾ ಮಂಡಲ್, ಜಯಂತ್ ರಾಜ್ ಮತ್ತು ಅಶೋಕ್ ಚೌಧರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವ ಸಾಧ್ಯತೆಯಿದ್ದು, ಸಂಜಯ್ ಝಾ, ವಿಜಯ್ ಚೌಧರಿ, ಶ್ರವಣ್ ಕುಮಾರ್ ಮತ್ತು ಬಿಜೇಂದ್ರ ಯಾದವ್ ಅವರು ಸಚಿವರಾಗುವ ನಿರೀಕ್ಷೆಯಿದೆ.

ಜೆಡಿಯುನಿಂದ ಸಂಭಾವ್ಯ ಸಚಿವರ ಪಟ್ಟಿ:

  • ವಿಜಯ್ ಚೌಧರಿ
  • ಬಿಜೇಂದ್ರ ಪ್ರಸಾದ್ ಯಾದವ್
  • ಶ್ರವಣ್ ಕುಮಾರ್
  • ಲೇಸಿ ಸಿಂಗ್
  • ಮದನ್ ಸಾಹ್ನಿ
  • ಸುನಿಲ್ ಕುಮಾರ್
  • ಸಂಜಯ್ ಝಾ

ಆರ್‌ಜೆಡಿಯಿಂದ ಸಂಭಾವ್ಯ ಸಚಿವರ ಪಟ್ಟಿ:

  • ತೇಜ್ ಪ್ರತಾಪ್ ಯಾದವ್
  • ಸುಧಾಕರ್ ಸಿಂಗ್
  • ಅಲೋಕ್ ಮೆಹ್ತಾ
  • ಅನಿತಾ ದೇವಿ
  • ಚಂದ್ರಶೇಖರ್ ಯಾದವ್
  • ಸುರೇಂದ್ರ ಯಾದವ್
  • ಸರ್ವಜಿತ್ ಪಾಸ್ವಾನ್
  • ಸಮೀರ್ ಮಹಾಸೇತ್
  • ಮಾಸ್ಟರ್ ಕಾರ್ತಿಕೇಯ ಸಿಂಗ್
  • ಶಹನವಾಜ್ ಆಲಂ
  • ರಾಹುಲ್ ತಿವಾರಿ
  • ಸುನಿಲ್ ಸಿಂಗ್

ಕಾಂಗ್ರೆಸ್‌ನಿಂದ ಸಂಭಾವ್ಯ ಸಚಿವರ ಹೆಸರುಗಳು

  • ಶಕೀಲ್ ಅಹಮದ್ ಖಾನ್
  • ಮುರಾರಿ ಪ್ರಸಾದ್ ಗೌತಮ್

ಬಿಹಾರದ ಮುಖ್ಯಮಂತ್ರಿಯಾಗಿ 8ನೇ ಬಾರಿ ನಿತೀಶ್ ಕುಮಾರ್ ಬುಧವಾರ(ಆ.10) ಪ್ರಮಾಣ ವಚನ ಸ್ವೀಕರಿಸಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಬಣದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಅವರು ಆರ್‌ಜೆಡಿ ಮತ್ತು ಕಾಂಗ್ರೆಸ್ ಹಾಗೂ ಇತರೆ ಸಣ್ಣ ಪುಟ್ಟ ಪಕ್ಷಗಳನ್ನು ಒಳಗೊಂಡ ಮಹಾ ಮೈತ್ರಿಕೂಟದ ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಆರ್‌ಜೆಡಿ ನಾಯಕ ಲಾಲೂ ಪುತ್ರ ತೇಜಸ್ವಿ ಯಾದವ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.