ETV Bharat / bharat

ತೃತೀಯ ಲಿಂಗಿಯನ್ನು ಪ್ರೀತಿಸಿ ಮದುವೆಯಾದ ಯುವಕ ಬೆಲೆಬಾಳುವ ವಸ್ತುಗಳ ಸಮೇತ ಪರಾರಿ..!

ಹರಿಯಾಣದ ಪಾಣಿಪತ್ ಮೂಲದ ತೃತೀಯ ಲಿಂಗಿಯನ್ನು ಪ್ರೇಮದ ಬಲೆಗೆ ಬೀಳಿಸಿ ಮದುವೆಯಾಗಿ, ಆಕೆಯಿಂದ ಹಣ, ಚಿನ್ನಾಭರಣ ಹಾಗೂ ನಗದನ್ನು ತೆಗೆದುಕೊಂಡು ಯುಪಿ ಮೂಲದ ಯುವಕ ಪರಾರಿಯಾಗಿದ್ದಾನೆ. ಇದೀಗ ಕ್ಯಾಬ್​ ಡ್ರೈವರ್​ ಆಗಿರುವ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

author img

By

Published : Apr 15, 2023, 11:07 PM IST

Cab driver Akhilesh marries Panipat transwoman
ತೃತೀಯ ಲಿಂಗಿ ಹಾಗೂ ಕ್ಯಾಬ್ ಡ್ರೈವರ್​ ನಡುವೆ ಪ್ರೇಮ

ಪಾಣಿಪತ್ (ಹರಿಯಾಣ): ಯುವಕನು ಪಾಣಿಪತ್‌ನ ತೃತೀಯ ಲಿಂಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು. 7 ವರ್ಷಗಳ ಕಾಲ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಯುವಕ, ಹಣ ವಂಚಿಸಿ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲ, ಅಖಿಲೇಶ್ ತನ್ನ ಪ್ರೇಯಸಿ ತೃತೀಯ ಲಿಂಗಿಗೆ ತನ್ನ ಲಿಂಗವನ್ನು ಬದಲಾಯಿಸುವಂತೆ ಒತ್ತಾಯಿಸಿದನು. ಲಿಂಗ ಪರಿವರ್ತನೆ ಒಳಗಾದ ನಂತರ ಆಕೆಯನ್ನು ಅಖಿಲೇಶ್ ವಿವಾಹವಾದನು. ಅದಾದ ನಂತರ ಎಲ್ಲವೂ ಬದಲಾಯಿತು.

ವರದಕ್ಷಿಣೆ ಪಡೆದು ಪರಾರಿಯಾಗಿದ್ದ ಅಖಿಲೇಶ್: ''ಅಖಿಲೇಶ್​ಗೆ ವರದಕ್ಷಿಣೆಯಾಗಿ ಲಕ್ಷ ಲಕ್ಷ ರೂ. ನೀಡಲಾಗಿದೆ. ಈಗ ಅವನು ಆ ಹಣದೊಂದಿಗೆ ಓಡಿ ಹೋಗಿದ್ದಾನೆ. ಮದುವೆಯ ನಂತರ ಅಖಿಲೇಶ್ ತನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದರು ಎಂದು ತೃತೀಯ ಲಿಂಗಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಅಖಿಲೇಶ್ ತನ್ನನ್ನು ಹಣಕ್ಕಾಗಿ, ಐಷಾರಾಮಿ ಜೀವನಶೈಲಿಗಾಗಿ ಮತ್ತು ದುಬಾರಿ ಕಾರ್​​ಗಳನ್ನು ಖರೀದಿಸಲು ಮದುವೆಯಾಗಿದ್ದಾನೆ ಎಂದು ತೃತೀಯ ಲಿಂಗಿ ತಿಳಿುಸಿದ್ದಾರೆ.

ಯುವಕನಿಗೆ ವರದಕ್ಷಿಣೆಯಾಗಿ ನೀಡಿದ್ದೇನು?: ಯುವಕನಿಗೆ ಸುಮಾರು 2 ತೊಲೆ ಚಿನ್ನ, 5 ತೊಲೆ ಬೆಳ್ಳಿ ಹಾಗೂ 5 ಮೊಬೈಲ್‌ಗಳನ್ನು ವರದಕ್ಷಿಣೆ ಉಡುಗೊರೆಯಾಗಿ ನೀಡಲಾಗಿದೆ. ಈ ವಸ್ತುಗಳ ಹಾಗೂ ತೃತೀಯ ಲಿಂಗಿಯ ಬಳಿಯಿಂದ ಸುಮಾರು 17 ಲಕ್ಷ ರೂ. ದೋಚಿ ಆರೋಪಿ ಪರಾರಿಯಾಗಿದ್ದಾನೆ. ಇದುವರೆಗೂ ತೃತೀಯ ಲಿಂಗಿಗೆ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಸಂತ್ರಸ್ತೆಯ ಪ್ರಕಾರ, ಮಾರ್ಚ್ 2023ರಂದು ಇಬ್ಬರ ನಡುವೆ ಜಗಳವಾಗಿತ್ತು. ಇದರ ನಂತರ ಅಖಿಲೇಶ್ 13 ಏಪ್ರಿಲ್ 2023 ರಂದು ಮನೆ ಬಿಟ್ಟು ಓಡಿ ಹೋಗಿದ್ದಾನೆ.

ಪ್ರೇಮಕಥೆ ಶುರುವಾಗಿದ್ದು ಹೀಗೆ?: ಉತ್ತರ ಪ್ರದೇಶದ ನಿವಾಸಿ ಅಖಿಲೇಶ್ ಪಾಣಿಪತ್​ನಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. 2016 ರಲ್ಲಿ, ಇಬ್ಬರೂ ಕ್ಯಾಬ್ ಚಾಲಕ ಮತ್ತು ಪ್ರಯಾಣಿಕರಾಗಿದ್ದ ತೃತೀಯ ಲಿಂಗಿ ಪರಸ್ಪರ ಭೇಟಿಯಾದರು. ತೃತೀಯ ಲಿಂಗಿ ಎಲ್ಲೋ ಹೋಗಲು ಅಖಿಲೇಶ್ ಕ್ಯಾಬ್ ಬುಕ್ ಮಾಡಿದ್ದರು. ಅಂದಿನಿಂದ, ಇಬ್ಬರ ನಡುವಿನ ಮೀಟಿಂಗ್​ಗಳ ಅವಧಿ ಹೆಚ್ಚುತ್ತಲೇ ಹೋಗಿತ್ತು. ಅವರಿಬ್ಬರ ಭೇಟಿ ಬಹುಬೇಗನೇ ಪ್ರೀತಿಗೆ ತಿರುಗಿತ್ತು. ಇಬ್ಬರ ನಡುವೆ 7 ವರ್ಷಗಳ ಕಾಲ ಸಂಬಂಧ ಇತ್ತು. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.

ಯುವಕನ ಒತ್ತಡಕ್ಕೆ ಮಣಿದು ತೃತೀಯ ಲಿಂಗಿಯು ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿಕೊಂಡು ಹುಡುಗಿಯಾದಳು. ಲಿಂಗ ಪರಿವರ್ತನೆ ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದರು. ತೃತೀಯ ಲಿಂಗಿ ಜನವರಿ 2020ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 24 ಫೆಬ್ರವರಿ 2023ರಂದು ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾದರು. ಮದುವೆಯ ನಂತರ ಇಬ್ಬರೂ ಪಾಣಿಪತ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು.

ಆರೋಪಿ ಯುವಕ ವಿರುದ್ಧ ಕೇಸ್: ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಖಿಲೇಶ್ ತೃತೀಯ ಲಿಂಗಿಯನ್ನು ತೀವ್ರವಾಗಿ ಥಳಿಸಿದ್ದ. ಅಖಿಲೇಶ್ ಹಣ ಉದ್ದೇಶಕ್ಕಾಗಿಯೇ ತನ್ನನ್ನು ವಿವಾಹವಾಗಿದ್ದನು ಎಂದು ತೃತೀಯ ಲಿಂಗಿ ಆರೋಪಿಸಿದ್ದಾರೆ. ಆರೋಪಿ ಅಖಿಲೇಶ್, ತೃತೀಯ ಲಿಂಗಿಯ ಹಣ, ಚಿನ್ನಾಭರಣ ಹಾಗೂ ಕಾರ್​ ಸಮೇತ ಪರಾರಿಯಾಗಿದ್ದಾನೆ. ಆಕೆ ದಾಖಲಿಸಿದ ದೂರಿನ ಮೇರೆಗೆ ಪಾಣಿಪತ್ ಪೊಲೀಸರು ಐಪಿಸಿ ಸೆಕ್ಷನ್ 323, 506, 452 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: ಸೇತುವೆಯಿಂದ ನದಿಗೆ ಬಿದ್ದ ಟ್ರ್ಯಾಕ್ಟರ್: 21 ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.