1. ಹಳೆಯ ತೆರಿಗೆ ಪದ್ಧತಿಯಲ್ಲಿದ್ದ 5 ಲಕ್ಷ ರೂಪಾಯಿಗಳ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿರುವುದು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2023-24 ರ ವಾರ್ಷಿಕ ಹಣಕಾಸು ಬಜೆಟ್‌ನ ಹೈಲೈಟ್ ಆಗಿದೆ. 7 ಲಕ್ಷದವರೆಗಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಹೊಸ ತೆರಿಗೆ ಪದ್ಧತಿಯ ಪ್ರಕಾರ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
2. ತಾವು ಕಟ್ಟಬೇಕಿರುವ ತೆರಿಗೆಗಿಂತ ಹೆಚ್ಚು ತೆರಿಗೆ ಕಟ್ಟಿ ಅದನ್ನು ವಾಪಸ್ ಪಡೆಯುವ ಬಗ್ಗೆ ಈ ಘೋಷಣೆ ಮಹತ್ವ ಪಡೆದುಕೊಂಡಿದೆ. ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯನ್ನು ಹೆಚ್ಚಿಸಲಾಗಿದೆ. ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಿದ ನಂತರ ಒಬ್ಬರ ಒಟ್ಟು ಆದಾಯವು 7 ಲಕ್ಷಕ್ಕಿಂತ ಕಡಿಮೆಯಿದ್ದರೆ ವೈಯಕ್ತಿಕ ತೆರಿಗೆದಾರರು ಮರುಪಾವತಿ ಪಡೆಯಬಹುದು. ಆದಾಗ್ಯೂ ಅದು 7 ಲಕ್ಷ ರೂಪಾಯಿ ಮೀರಿದರೆ, ವ್ಯಕ್ತಿಯು ಆ ನಿರ್ದಿಷ್ಟ ವರ್ಷದಲ್ಲಿ ಅನ್ವಯವಾಗುವ ಸ್ಲ್ಯಾಬ್ ದರದ ಪ್ರಕಾರ ತೆರಿಗೆಗಳನ್ನು ಪಾವತಿಸಬೇಕು.
3. ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿದಂತೆ, ಹಳೆಯ ತೆರಿಗೆ ಪದ್ಧತಿಯಲ್ಲಿದ್ದ ಆರು ಸ್ಲ್ಯಾಬ್‌ಗಳ ಬದಲಿಗೆ 2023-24ನೇ ಹಣಕಾಸು ವರ್ಷದಲ್ಲಿ ಐದು ಆದಾಯ ತೆರಿಗೆ ಸ್ಲ್ಯಾಬ್‌ಗಳಿರುತ್ತವೆ. ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಆದ್ದರಿಂದ ಮೊದಲ ಸ್ಲ್ಯಾಬ್ 3 ಲಕ್ಷದ ಮಿತಿಯಲ್ಲಿ ಅಂದರೆ 3 ಲಕ್ಷದವರೆಗಿನ ವಾರ್ಷಿಕ ಆದಾಯವನ್ನು ಹೊಂದಿರುವ ತೆರಿಗೆದಾರರು, ಯಾವುದೇ ಕಡಿತಗಳಿಲ್ಲದೆ, ತೆರಿಗೆ ಪಾವತಿಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯುತ್ತಾರೆ.
4. ಹಣಕಾಸು ವರ್ಷ 2023-24 ರಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು ಈ ಕೆಳಗಿನಂತಿವೆ:
ರೂ. 0-3L: 0% ತೆರಿಗೆ ದರ
ರೂ. 3-6L: 5% ತೆರಿಗೆ ದರ
ರೂ. 6-9L: 10% ತೆರಿಗೆ ದರ
ರೂ. 9-12L: 15% ತೆರಿಗೆ ದರ
ರೂ. 12-15₹: 20% ತೆರಿಗೆ ದರ
ರೂ. 15L ಮೇಲೆ: 30% ತೆರಿಗೆ ದರ
4. ಈ ಹೊಸ ತೆರಿಗೆ ಪದ್ಧತಿಯು ಡೀಫಾಲ್ಟ್ ತೆರಿಗೆ ಪದ್ಧತಿಯಾಗಲಿದೆ. ಆದಾಗ್ಯೂ ತೆರಿಗೆದಾರರು ಹಳೆಯ ಆದಾಯ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ಪಾವತಿಸಲು ಆಯ್ಕೆ ಮಾಡಿಕೊಳ್ಳಬಹುದು. ಆದರೆ ತೆರಿಗೆದಾರರು ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡರೆ, ಅವರು ಕೆಲ ವಿನಾಯಿತಿಗಳನ್ನು ಹೊರತುಪಡಿಸಿ ಎಲ್ಲ ವಿನಾಯಿತಿ ಮತ್ತು ಕಡಿತಗಳಿಗೆ ಅರ್ಹರಾಗಿರುವುದಿಲ್ಲ. ಹೊಸ ತೆರಿಗೆ ಪದ್ಧತಿಯಡಿಯಲ್ಲಿ, ಮತ್ತೊಂದೆಡೆ ವ್ಯಕ್ತಿಯು HRA ತೆರಿಗೆ ವಿನಾಯಿತಿ, LTA ತೆರಿಗೆ ವಿನಾಯಿತಿ, ಸೆಕ್ಷನ್ 80C ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ 1.5 ಲಕ್ಷದವರೆಗಿನ ಕಡಿತ ಸೇರಿದಂತೆ 70 ರೀತಿಯ ಕಡಿತಗಳು ಮತ್ತು ತೆರಿಗೆ ವಿನಾಯಿತಿಗಳನ್ನು ಬಿಟ್ಟು ಬಿಡಬೇಕಾಗುತ್ತದೆ.
5. ಹೊಸದಾಗಿ ಪರಿಚಯಿಸಲಾದ ತೆರಿಗೆ ಸ್ಲ್ಯಾಬ್‌ಗಳನ್ನು ವಿವರಿಸಿದ ಹಣಕಾಸು ಸಚಿವರು, ಹೊಸ ತೆರಿಗೆ ಪದ್ಧತಿಯು ಎಲ್ಲ ತೆರಿಗೆ ಪಾವತಿದಾರರಿಗೆ ಪ್ರಮುಖ ಪರಿಹಾರ ನೀಡುತ್ತದೆ ಎಂದು ಹೇಳಿದರು. 9 ಲಕ್ಷ ರೂ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿ ಕೇವಲ 45,000 ರೂ ಪಾವತಿಸಬೇಕಾಗುತ್ತದೆ. ಇದು ಅವನ ಅಥವಾ ಅವಳ ಆದಾಯದ ಕೇವಲ 5 ಪ್ರತಿಶತದಷ್ಟು ಮಾತ್ರ. ಅವನು ಅಥವಾ ಅವಳು ಈವರೆಗೆ ಪಾವತಿಸುತ್ತಿದ್ದ ತೆರಿಗೆಯ ಮೇಲೆ 25 ಪ್ರತಿಶತದಷ್ಟು ಕಡಿತವಾಗಿದೆ. ಈ ಹಿಂದೆ ರೂ. 60,000 ಆಗಿತ್ತು. ಅದೇ ರೀತಿ ರೂ. 15 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಕೇವಲ 1.5 ಲಕ್ಷ ಅಥವಾ ಆದಾಯದ 10 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ. ಇದು ಈ ಹಿಂದೆ ಪಾವತಿಸುತ್ತಿದ್ದ ರೂ 1,87,500 ಗೆ ಹೋಲಿಸಿದರೆ 20 ಪ್ರತಿಶತದಷ್ಟು ಕಡಿಮೆಯಾಗಿದೆ.
6. ಹೊಸ ತೆರಿಗೆ ಪದ್ಧತಿಯಲ್ಲಿ ಸರ್ಚಾರ್ಜ್ ದರವನ್ನು ಶೇಕಡಾ 37 ರಿಂದ 25 ಕ್ಕೆ ಇಳಿಸಲಾಗಿದೆ. ಇದರಿಂದ ಗರಿಷ್ಠ ತೆರಿಗೆ ದರವು ಶೇಕಡಾ 39 ಕ್ಕೆ ಇಳಿಕೆಯಾಗಿದೆ. ಅಲ್ಲದೆ ರಜೆ ಎನ್‌ಕ್ಯಾಶ್‌ಮೆಂಟ್ ಮೇಲಿನ ತೆರಿಗೆ ವಿನಾಯಿತಿಯನ್ನು ರೂ 2.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದರು.
ಇದನ್ನೂ ಓದಿ: ಬಜೆಟ್‌ನ ಒಟ್ಟು ಗಾತ್ರ ಗೊತ್ತೇ?: ದೇಶದ ವಿತ್ತೀಯ ಕೊರತೆಯೇನು? ಯಾವುದಕ್ಕೆ ಎಷ್ಟು ಖರ್ಚು?