ETV Bharat / bharat

40 ಕೆಜಿ ಬರ್ಗರ್ ತಯಾರಿಸಿ ಫೇಮಸ್​ ಆದ ಬರ್ಗರ್​ ಚಾಚು... ದಾಖಲೆ ಬರೆದ ಭಾರತದ ಅತಿ ದೊಡ್ಡ ಬರ್ಗರ್ - ಈಟಿವಿ ಭಾರತ ಕನ್ನಡ

ಭಾರತದ ಅತೀ ದೊಡ್ಡ ಬರ್ಗರ್​​ 40 ಕೆಜಿಗಿಂತಲೂ ಹೆಚ್ಚು ತೂಕದ್ದಾಗಿದೆ. ಇದು ಜನರನ್ನು ಅತಿ ಹೆಚ್ಚು ಆಕರ್ಷಿಸುತ್ತಿದೆ.

burger-chachu-made-a-record-by-preparing-indias-heaviest-burger-in-hoshiarpur
40 ಕೆಜಿ ಬರ್ಗರ್ ತಯಾರಿಸಿ ಫೇಮಸ್​ ಆದ್ರು ಬರ್ಗರ್​ ಚಾಚು....ದಾಖಲೆ ಬರೆದ ಭಾರತದ ಅತಿ ದೊಡ್ಡ ಬರ್ಗರ್
author img

By

Published : Dec 12, 2022, 12:35 PM IST

Updated : Dec 12, 2022, 12:48 PM IST

ಹೋಶಿಯಾರ್‌ಪುರ (ಪಂಜಾಬ್): ಇತ್ತೀಚಿನ ಜನರು ಅನ್ನ ಸಾಂಬಾರ್​ಗಿಂತಲೂ ಫಿಜ್ಜಾ, ಬರ್ಗರ್, ನೂಡಲ್ಸ್ ಈ ತರಹದ ಆಹಾರಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾಗಿಯೇ ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಜನರನ್ನು ಆಕರ್ಷಿಸಲು ಏನಾದರೊಂದು ಹೊಸ ರೆಸಿಪಿ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲೊಬ್ಬರು ಬರ್ಗರ್​ ತಯಾರಿಸಿ ಜನರನ್ನು ಆಕರ್ಷಿಸುವುದಲ್ಲದೇ, ದಾಖಲೆಯನ್ನೇ ನಿರ್ಮಿಸಿದ್ದಾರೆ.

ಪಂಜಾಬಿನ ಹೋಶಿಯಾರ್​ಪುರದಲ್ಲಿ ಬರ್ಗರ್​ ಚಾಚು ಎಂಬವರು ಭಾರತದ ಅತಿ ದೊಡ್ಡ ಬರ್ಗರ್ ತಯಾರಿಸಿ ದಾಖಲೆ ಬರೆದಿದ್ದಾರೆ. ಈ ಬರ್ಗರ್ 40 ಕೆ.ಜಿಗಿಂತಲೂ ಹೆಚ್ಚು ತೂಕದ್ದಾಗಿದೆ. ಅವರು ಮೊದಲ ಬಾರಿಗೆ ಇಷ್ಟು ದೊಡ್ಡ ಬರ್ಗರ್​ ಅನ್ನು ತಯಾರಿಸಿದ್ದು, ಜನರನ್ನು ಆಕರ್ಷಿಸುತ್ತಿದೆ. ಇಡೀ ದಿನ ಹೋಶಿಯಾರ್​ಪುರದಲ್ಲಿ ಜನರು ಈ ಬರ್ಗರ್ ನೋಡಲೆಂದೇ ಆಗಮಿಸುತ್ತಿದ್ದಾರೆ.

40 ಕೆಜಿ ಬರ್ಗರ್ ತಯಾರಿಸಿ ಫೇಮಸ್​ ಆದರು ಬರ್ಗರ್​ ಚಾಚು

12 ಕೆಜಿಯ ಬನ್​ನಿಂದ ತಯಾರಾದ ಈ ಬರ್ಗರ್, 6ರಿಂದ 7ಕೆಜಿಯಷ್ಟು ವಿವಿಧ ಬಗೆಯ ತರಕಾರಿಗಳನ್ನು ಒಳಗೊಂಡಿದೆ. ಅಲ್ಲದೇ 6 ರಿಂದ 7 ಕೆ.ಜಿಯಷ್ಟು ಸಾಸ್ ಮತ್ತು ಒಂದು ಕೆಜಿ ಚೀಸ್ ಬಳಸಲಾಗಿದೆ. ಈ ಮೊದಲು ತಯಾರಿಸಿದ್ದ 6 ಬರ್ಗರ್​ಗಳಿಗಿಂತ ಇದು ಹೆಚ್ಚು ಯುವಜನತೆ ಆಕರ್ಷಿಸುತ್ತಿದೆ. ಮತ್ತು ತಿನ್ನಲು ತುಂಬಾ ರುಚಿಯಾಗಿದೆ ಅಂತ ಬರ್ಗರ್ ಚಾಚು ಹೇಳುತ್ತಾರೆ.

ಇದನ್ನೂ ಓದಿ:ರಂಗೋಲಿಯಲ್ಲಿ ಮೂಡಿಬಂದ ಸಾಯಿಬಾಬಾ.. ವಿಶ್ವ ದಾಖಲೆ ಬರೆದ ಪುಟ್ಟ ರಂಗೋಲಿ

Last Updated : Dec 12, 2022, 12:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.