ಸೂರತ್ (ಗುಜರಾತ್): ಖಾಸಗಿ ಬಸ್ ಚಾಲಕನಿಗೆ ವೈದ್ಯ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮ ಬಸ್ ಚಾಲಕನ ಕಣ್ಣಿಗೆ ತೀವ್ರ ಗಾಯವಾಗಿದೆ. ಫೆಬ್ರವರಿ 28ರಂದು ಈ ದರ್ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆ, ಅಂಕುರ್ ಮನ್ಸುಖ್ ಪ್ರಜಾಪತಿ ಎಂದು ಗುರುತಿಸಲಾದ ಆರೋಪಿ ವೈದ್ಯನ ತಾಯಿ ಅಡಾಜನ್ ಸರ್ಕಲ್‌ನಲ್ಲಿ ಬಸ್‌ನಿಂದ ಇಳಿಯಬೇಕಾಗಿತ್ತು. ಆದರೆ, ಸಂಚಾರ ದಟ್ಟಣೆ ಆಗಿದ್ದರಿಂದ ಚಾಲಕನು ಆ ಪ್ರದೇಶದಲ್ಲಿ ನಿಲ್ಲಿಸಲಿಲ್ಲ. ಅವರನ್ನು ಸ್ವಲ್ಪ ದೂರದಲ್ಲಿ ಎಂದರೆ, ಆರೋಪಿಯ ಮನೆಯಿಂದ ಕೊಂಚ ದೂರದಲ್ಲಿ ಭುಲ್ಕಾ ಭವನ ವೃತ್ತದ ಬಳಿ ಇಳಿಸಬೇಕಾಯಿತು ಎಂಬುದು ತಿಳಿದು ಬಂದಿದೆ
ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ ಆರೋಪಿಗಳು: ಘಟನೆಯ ಕುರಿತು ಮತ್ತಷ್ಟು ವಿವರಿಸಿದ ಪ್ರಕರಣದ ತನಿಖಾಧಿಕಾರಿ ಎಸ್.ಜೆ ವಾಸವ ಅವರು, ಬಸ್ ಥರಾಯ್ಡ್ನಿಂದ ಸೂರತ್‌ಗೆ ಹೋಗುತ್ತಿತ್ತು. ಆ ಸಮಯದಲ್ಲಿ ಆರೋಪಿಗಳಲ್ಲಿ ಒಬ್ಬರಾದ ಡಾ.ಅಕುನ್ ಪ್ರಜಾಪತಿಯ ತಾಯಿ ಬಸ್‌ನಲ್ಲಿದ್ದರು. ಹೆಚ್ಚಿನ ಟ್ರಾಫಿಕ್‌ನಿಂದ ಬಸ್ ಡ್ರೈವರ್ ಅವರನ್ನು ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಇಳಿಸಿದ್ದ. ಇದರಿಂದ ಕೋಪಗೊಂಡು ಆರೋಪಿ ಅಕುನ್, ಮರುದಿನ ಬಸ್ ನಿಲ್ಲಿಸಿದ್ದಾನೆ. ಅವನ ನಾಲ್ವರು ಸ್ನೇಹಿತರೊಂದಿಗೆ ಚಾಲಕನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಅವರು ತಿಳಿಸಿದರು.
ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ: ಆರೋಪಿಗಳು ಬಸ್‌ನೊಳಗೆ ನುಗ್ಗಿ ವರ್ಧಮಾನ್ ರಜಪೂತ್ ಎಂದು ಗುರುತಿಸಲಾದ ಚಾಲಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದರು. ಬಸ್ನ ಚಾಲಕನ ಕ್ಯಾಬಿನ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಳಿಯ ದೃಶ್ಯ ಸೆರೆಯಾಗಿದೆ. ನಾಲ್ವರು ಆರೋಪಿಗಳು ಚಾಲಕನ ಕ್ಯಾಬಿನ್‌ಗೆ ಪ್ರವೇಶಿಸಿದ್ದು, ಅವರಲ್ಲಿ ಒಬ್ಬ ಆರೋಪಿ ಚಾಲಕನ ಮುಖ ಮತ್ತು ಕುತ್ತಿಗೆಗೆ ಎದ್ವಾ ತದ್ವಾ ಹೊಡೆಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ: ಒಬ್ಬ ವ್ಯಕ್ತಿಗೆ ನಾಲ್ವರು ಆರೋಪಿಗಳೊಂದಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅವರಲ್ಲಿ ಒಬ್ಬರು ಮತ್ತೆ ಚಾಲಕನ ಮುಖಕ್ಕೆ ರಭಸವಾಗಿ ಹೊಡೆಯಲು ಪ್ರಾರಂಭಿಸಿದರು. ಹಲ್ಲೆಯಿಂದ ಚಾಲಕ ದಿಗ್ಭ್ರಮೆಗೊಂಡಿದ್ದಾರೆ. ಸೀಟಿನ ಮೇಲೆ ಬಿದ್ದ ಹಲ್ಲೆಗೊಳಗಾದ ಚಾಲಕನ ಕಣ್ಣಿನಿಂದ ರಕ್ತ ಸುರಿತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಚಾಲಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಎಸ್.ಜೆ. ವಾಸವ ತಿಳಿಸಿದ್ದಾರೆ.
ಕಾರು ಚಾಲಕ ಹಾಗೂ ಆಟೋ ಡ್ರೈವರ್ ನಡುವೆ ಮಾರಾಮಾರಿ: ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಕೋಸ್ಪೇಸ್ ಸಿಗ್ನಲ್ ಬಳಿ ಕಾರು ಚಾಲಕ ಹಾಗೂ ಆಟೋ ಡ್ರೈವರ್ ನಡುವೆ ರಸ್ತೆಯಲ್ಲೇ ಫೆ.8ರಂದು ಮಾರಾಮಾರಿ ನಡೆದಿತ್ತು. ಇಕೋಸ್ಪೇಸ್ ಸಿಗ್ನಲ್ ಬಳಿ ಅಕ್ಕಪಕ್ಕ ತೆರಳುತ್ತಿದ್ದ ಆಟೋ ರಿಕ್ಷಾಗೆ ಕಾರು ಸ್ವಲ್ಪ ಟಚ್ ಆಗಿತ್ತು ಎನ್ನಲಾಗಿದೆ. ಇಷ್ಟಕ್ಕೇ ಕುಪಿತಗೊಂಡ ಆಟೋ ಚಾಲಕ ವಾಹನದಿಂದ ಇಳಿದು ಪಕ್ಕದಲ್ಲಿ ತೆರಳುತ್ತಿದ್ದ ಕಾರು ಚಾಲಕನ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ.
ಸಾರ್ವಜನಿಕವಾಗಿ ಕಾರು ಚಾಲಕನ ಮೇಲೆ ಆಟೋ ಚಾಲಕ ಹಲ್ಲೆ ಮಾಡುತ್ತಿರುವ ದೃಶ್ಯ ಹಿಂಬದಿಯಲ್ಲಿ ಸಾಗುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ಟಿಟರ್ನಲ್ಲಿ ಬೆಂಗಳೂರು ಸಂಚಾರ ಪೊಲೀಸರು, ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿತ್ತು.
ಇದನ್ನೂ ಓದಿ: ಅಕ್ರಮವಾಗಿ ಮರಳು ತೆಗೆಯಲು ಹೋಗಿದ್ದ ಮೂವರು ಬಾಲಕರು ನೀರು ಪಾಲು..!