ರುದ್ರಾಪುರ: ಬುಲ್ಲಿ ಬಾಯಿ ಆಪ್ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಉತ್ತರಾಖಂಡದ ರುದ್ರಾಪುರದ ಪ್ರಮುಖ ಆರೋಪಿ ಯುವತಿಯ ಬಂಧನದ ನಂತರ ಆಕೆಯ ತಂಗಿ ಮಾಧ್ಯಮದ ಮುಂದೆ ಬಂದು, ನನ್ನ ಅಕ್ಕ ಪ್ರಕರಣದ ಸೂತ್ರಧಾರಳಲ್ಲ, ನಿರಪರಾಧಿ ಎಂದು ಹೇಳ್ತಿದ್ದಾಳೆ.
ಬುಲ್ಲಿ ಬೈ ಆಪ್ ಪ್ರಕರಣದಲ್ಲಿ ಮುಂಬೈ ಸೈಬರ್ ಪೊಲೀಸರು ಮಂಗಳವಾರ ಉತ್ತರಾಖಂಡ್ದ ರುದ್ರಪುರದಲ್ಲಿ ಯುವತಿಯನ್ನು ಬಂಧಿಸಿದ್ದರು. ನಂತರ ಮುಂಬೈ ಪೊಲೀಸರು ಯುವತಿಯ ಟ್ರಾನ್ಸಿಟ್ ರಿಮಾಂಡ್ (ಬಂಧಿತ ವ್ಯಕ್ತಿಯನ್ನು ಬೇರೆ ರಾಜ್ಯದ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯುವ ಉದ್ದೇಶದಿಂದ ನ್ಯಾಯಾಲಯದಿಂದ ಪಡೆಯುವ ಆದೇಶ) ಅನ್ನು ನ್ಯಾಯಾಲಯದಿಂದ ತೆಗೆದುಕೊಂಡು ಮುಂಬೈಗೆ ಕರೆದೊಯ್ದಿದ್ದಾರೆ.
ಇನ್ನು ಆರೋಪಿ ಯುವತಿಯ ತಂಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೆಲವೇ ತಿಂಗಳುಗಳ ಹಿಂದೆ ತನ್ನ ಸಹೋದರಿಗೆ 18 ವರ್ಷ ತುಂಬಿದೆ. 2011 ರಲ್ಲಿ ನಮ್ಮ ತಾಯಿ ಕ್ಯಾನ್ಸರ್ನಿಂದ ನಿಧನರಾದರು. ಕಳೆದ ವರ್ಷ ನಮ್ಮ ತಂದೆ ಕೂಡ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ನಮ್ಮ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಮತ್ತೊಂದು ಸಮಸ್ಯೆ ತಲೆದೋರಿದೆ ಎಂದು ಆರೋಪಿ ಬಾಲಕಿಯ ಸಹೋದರಿ ಹೇಳಿದ್ದಾರೆ.
ಅವಳು ತುಂಬಾ ಹೆದರುತ್ತಾಳೆ. ನನ್ನ ಅಕ್ಕ ಎಂದೂ ಮನೆಯಿಂದ ಹೊರಗೆ ಹೋಗಿಲ್ಲ. ಈ ಪ್ರಕರಣದಲ್ಲಿ ಆಕೆಯನ್ನು ಬಂಧಿಸಿ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳುವುದು ತಪ್ಪಾಗುತ್ತದೆ. ನನ್ನ ಅಕ್ಕಳನ್ನು ಈ ಪ್ರಕರಣದಲ್ಲಿ ಸಿಕ್ಕಿಸಲು ಪಿತೂರಿ ಮಾಡಲಾಗಿದೆ ಎಂದು ಆರೋಪಿ ಯುವತಿಯ ಕಿರಿಯ ಸಹೋದರಿ ಹೇಳಿದ್ದಾರೆ.
ಬಾಲಕಿ ಕಳೆದ ವರ್ಷ ಕೊರೊನಾ ಸೋಂಕಿನಿಂದ ತನ್ನ ತಂದೆಯನ್ನು ಕಳೆದುಕೊಂಡಳು. ಅಂದಿನಿಂದ ಆರೋಪಿ ಯುವತಿ ಖಿನ್ನತೆಗೆ ಒಳಗಾಗಿದ್ದಾಳೆ. ಬಳಿಕ ಆಕೆ ಮೊಬೈಲ್ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು. ಆದರೆ, ಇದೆಲ್ಲಾ ಆಗುತ್ತೆ ಅಂತ ಅವಳಿಗೆ ಅರಿವೇ ಇರಲಿಲ್ಲ. ತಂದೆಯ ಮರಣದ ನಂತರ ಉತ್ತರಾಖಂಡ ಸರ್ಕಾರದ ವಾತ್ಸಲ್ಯ ಯೋಜನೆಯಡಿ ಮೂರು ಸಾವಿರ ರೂಪಾಯಿ ಮತ್ತು ಕಂಪನಿಯ ಪರಿಹಾರದೊಂದಿಗೆ ಜೀವನ ನಡೆಸುತ್ತಿದ್ದೇವೆ ಎಂದು ಆರೋಪಿ ಯುವತಿಯ ಸಹೋದರಿ ಹೇಳಿದ್ದಾರೆ.
ಬುಲ್ಲಿ ಭಾಯ್ ಆ್ಯಪ್ ಪ್ರಕರಣದಲ್ಲಿ ರುದ್ರಾಪುರದ 18 ವರ್ಷದ ಯುವತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈ ವೇಳೆ ನಮ್ಮ ಅಕ್ಕನ ಬಳಿ ಒಂದೂ ಪೈಸೆಯೂ ಇರಲಿಲ್ಲ. ಆಕೆಯನ್ನು ಮುಂಬೈಗೆ ಕರೆದೊಯ್ಯುವಾಗ ಒಬ್ಬರಿಂದ ಸಾಲ ಪಡೆದು ಅಕ್ಕನಿಗೆ ನೀಡಿದ್ದೇನೆ ಎಂದು ಆರೋಪಿಯ ಸಹೋದರಿ ಹೇಳಿದ್ದಾರೆ.