ಔರಂಗಾಬಾದ್(ಮಹಾರಾಷ್ಟ್ರ): ದೇಶಾದ್ಯಂತ ಪ್ರತಿದಿನ ತೈಲ ಬೆಲೆ ಏರಿಕೆಯಾಗುತ್ತಿದ್ದು, ಈಗಾಗಲೇ 100ರ ಗಡಿ ದಾಟಿರುವ ಪೆಟ್ರೋಲ್ ಮತ್ತಷ್ಟು ಮುನ್ನುಗ್ಗುತ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವಘಡವೊಂದು ನಡೆದಿದೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿತ್ತು. ಎತ್ತಿನ ಬಂಡಿ ಮೇಲೆ ನಿಂತು ಕೆಲವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಅದು ಮುರಿದು ಬಿದ್ದಿರುವ ಕಾರಣ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
-
#WATCH | Maharashtra: A bullock cart, on which Congress workers and leaders were protesting in Mumbai today, collapses. They were protesting against the fuel price hike. pic.twitter.com/INqHWpNi7C
— ANI (@ANI) July 10, 2021 " class="align-text-top noRightClick twitterSection" data="
">#WATCH | Maharashtra: A bullock cart, on which Congress workers and leaders were protesting in Mumbai today, collapses. They were protesting against the fuel price hike. pic.twitter.com/INqHWpNi7C
— ANI (@ANI) July 10, 2021#WATCH | Maharashtra: A bullock cart, on which Congress workers and leaders were protesting in Mumbai today, collapses. They were protesting against the fuel price hike. pic.twitter.com/INqHWpNi7C
— ANI (@ANI) July 10, 2021
ತೈಲ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಂಡು ಬರುತ್ತಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 100ರ ಗಡಿ ದಾಟಿದ್ದು, ಡಿಸೇಲ್ ಕೂಡ 95ರ ಗಡಿ ದಾಟಿದೆ. ಹೀಗಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಇದನ್ನೂ ಓದಿರಿ: ಉತ್ತರ ಪ್ರದೇಶದಲ್ಲಿ ಹಿಂಸಾಚಾರ: ಯೋಗಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ