ETV Bharat / bharat

ಚುನಾವಣೆ: ಅಸ್ಸೋಂ, ಬಂಗಾಳ, ತಮಿಳುನಾಡು, ಕೇರಳದಲ್ಲಿ ಬಿಜೆಪಿಗೆ ಭರವಸೆ ತಂದ ‘ಬಜೆಟ್’..! - Writer Shekhar ayyar

ಬಜೆಟ್​​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆಗಳು ಅಸ್ಸೋಂ ಮತ್ತು ಬಂಗಾಳದಲ್ಲಿ ಬಿಜೆಪಿಯ ವಿಶ್ವಾಸ ಹೆಚ್ಚಿಸುವಂತಿವೆ. ಇದರ ಜೊತೆಗೆ, ರಾಜಕೀಯವಾಗಿ ಸವಾಲಿನ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಭರವಸೆಯನ್ನು ಪುನರ್‌ ಸ್ಥಾಪಿಸುವಂತಿವೆ.

kannada
kannada
author img

By

Published : Feb 3, 2021, 3:20 PM IST

ವಿಧಾನಸಭಾ ಚುನಾವಣೆಗಳು ಕೇವಲ ಎರಡು ತಿಂಗಳು ದೂರದಲ್ಲಿದೆ ಎನ್ನುವಾಗ, ಕೇಂದ್ರ ಸರ್ಕಾರ ಇಲ್ಲಿನ ಜನರ ಮನವೊಲೈಕೆ ಮಾಡದೇ ಇರುವಂತಿಲ್ಲ. ಅದಕ್ಕೋಸ್ಕರ ನಾಲ್ಕು ಪ್ರಮುಖ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಭರಪೂರ ಕೊಡುಗೆಗಳನ್ನ ಘೋಷಿಸಿದೆ.

ಈ ಮಾತಿಗೆ ನಿದರ್ಶನ ಅನ್ನುವಂತೆ ಮತದಾನ ಎದುರಿಸಲಿರುವ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬೃಹತ್ ಮೂಲಸೌಕರ್ಯ‌ ನಿರ್ಮಾಣಕ್ಕೆ ಅನುದಾನ ನೀಡುವ ಪ್ರಸ್ತಾಪದ ಮೂಲಕ ಈ ಸಲದ ಬಜೆಟ್‌ ಅದೇ ಕೆಲಸ ಮಾಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆಗಳು ಅಸ್ಸಾಂ ಮತ್ತು ಬಂಗಾಳದಲ್ಲಿ ಬಿಜೆಪಿಯ ವಿಶ್ವಾಸವನ್ನು ಹೆಚ್ಚಿಸುವಂತಿವೆ. ಇದರ ಜೊತೆಗೆ, ರಾಜಕೀಯವಾಗಿ ಸವಾಲಿನ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಭರವಸೆಯನ್ನು ಪುನರ್‌ ಸ್ಥಾಪಿಸುವಂತಿವೆ.

ಬಜೆಟ್‌ ಕುರಿತ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, ದಕ್ಷಿಣ ಮತ್ತು ಪೂರ್ವ ರಾಜ್ಯಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ ಎಂಬ ಅಂಶದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ.

ಒಟ್ಟಾರೆಯಾಗಿ, ಚುನಾವಣಾ ವ್ಯಾಪ್ತಿಯ ನಾಲ್ಕು ರಾಜ್ಯಗಳ ಮೇಲೆ ಸೀತಾರಾಮನ್ ವಿಶೇಷ ಗಮನ ಹರಿದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಈ ರಾಜ್ಯಗಳಲ್ಲಿನ ಮೂಲಸೌಕರ್ಯ ಯೋಜನೆಗಳಿಗಾಗಿ ₹ 2,25,000 ಕೋಟಿ ಹಂಚಿಕೆಯಾಗಿದೆ. ಹೀಗೆ ಹಂಚಿಕೆ ಪಡೆದಿರುವ ರಾಜ್ಯಗಳ ಪೈಕಿ ಸೀತಾರಾಮನ್ ತಮಿಳುನಾಡಿಗೆ ಗರಿಷ್ಠ ₹ 1.03 ಲಕ್ಷ ಕೋಟಿ ಘೋಷಿಸಿದ್ದು, ಈ ಹಣವನ್ನು ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಲಾಗುವುದು.

ಮಧುರೈ-ಕೊಲ್ಲಂ ಕಾರಿಡಾರ್ ಯೋಜನೆ ಹಾಗೂ ಚಿತ್ತೂರು-ಥ್ಯಾಚೂರ್ ಕಾರಿಡಾರ್ ಸೇರಿದಂತೆ ಹಲವಾರು ಹೆದ್ದಾರಿಗಳಿಗೆ ಈ ಹಣವನ್ನು ಬಳಸಬೇಕಾಗಿದೆ. ಈ ಕಾರಿಡಾರ್‌ಗಳು ತಮಿಳುನಾಡಿನ ಜಿಲ್ಲೆಗಳನ್ನು ನೆರೆಯ ರಾಜ್ಯಗಳಾದ ಕೇರಳ ಮತ್ತು ಆಂಧ್ರಪ್ರದೇಶದೊಂದಿಗೆ ಸಂಪರ್ಕಿಸುತ್ತವೆ.

ವಿಶೇಷವೆಂದರೆ, ಎರಡು ಪಕ್ಷಗಳ ನಡುವಿನ ಸಂಬಂಧದಲ್ಲಿನ ಅನಿಶ್ಚಿತತೆಯನ್ನು ಕೊನೆಗೊಳಿಸಿದ್ದ ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ, ಕೇವಲ ಎರಡು ದಿನಗಳ ಹಿಂದೆ, ತಮ್ಮ ಪಕ್ಷವು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ ಎಂಬ ವಿಷಯವನ್ನು ದೃಢಪಡಿಸಿದ್ದರು.

ಎನ್‌ಡಿಎ ಜೊತೆಗಿನ ಮೈತ್ರಿ ವ್ಯವಸ್ಥೆಯು ರಾಜ್ಯ ಚುನಾವಣೆಗೂ ಮುಂದುವರಿಯುತ್ತದೆ ಎಂದು ಎಐಎಡಿಎಂಕೆ ಈ ಮುಂಚೆ ಹೇಳಿದ್ದರೂ ಬಿಜೆಪಿ ಈ ವಿಷಯದ ಬಗ್ಗೆ ಮೀನ-ಮೇಷ ಎಣಿಸುತ್ತಿತ್ತು. ಅದಕ್ಕೆ ಕಾರಣ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮದೇ ಪಕ್ಷ ರಚಿಸುವ ಮೂಲಕ ಚುನಾವಣಾ ಕಣಕ್ಕೆ ಇಳಿಯುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಸಾಂಕ್ರಾಮಿಕ ಮತ್ತು ತಮ್ಮ ಆರೋಗ್ಯ ಸ್ಥಿತಿಯ ಕಾರಣ ನೀಡಿದ್ದ ಅವರು ಕಣದಿಂದ ಹಿಂದೆ ಸರಿದಿದ್ದರು.

ಈಗ ಎಐಎಡಿಎಂಕೆ ಕಿರಿಯ ಮೈತ್ರಿ ಪಕ್ಷವಾಗಿ, 2021ರ ಚುನಾವಣೆಯ ನಂತರ ರಾಜ್ಯ ವಿಧಾನಸಭೆಯಲ್ಲಿ ತನ್ನ ಅಸ್ತಿತ್ವ ದಾಖಲಿಸಲಿಕ್ಕಾದರೂ ಕೆಲವು ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಯ ಆಶಯ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ದಕ್ಷಿಣದ ಬಗ್ಗೆ ಕಾಳಜಿ ವಹಿಸುತ್ತದೆ ಎಂಬುದನ್ನು ತೋರಿಸುವ ಅವಶ್ಯಕತೆಯಿತ್ತು ಎನ್ನುತ್ತಾರೆ ಬಿಜೆಪಿ ಒಳಗಿನ ವ್ಯಕ್ತಿಗಳು.

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಬಜೆಟ್ ಪ್ರಕಟಣೆಗಳಲ್ಲಿ ಸೇರಿಸಬಹುದಾದ ಬೇಡಿಕೆಗಳ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು.

ಆದ್ದರಿಂದ, ಸೀತಾರಾಮನ್ ಈ ಕೆಲವು ಬೇಡಿಕೆಗಳನ್ನು ತಮ್ಮ ಭಾಷಣದಲ್ಲಿ ಸೇರಿಸಿದ್ದು ಆಶ್ಚರ್ಯದ ಸಂಗತಿ ಏನಲ್ಲ. ಹಾಗೆ ನೋಡಿದರೆ, ಯೋಜನೆಯನ್ನು ಉದ್ಘಾಟಿಸಲೆಂದೇ ಪ್ರಧಾನಿ ಫೆಬ್ರವರಿ 14ರಂದು ತಮಿಳುನಾಡಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

2021-22ರ ಒಳಗೆ ಚೆನ್ನೈ-ಸೇಲಂ 277 ಕಿ.ಮೀ ಎಕ್ಸ್‌ಪ್ರೆಸ್‌ ಹೆದ್ದಾರಿ ಕಾರಿಡಾರ್ ನಿರ್ಮಿಸುವ ಬಗ್ಗೆ ಇಪಿಎಸ್ ತೀವ್ರ ಆಸಕ್ತಿ ವಹಿಸಿದ್ದಾರೆ. 2018 ರಲ್ಲಿ ಈ ಯೋಜನೆ ಘೋಷಿಸಿದಾಗಿನಿಂದ ರೈತರು ಇದನ್ನು ವಿರೋಧಿಸಿಕೊಂಡೇ ಬಂದಿದ್ದಾರೆ. ಆದರೆ, ಭೂಸ್ವಾಧೀನ ಅಧಿಸೂಚನೆಗಳನ್ನು 2020ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಯೋಜನೆ ಕಾರ್ಯಾರಂಭಕ್ಕೆ ಸೂಕ್ತ ವೇದಿಕೆ ಸಿದ್ಧವಾದಂತಾಗಿದೆ.

278 ಕಿ.ಮೀ. ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಸಹ ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಾರಂಭಿಸಲಾಗುವುದು ಹಾಗೂ 2021-22ರಲ್ಲಿ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ. ಅಲ್ಲದೇ ₹ 8,63,246 ಕೋಟಿ ವೆಚ್ಚದಲ್ಲಿ 118.9 ಕಿ.ಮೀ. ಉದ್ದದ ಚೆನ್ನೈ ಮೆಟ್ರೋ ರೈಲ್ವೆ ಹಂತ -2ಕ್ಕೆ ಸಹ ಕೇಂದ್ರದ ನೆರವನ್ನು ಒದಗಿಸಲಾಗುವುದು.

ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಹೆಚ್ಚುವರಿ ಆದಾಯಕ್ಕಾಗಿ “ಕಡಲಕಳೆ ಕೃಷಿಯನ್ನು ಉತ್ತೇಜನೆಗೆ”ಪ್ರಸ್ತಾಪಿಸಲಾದ ವಿವಿಧೋದ್ದೇಶ ಉದ್ಯಾನವನವನ್ನು ಕರಾವಳಿ ತಮಿಳುನಾಡು ಆಯೋಜಿಸಲಿದೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್‌ ಮತ್ತು ಪೆಟುವಾಘಾಟ್ ಜೊತೆಗೆ ಐದು ಪ್ರಮುಖ ಮೀನುಗಾರಿಕೆ ಬಂದರುಗಳಲ್ಲಿ ಚೆನ್ನೈ ಕೂಡ ಸೇರಿದೆ. ನಾಗಪಟ್ಟಣಂ ಜಿಲ್ಲೆಯ ವೆಲ್ಲಪಲ್ಲಂನಲ್ಲಿ ಮೀನುಗಾರಿಕೆ ಬಂದರಿಗೆ ಅವಕಾಶ ಕಲ್ಪಿಸುವಂತೆ ತಮಿಳುನಾಡು ಸರ್ಕಾರ ಒತ್ತಾಯಿಸಿತ್ತು.

ಪಶ್ಚಿಮ ಕರಾವಳಿಯ ಮೂಲಕ ಹಾದುಹೋಗುವ ಕೇರಳದ ಮುಂಬೈ-ಕನ್ಯಾಕುಮಾರಿ ಕಾರಿಡಾರ್‌ನ 600 ಕಿ.ಮೀ. ವಿಭಾಗದ ಮೂಲಕ ಹೆಚ್ಚುವರಿ ಮೂಲಸೌಕರ್ಯ ಸೇರ್ಪಡೆಯಿಂದಲೂ ತಮಿಳುನಾಡು ಪ್ರಯೋಜನ ಪಡೆಯಲಿದೆ.

ಕೇರಳದಲ್ಲಿ, ಹಲವಾರು ವರ್ಷಗಳಿಂದ ಬುನಾದಿ ಕೆಲಸ ಮಾಡಿದ್ದರೂ, ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ಸಲ ಚುನಾವಣೆಯ ನಂತರ ಎಡ ಅಥವಾ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಅಲ್ಲಿನ ರಾಜಕೀಯ ಬೆಳವಣಿಗೆಯಾಗಿದೆ. ಈ ಬಾರಿ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಎಡ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯನ್ನು ಹೊಂದಿದೆ.

ಅದೇನೇ ಇದ್ದರೂ, ಕೇರಳದ ಬಗ್ಗೆ ಬಿಜೆಪಿ ಹೊಂದಿರುವ ಬದ್ಧತೆ ಬಜೆಟ್‌ನಲ್ಲಿ ವ್ಯಕ್ತವಾಗಿದೆ. ಕೊಚ್ಚಿ ಮೆಟ್ರೊಗೆ ರೂ. 1,957 ಕೋಟಿ ಸಿಗಲಿದೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಜಾಲವನ್ನು ಮತ್ತೆ 11.5 ಕಿ.ಮೀ.ನಷ್ಟು ವಿಸ್ತರಿಸಲಾಗುವುದು. ಕೊಚ್ಚಿ ಸಮುದ್ರ ಬಂದರನ್ನು ಪ್ರಮುಖ ವ್ಯಾಪಾರ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು. ಅನಿವಾಸಿ ಭಾರತೀಯರಿಗೆ ₹ 5 ಕೋಟಿಯಿಂದ ₹ 10 ಕೋಟಿಯವರೆಗೆ "ದುಪ್ಪಟ್ಟು ತೆರಿಗೆ ಇಲ್ಲ" ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಈ ಕ್ರಮದಿಂದಾಗಿ ಕೇರಳದ ಮೂವತ್ತು ಲಕ್ಷ ಅನಿವಾಸಿ ಭಾರತೀಯರು ಬಿಜೆಪಿಯನ್ನು ಇಷ್ಟಪಡುವಂತಾಗಬಹುದು.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೊಗೆಯುವ ಬಗ್ಗೆ ಬಿಜೆಪಿ ಅತ್ಯಂತ ವಿಶ್ವಾಸ ಹೊಂದಿರುವ ಪಶ್ಚಿಮ ಬಂಗಾಳ ರಾಜ್ಯಕ್ಕೆ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಹಾಗೂ ಕೋಲ್ಕತ್ತಾವನ್ನು ಉತ್ತರ ಬಂಗಾಳದ ದೊಡ್ಡ ಪಟ್ಟಣವಾದ ಸಿಲಿಗುರಿಗೆ ಸಂಪರ್ಕಿಸುವ ರಸ್ತೆಗಳ ನವೀಕರಣಕ್ಕಾಗಿ ವಿತ್ತ ಸಚಿವರು ₹ 25,000 ಕೋಟಿ ಹೂಡಿಕೆಯ ಪ್ರಸ್ತಾಪ ಮಾಡಿದ್ದಾರೆ. 2019ರಲ್ಲಿ ಉತ್ತರ ಬಂಗಾಳದ ಎಂಟು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಏಳನ್ನು ಗೆದ್ದಿತ್ತು.

ಉತ್ತರ ಬಂಗಾಳದಲ್ಲಿ 675 ಕಿ.ಮೀ ರಸ್ತೆಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು ಹಾಗೂ ಪಶ್ಚಿಮ ಮಿಡ್ನಾಪೂರ್‌ ಜಿಲ್ಲೆಯ ಖರಗ್‌ಪುರ ಮತ್ತು ವಿಜಯವಾಡ ನಡುವೆ ಹಾಗೂ ಹೂಗ್ಲಿ ಜಿಲ್ಲೆಯ ಡಂಕುಣಿ ಮತ್ತು ಬಿಹಾರದ ಗೊಮೊ ನಡುವೆ ಸರಕು ಸಾಗಣೆ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು ಎಂದು ಸಹ ಸೀತಾರಾಮನ್ ಘೋಷಿಸಿದ್ದಾರೆ.

ಬಂಗಾಳ ಮತ್ತು ಅಸ್ಸಾಂನಲ್ಲಿ ಚಹಾ ಉದ್ಯಮದ ಅಭಿವೃದ್ಧಿಗೆ ₹ 1,000 ಕೋಟಿ ಪ್ಯಾಕೇಜ್ ಅನ್ನು ಸಹ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಆದರೆ, ಇಂತಹ ಬಜೆಟ್ ಪ್ರಕಟಣೆಗಳು ಬಂಗಾಳದ ಮತದಾರರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಎಂಬ ವಾದವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಳ್ಳಿಹಾಕಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿಯಾಗಿ ಹತ್ತು ವರ್ಷಗಳ ಅಧಿಕಾರ ಅನುಭವಿಸಿದ ನಂತರ ತಮ್ಮ ವೃತ್ತಿಜೀವನದ ಕಠಿಣ ಚುನಾವಣೆಗಳಲ್ಲಿ ಒಂದನ್ನು ಅವರು ಈಗ ಎದುರಿಸುತ್ತಿದ್ದಾರೆ ಎಂಬುದು ಮಾತ್ರ ನಿರ್ವಿವಾದ.

ಚುನಾವಣೆ ಎದುರಿಸಲಿರುವ ಅಸ್ಸಾಂ ರಾಜ್ಯದಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಮರಳುವ ಬಗ್ಗೆ ಬಿಜೆಪಿ ಅಪಾರ ವಿಶ್ವಾಸ ಹೊಂದಿದೆ. ಅದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 1,300 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ವಿತ್ತ ಸಚಿವೆ ಸೀತಾರಾಮನ್ ಅವರು ₹ 34,000 ಕೋಟಿ ಮೊತ್ತವನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಈಗಾಗಲೇ ಘೋಷಿಸಿರುವ ಸುಮಾರು ₹ 19,000 ಕೋಟಿ ಮೌಲ್ಯದ ಅನುದಾನಕ್ಕೆ ಇದು ಹೆಚ್ಚುವರಿಯಾಗಿರುತ್ತದೆ. ಅಸ್ಸಾಂನಲ್ಲಿ ಇಂತಹ ಹಲವಾರು ಮೂಲಸೌಕರ್ಯ ಯೋಜನೆಗಳು ಈ ವರ್ಷದ ಚುನಾವಣೆಯಲ್ಲಿ ಮತ ಯಾಚನೆಗೆ ಬಿಜೆಪಿಗೆ ಅವಕಾಶ ಕಲ್ಪಿಸಲಿವೆ.

- ಶೇಖರ್ ಅಯ್ಯರ್, ಲೇಖಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.