ETV Bharat / bharat

2022 ರ ಏಪ್ರಿಲ್ ವೇಳೆಗೆ ಎಲ್ಲಾ ರಫೇಲ್​ ವಿಮಾನಗಳು ಭಾರತಕ್ಕೆ ಆಗಮನ: ರಾಜನಾಥ್ ಸಿಂಗ್ - ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಾಜ್ಯಸಭೆಯ ಈ ಅವಧಿಯ ಕೊನೆಯ ಕಲಾಪದಲ್ಲಿ ರಕ್ಷಣಾ ಸಚಿವ ರಾಝನಾಥ್​ ಸಿಂಗ್​ ಮಾತನಾಡಿದರು. ಈಗಾಗಲೇ 11 ರಫೇಲ್ ವಿಮಾನಗಳು ಭಾರತಕ್ಕೆ ಬಂದಿವೆ. ಈ ಮಾರ್ಚ್ ವೇಳೆಗೆ 17 ರಫೇಲ್ ಜೆಟ್​ಗಳನ್ನು ನಾವು ಹೊಂದಿರುತ್ತೇವೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಎಲ್ಲಾ ಅಂದರೆ 36 ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಯಲ್ಲಿರಲಿವೆ ಎಂದು ಮಾಹಿತಿ ನೀಡಿದರು.

Rajnath Singh
ರಾಜನಾಥ್ ಸಿಂಗ್
author img

By

Published : Feb 8, 2021, 11:03 AM IST

ನವದೆಹಲಿ: 2022 ರ ಏಪ್ರಿಲ್ ವೇಳೆಗೆ ಎಲ್ಲಾ ರಫೇಲ್​ ವಿಮಾನಗಳು ಫ್ರಾನ್ಸ್​ನಿಂದ ಭಾರತಕ್ಕೆ ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.

ಇಂದಿನ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ರಾಜನಾಥ್ ಸಿಂಗ್​, ಈಗಾಗಲೇ 11 ರಫೇಲ್ ವಿಮಾನಗಳು ಭಾರತಕ್ಕೆ ಬಂದಿವೆ. ಈ ಮಾರ್ಚ್ ವೇಳೆಗೆ 17 ರಫೇಲ್ ಜೆಟ್​ಗಳನ್ನು ನಾವು ಹೊಂದಿರುತ್ತೇವೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಎಲ್ಲಾ ಅಂದರೆ 36 ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಯಲ್ಲಿರಲಿವೆ ಎಂದರು.

ನಾವು ದೇಶೀಕರಣಕ್ಕೆ ಒತ್ತು ನೀಡುತ್ತಿದ್ದೇವೆ. 101 ರಕ್ಷಣಾ ಸಾಮಗ್ರಿಗಳನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ. ಬದಲಾಗಿ ನಮ್ಮ ದೇಶದಲ್ಲೇ ಭಾರತೀಯರಿಂದ ತಯಾರಿಸಿದ್ದೇವೆ ಎಂದು ರಾಜ್ಯಸಭೆಯಲ್ಲಿ ಮುಂದಿನ ದಿನಗಳಲ್ಲಿ ರಕ್ಷಣಾ ವಲಯವನ್ನು ಖಾಸಗೀಕರಣಗೊಳಿಸುವ ಯಾವುದೇ ಸಂಭವನೀಯತೆ ಇದೆಯೇ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.

ರಫೇಲ್ ಯುದ್ಧ ವಿಮಾನ

ನಾಲ್ಕು ವರ್ಷಗಳ ಹಿಂದೆ ಭಾರತವು, ಫ್ರಾನ್ಸ್‌ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಮೂರು ಬ್ಯಾಚ್​ಗಳಲ್ಲಿ ಈವರೆಗೆ ಒಟ್ಟು 11 ಜೆಟ್​ಗಳು ಬಂದಿವೆ.

ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್​ ಯುದ್ಧ ವಿಮಾನಗಳಿಗಿದೆ. 'ಏರ್​​ ಟು ಏರ್'​ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ 'ಏರ್​ ಟು ಅರ್ಥ್'​ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಶತ್ರು ಪಡೆಯ ಮೇಲೂ ಬಾಂಬ್ ಹಾಕುವ ಸಾಮರ್ಥ್ಯವನ್ನು ಈ ಯುದ್ಧ ವಿಮಾನಗಳು ಹೊಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.