ETV Bharat / bharat

ಬ್ರೆಜಿಲ್‌ನಲ್ಲಿ BPCL ನ $ 1.6 ಶತಕೋಟಿಯ ಪ್ರಸ್ತಾವಿತ ಹೂಡಿಕೆಗೆ ಅನುಮೋದನೆ: ಇದರ ಪ್ರಯೋಜನವೇನು?

BPRL ಈ ರಿಯಾಯಿತಿಯಲ್ಲಿ ಶೇಕಡಾ 40 ರಷ್ಟು ಹೂಡಿಕೆ ಮಾಡುವ ಇಚ್ಚೆಯನ್ನು ಹೊಂದಿದೆ, ಜೊತೆಗೆ ಬ್ರೆಜಿಲ್‌ನ ರಾಷ್ಟ್ರೀಯ ತೈಲ ಕಂಪನಿಯಾದ ಪೆಟ್ರೋಬ್ರಾಸ್ ಶೇ 60ರಷ್ಟು ಹೂಡಿಕೆ ಮಾಡುವ ಇಚ್ಚೆ ಹೊಂದಿದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ
author img

By

Published : Jul 28, 2022, 4:39 PM IST

ನವದೆಹಲಿ: ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA) ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ಭಾರತ್ ಪೆಟ್ರೋ ರಿಸೋರ್ಸಸ್ ಲಿಮಿಟೆಡ್ (BPRL) ನಿಂದ 1.6 ಶತಕೋಟಿ ಡಾಲರ್ ಅಥವಾ 12,000 ಕೋಟಿ ರೂಪಾಯಿಗಳ ಹೆಚ್ಚುವರಿ ಹೂಡಿಕೆಗೆ ಅನುಮೋದನೆ ನೀಡಿದೆ. ಬ್ರೆಜಿಲ್‌ನಲ್ಲಿ BM-SEAL-11 ರಿಯಾಯಿತಿ ಯೋಜನೆಯನ್ನು ಪ್ರಾರಂಭಿಸಲು ಕಂಪನಿಯು ಈ ಹೂಡಿಕೆ ಮಾಡಲಿದೆ.

ಸಿಸಿಇಎ ಸಹ ಬಿಪಿಆರ್​ಎಲ್​ ನಲ್ಲಿ ಬಿಪಿಸಿಎಲ್​ ನಿಂದ ಈಕ್ವಿಟಿ ಹೂಡಿಕೆ ಮಿತಿಯನ್ನು ಮತ್ತು ಕಂಪನಿಯ ಅಧಿಕೃತ ಷೇರು ಬಂಡವಾಳವನ್ನು 15,000 ಕೋಟಿ ರೂ.ಗಳಿಂದ 20,000 ಕೋಟಿ ರೂ.ಗಳಿಗೆ (ಕಾಲಕಾಲಕ್ಕೆ ಬಿಪಿಸಿಎಲ್​ ನಿಂದ ಚಂದಾದಾರಿಕೆ) ಹೆಚ್ಚಿಸಲು ಅನುಮೋದಿಸಿದೆ. ಈಕ್ವಿಟಿಯ ಮಿತಿಯನ್ನು ಹೆಚ್ಚಿಸಲು ಸಂಸ್ಥೆಗೆ ಅಧಿಕಾರ ನೀಡಲಾಗಿದೆ.

BM-SEAL-11 ಯೋಜನೆಯಲ್ಲಿ ಉತ್ಪಾದನೆಯು 2026-27 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಭಾರತದ ಕಚ್ಚಾ ತೈಲ ಪೂರೈಕೆಯನ್ನು ವೈವಿಧ್ಯಗೊಳಿಸಲು ಈಕ್ವಿಟಿ ತೈಲವನ್ನು ಪ್ರವೇಶಿಸಲು ಸಹಾಯ ಮಾಡಲಿದೆ. ಭಾರತೀಯ ತೈಲ ಕಂಪನಿಗಳು ಬ್ರೆಜಿಲ್‌ನಿಂದ ಹೆಚ್ಚುವರಿ ಕಚ್ಚಾ ತೈಲವನ್ನು ಪಡೆಯಲು ಆಸಕ್ತಿ ತೋರಿಸಿವೆ.

ಇದು ಭಾರತವು ಬ್ರೆಜಿಲ್‌ನಲ್ಲಿ ನೆಲೆಗೊಳ್ಳಲು ಸಹಾಯ ಮಾಡುತ್ತದೆ. ನೆರೆಯ ಲ್ಯಾಟಿನ್ ಅಮೆರಿಕನ್ ದೇಶಗಳಿಗೆ ವ್ಯಾಪಾರ ಮಾರ್ಗಗಳನ್ನು ಈ ಮೂಲಕ ತೆರೆಯುತ್ತದೆ. ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಪಿಆರ್​ಎಲ್​ ಈ ರಿಯಾಯಿತಿಯಲ್ಲಿ ಶೇಕಡಾ 40 ರಷ್ಟು ಭಾಗವಹಿಸುವ ಆಸಕ್ತಿಯನ್ನು ಹೊಂದಿದೆ. ಬ್ರೆಜಿಲ್‌ನ ರಾಷ್ಟ್ರೀಯ ತೈಲ ಕಂಪನಿಯಾದ ಪೆಟ್ರೋಬ್ರಾಸ್, ಆಪರೇಟರ್ ಆಗಿ ಕಂಪನಿಯೊಂದಿಗೆ ಶೇ 60 ಪಾಲುದಾರಿಕೆ ಆಸಕ್ತಿಯನ್ನು ಹೊಂದಿದೆ. ಬಿಪಿಆರ್​ಎಲ್ 2008 ರಿಂದ ಬ್ರೆಜಿಲ್‌ನಲ್ಲಿ ಈ ಯೋಜನೆಯನ್ನು ಅನ್ವೇಷಿಸಲು ಮತ್ತು ಅಭಿವೃದ್ಧಿಪಡಿಸಲು ಕೇಳಿಕೊಂಡಿದೆ.

ಈ ವರ್ಷದ ಏಪ್ರಿಲ್‌ನಲ್ಲಿ, ಭಾರತ ಮತ್ತು ಬ್ರೆಜಿಲ್ ಜಂಟಿ ಹೇಳಿಕೆ ನೀಡಿದ್ದವು. ಭಾರತೀಯ ಕಂಪನಿಗಳು ಬ್ರೆಜಿಲಿಯನ್ ತೈಲ ಮತ್ತು ಅನಿಲ ವಲಯದಲ್ಲಿ ದೃಢವಾದ ಹೂಡಿಕೆಯ ಪ್ರಾಮುಖ್ಯತೆಯನ್ನು ಗುರುತಿಸಿವೆ. ಅಸ್ತಿತ್ವದಲ್ಲಿರುವ ಹೂಡಿಕೆಗಳನ್ನು ರಕ್ಷಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದವು. ಹಾಗೆ ಮತ್ತಷ್ಟು ದ್ವಿಪಕ್ಷೀಯ ಹೂಡಿಕೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಭಾರತವು ದೀರ್ಘಾವಧಿಯ ವಿಶೇಷ ಒಪ್ಪಂದಗಳ ಅಡಿ ಕಚ್ಚಾ ತೈಲವನ್ನು ಪಡೆಯುವ ಆಸಕ್ತಿಯನ್ನು ವ್ಯಕ್ತಪಡಿಸಿತ್ತು.

ಬ್ರೆಜಿಲ್‌ನ ಗಣಿ ಮತ್ತು ಇಂಧನ ಸಚಿವ ಬೆಂಟೊ ಅಲ್ಬುಕರ್ಕ್ ಮತ್ತು ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ನಡುವಿನ ಸಭೆಯ ನಂತರ ಜಂಟಿ ಹೇಳಿಕೆಯನ್ನು ನೀಡಲಾಗಿತ್ತು. ಬ್ರೆಜಿಲ್ ಸಚಿವರು ಏಪ್ರಿಲ್ 19-22 ರ ನಡುವೆ ಅಧಿಕೃತ ಪ್ರವಾಸದಲ್ಲಿ ಭಾರತದಲ್ಲಿದ್ದರು.

ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.