ETV Bharat / bharat

ಡಿ. 5 ರ ಖತೌಲಿ ವಿಧಾನಸಭಾ ಉಪಚುನಾವಣೆ: ಹಾಲಿ ಶಾಸಕ ಅನರ್ಹ - ಖತಿಯುಲಿ ಅಸೆಂಬ್ಲಿ ಬೈಪೋಲ್ ಇತ್ತೀಚಿನ ಸುದ್ದಿ

ಇದೇ 2013ರ ಮುಜಾಫರ್‌ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ತಿಂಗಳು ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ದೋಷಿ ಎಂದು ಸಾಬೀತಾಗಿದೆ. ಇದೇ ಪ್ರಕರಣದ ಸಲುವಾಗಿ ಸಿಂಗ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಘೋಷಣೆಯಾಗಿದೆ.

Uttar Pradesh D. 5th Khatauli Assembly by-election: Disqualification of sitting MLAs
ಉತ್ತರಪ್ರದೇಶದ ಡಿ. 5 ರ ಖತೌಲಿ ವಿಧಾನಸಭಾ ಉಪಚುನಾವಣೆ: ಹಾಲಿ ಶಾಸಕರ ಅನರ್ಹ
author img

By

Published : Nov 8, 2022, 6:57 PM IST

Updated : Nov 8, 2022, 7:17 PM IST

ನವದೆಹಲಿ: ಉತ್ತರ ಪ್ರದೇಶದ ಖತೌಲಿ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ. 2013ರ ಸೆಪ್ಟೆಂಬರ್‌ನಲ್ಲಿ ಕೆಲವು ರಾಜಕೀಯ ನಾಯಕರು ಉದ್ರೇಕಕಾರಿ ಭಾಷಣ ಮಾಡಿದ ನಂತರ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಯಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಗಲಭೆಯಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದರು ಮತ್ತು 40,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡರು.

ಇದೇ 2013ರ ಮುಜಾಫರ್‌ನಗರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ತಿಂಗಳು ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ದೋಷಿ ಎಂದು ಸಾಬೀತಾಗಿದೆ. ಇದೇ ಪ್ರಕರಣದ ಸಲುವಾಗಿ ಸಿಂಗ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯ ಘೋಷಣೆಯಾಗಿದೆ. ಹಾಗಗಿ ಇದಕ್ಕೆ ಸಂಬಂಧಿಸಿ ಸಿಂಗ್ ಅವರನ್ನು ಶಾಸಕರಾಗಿ ಅನರ್ಹಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ವಿಧಾನಸಭೆಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಈ ಖತೌಲಿ ಉಪಚುನಾವಣೆಯು ಲೋಕಸಭೆಯ ಒಂದು ಸ್ಥಾನಕ್ಕೆ ಮತ್ತು ಐದು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತದೆ. ಜೊತೆಗೆ ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನವೂ ಡಿಸೆಂಬರ್ 5 ರಂದು ನಡೆಯಲಿದೆ ಹಾಗೆ ಖತೌಲಿ ಕ್ಷೇತ್ರದ ಮತ ಎಣಿಕೆ, ಗುಜರಾಜ್ ಮತ್ತು ಹಿಮಾಚಲ ಪ್ರದೇಶದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಕೂಡ ಡಿಸೆಂಬರ್ 8ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ:ಗುಜರಾತ್ ವಿಧಾನಸಭಾ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ : ಸಿಎಂ ಬೊಮ್ಮಾಯಿ

Last Updated : Nov 8, 2022, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.