ನವದೆಹಲಿ: ಬುಲ್ಲಿ ಬಾಯಿ ಪ್ರಕರಣ - ಪ್ರಚಾರ ಗಿಟ್ಟಿಸಿಕೊಳ್ಳುವುದು ಮತ್ತು ತನ್ನದೇ ಆದ ಗುರುತನ್ನು ರೂಪಿಸುವುದು ಮಾಸ್ಟರ್‌ಮೈಂಡ್‌ನ ಉದ್ದೇಶವಾಗಿತ್ತು ಎಂದು ದೆಹಲಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಇಂತಹ ಚಟುವಟಿಕೆಗಳನ್ನು ಮಾಡಲು ಆರೋಪಿ ನೀರಜ್ ಬಿಷ್ಣೋಯ್ (21) ಅವರನ್ನು ಪ್ರೇರೇಪಿಸುವಲ್ಲಿ ಬೇರೆಯರು ಪಾಲ್ಗೊಂಡಿರುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಸಿಕ್ಕಿಲ್ಲ. ಹಿಂದಿನ 'ಸುಲ್ಲಿ ಡೀಲ್ಸ್' ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಸಾಧ್ಯತೆಯಿದೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಲ್ಲಿ ಡೀಲ್ಸ್ ಗೂ ಇವರ ನೆಟ್ವರ್ಕ್ ನಂಟು ಇರುವ ಸಾಧ್ಯತೆ ಇದೆ. ಅವರು ಬಳಸುತ್ತಿದ್ದ ಸಾಧನಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಅವರ ಮೂಲಕ ಸುಲ್ಲಿ ಡೀಲ್‌ಗಳ ಆರೋಪಿಗಳನ್ನು ನಾವು ಪತ್ತೆ ಹಚ್ಚಬಹುದು ಎಂದು ಅವರು ಹೇಳಿದರು.
ತನಿಖೆಯ ದಾರಿ ತಪ್ಪಿಸಲು ಯತ್ನ:
ಕುತೂಹಲಕಾರಿ ಸಂಗತಿಯೆಂದರೆ, ನೈಋತ್ಯ ಜಿಲ್ಲೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು ದೂರು ದಾಖಲಿಸಿದ್ದು, ಬಿಷ್ಣೋಯ್ ಅವರು ಪತ್ರಕರ್ತನಂತೆ ಗುರುತಿಸಿಕೊಂಡು ಸೈಬರ್ ಸೆಲ್ ಘಟಕದ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲ್ಲಿ ಡೀಲ್ಸ್ ತನಿಖೆ ವೇಳೆ ಪತ್ರಕರ್ತನ ಸೋಗು ಹಾಕಿಕೊಂಡು ವಾಟ್ಸ್ಆ್ಯಪ್ನಲ್ಲಿ ನಮ್ಮ ತಂಡಕ್ಕೆ ಕರೆ ಮಾಡಿ ದಾರಿತಪ್ಪಿಸಲು ಯತ್ನಿಸಿದ್ದರು. ಅವರು ತನಿಖೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊರತೆಗೆಯಲು ಪ್ರಯತ್ನಿಸಿದರು. ಆತನ ಫೋನ್ ದಾಖಲೆಗಳ ಮೂಲಕ ನಾವು ಇದನ್ನು ಪತ್ತೆಹಚ್ಚಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬುಲ್ಲಿ ಬಾಯಿ ಅಪ್ಲಿಕೇಶನ್‌ನ ಸೃಷ್ಟಿಕರ್ತ ಬಿಷ್ಣೋಯ್ ಅವರು ಈ ಹಿಂದೆ ಟ್ವಿಟರ್‌ನಲ್ಲಿ ದೂರುದಾರರ ಚಿತ್ರದ ಮೇಲೆ ಅಶ್ಲೀಲ ಟೀಕೆಗಳನ್ನು ಮಾಡುವ ಖಾತೆಯನ್ನು ರಚಿಸಿದ್ದರು ಮತ್ತು ವ್ಯಕ್ತಿಯ ಹರಾಜಿನ ಬಗ್ಗೆ ಟ್ವೀಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಲ್ಲಿ ಡೀಲ್ಸ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇಂತಹದ್ದೊಂದು ಖಾತೆ ಬೆಳಕಿಗೆ ಬಂದಿತ್ತು. ಈ ಹ್ಯಾಂಡಲ್ ಮೂಲಕ, ಅವರು ಸುಲ್ಲಿ ಡೀಲ್ಸ್ ಆ್ಯಪ್‌ನ ಸಂಭವನೀಯ ಪ್ರಚಾರಕರ ಬಗ್ಗೆ ಕೆಲವು ಮಾಹಿತಿಯನ್ನು ಹಂಚಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Bulli Bai App Case : ಮತ್ತೊಬ್ಬ ಆರೋಪಿ ಬಂಧನ, ಮಾಸ್ಟರ್ಮೈಂಡ್ ಶ್ವೇತಾ ಸಿಂಗ್ ಇಂದು ಕೋರ್ಟ್ಗೆ ಹಾಜರು
ವಿವಿಧ ಟ್ವಿಟರ್ ಹ್ಯಾಂಡಲ್ ರಚನೆ:
ಇಂಜಿನಿಯರಿಂಗ್ ವಿದ್ಯಾರ್ಥಿಯ ಬಂಧನದೊಂದಿಗೆ, ಗಿಟ್ಹಬ್ ಪ್ಲಾಟ್‌ಫಾರ್ಮ್‌ನಲ್ಲಿ ಬುಲ್ಲಿ ಬಾಯಿ ಆ್ಯಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಪಟ್ಟಿ ಮಾಡಲಾಗಿದ್ದ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ವಿಚಾರಣೆಯ ಸಮಯದಲ್ಲಿ, ಬಿಷ್ಣೋಯ್ ಈ ಹಿಂದೆ ಗೇಮಿಂಗ್ ಪಾತ್ರವಾದ ಗಿಯು ಎಂಬ ಆರಂಭಿಕ ಹೆಸರಿನೊಂದಿಗೆ ವಿವಿಧ ಟ್ವಿಟರ್ ಹ್ಯಾಂಡಲ್‌ಗಳನ್ನು ರಚಿಸಿದ್ದರು.
ಹ್ಯಾಂಡಲ್‌ಗಳನ್ನು @giyu2002, @giyu007, @giyuu84, @giyu94 ಮತ್ತು @giyu44 ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
@giyu2002 ಖಾತೆ ನೈಋತ್ಯ ದೆಹಲಿಯ ಕಿಶನ್‌ಗಢ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದೆ. ಈ ಸಂದರ್ಭದಲ್ಲಿ, ಈ ಟ್ವಿಟರ್ ಖಾತೆಯಿಂದ, ಅವರು ದೂರುದಾರರ ಚಿತ್ರದ ಮೇಲೆ ಅಶ್ಲೀಲ ಟೀಕೆಗಳನ್ನು ಮಾಡಿದ್ದಾರೆ ಮತ್ತು ಅದೇ ವಿಚಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ಸೈಬರ್) ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
ಈ ಸಮಯದಲ್ಲಿ, ಬಿಷ್ಣೋಯ್ ಅವರು ಹುಡುಗಿಯ ನಕಲಿ ಪ್ರೊಫೈಲ್ ಅನ್ನು ಸಹ ರಚಿಸಿದ್ದರು ಮತ್ತು ತನಿಖಾ ಸಂಸ್ಥೆಗೆ ಸುದ್ದಿ ವರದಿಗಾರರಾಗಿ ಸಂವಹನ ನಡೆಸಲು ಪ್ರಯತ್ನಿಸಿದರು. ಇದಲ್ಲದೇ, ಅವರು ವಿವಿಧ ವರದಿಗಾರರೊಂದಿಗೆ ಸಂಪರ್ಕಕ್ಕೆ ಬಂದು ತಪ್ಪು ಮಾಹಿತಿ ಬಿತ್ತಲು ಪ್ರಯತ್ನಿಸಿದ್ದರು ಎಂದು ಡಿಸಿಪಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bulli Bai App Case: ನನ್ನ ಅಕ್ಕ ನಿರಪರಾಧಿ ಎಂದ ಆರೋಪಿ ಸಹೋದರಿ!
ಭೋಪಾಲ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದುತ್ತಿರುವ ಜೋರ್ಹತ್‌ನ ನಿವಾಸಿ ಬಿಷ್ಣೋಯ್, ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲ್ಪಟ್ಟ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ಮುಂಬೈ ಪೊಲೀಸರು ಬಂಧಿಸಿರುವ ಇತರ ಮೂವರಲ್ಲಿ ಉತ್ತರಾಖಂಡದ 19 ವರ್ಷದ ಯುವತಿಯೂ ಸೇರಿದ್ದಾರೆ. ಅವರು ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಬುಲ್ಲಿ ಬಾಯಿ ಅಪ್ಲಿಕೇಶನ್ ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಡಿಸೆಂಬರ್‌ನಲ್ಲಿ ನವೀಕರಿಸಲಾಗಿದೆ. ಬಿಷ್ಣೋಯ್ ಅವರು ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ತಾನು ಗಿಟ್ಹಬ್ನಲ್ಲಿ ಬುಲ್ಲಿ ಬಾಯಿ ಅಪ್ಲಿಕೇಶನ್ ಮತ್ತು @bullibai_Twitter ಹ್ಯಾಂಡಲ್ ಮತ್ತು ಇತರರನ್ನು ಸಹ ರಚಿಸಿದ್ದೇನೆ ಎಂದು ಬಿಷ್ಣೋಯ್ ತನ್ನ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ವಿಟರ್ ಖಾತೆಯನ್ನು ಡಿ.31 ರಂದು ರಚಿಸಲಾಗಿದೆ ಎಂದು ತಿಳಿದು ಬಂದಿದೆ.