ETV Bharat / bharat

ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ 10,900 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಕೇಂದ್ರ ಅಸ್ತು - ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆ

ವಾಸ್ತವವಾಗಿ, ಕಳೆದ ನವೆಂಬರ್‌ನಲ್ಲಿ ಈ ಪ್ರಸ್ತಾಪಕ್ಕೆ ಕ್ಯಾಬಿನೆಟ್ ತನ್ನ ತಾತ್ವಿಕ ಅನುಮೋದನೆ ನೀಡಿತು. ಈವರೆಗೆ ಹತ್ತು ಕ್ಷೇತ್ರಗಳಿಗೆ 1.45 ಲಕ್ಷ ಕೋಟಿ ರೂ.ಗಳ ಮೌಲ್ಯದ ಪಿಎಲ್ಐ ಯೋಜನೆಗಳನ್ನು ಕೇಂದ್ರ ಪ್ರಕಟಿಸಿದೆ. ಕ್ಷೇತ್ರಗಳಲ್ಲಿ ವಾಹನಗಳು, ಔಷಧಗಳು ಮತ್ತು ಟೆಲಿಕಾಂ ಉಪಕರಣಗಳು ಸೇರಿವೆ..

Cabinet clears Rs 10,900 crore PLI scheme for food processing sector
ಕೇಂದ್ರ ಸಚಿವ ಪಿಯೂಷ್ ಗೋಯಲ್
author img

By

Published : Mar 31, 2021, 4:57 PM IST

ನವದೆಹಲಿ : ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂತಿಮ ಅನುಮತಿ ನೀಡಿದೆ.

ಈ ಯೋಜನೆಯಡಿ ಆಹಾರ ಸಂಸ್ಕರಣಾ ಉದ್ಯಮಕ್ಕೆ ಆರು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು. ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಈ ಯೋಜನೆಯು ಸುಮಾರು 2.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

Cabinet clears Rs 10,900 crore PLI scheme for food processing sector
ಕೇಂದ್ರ ಸಚಿವ ಪಿಯೂಷ್ ಗೋಯಲ್

ವಾಸ್ತವವಾಗಿ, ಕಳೆದ ನವೆಂಬರ್‌ನಲ್ಲಿ ಈ ಪ್ರಸ್ತಾಪಕ್ಕೆ ಕ್ಯಾಬಿನೆಟ್ ತನ್ನ ತಾತ್ವಿಕ ಅನುಮೋದನೆ ನೀಡಿತು. ಈವರೆಗೆ ಹತ್ತು ಕ್ಷೇತ್ರಗಳಿಗೆ 1.45 ಲಕ್ಷ ಕೋಟಿ ರೂ.ಗಳ ಮೌಲ್ಯದ ಪಿಎಲ್ಐ ಯೋಜನೆಗಳನ್ನು ಕೇಂದ್ರ ಪ್ರಕಟಿಸಿದೆ. ಕ್ಷೇತ್ರಗಳಲ್ಲಿ ವಾಹನಗಳು, ಔಷಧಗಳು ಮತ್ತು ಟೆಲಿಕಾಂ ಉಪಕರಣಗಳು ಸೇರಿವೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಜೆಪಿ ಕ್ಯಾಂಪೇನ್​ಗೆ ಕಾಂಗ್ರೆಸ್​ನ ನಾಯಕ ಚಿದಂಬರಂ ಸೊಸೆ ಭಾವಚಿತ್ರ ಬಳಕೆ!

ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಅಮೂಲ್ಯವಾದ ಭಾಗವನ್ನಾಗಿ ಮಾಡುವ ಆತ್ಮ ನಿರ್ಭಾರ ಭಾರತ ಅಭಿಯಾನದ ಭಾಗವಾಗಿ ಕಳೆದ ವರ್ಷ ಪಿಎಲ್ಐ ಯೋಜನೆಯನ್ನು ಪ್ರಾರಂಭಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.