ETV Bharat / bharat

ಫಲಿತಾಂಶ ಕೇಳಿ BSP ಕಾರ್ಯಕರ್ತನಿಗೆ ಹೃದಯಾಘಾತ..ಮತ ಎಣಿಕೆ ಕೇಂದ್ರದಲ್ಲೇ ಘಟನೆ - ಉತ್ತರ ಪ್ರದೇಶ ಚುನಾವಣೆ

ಮತ ಕೇಂದ್ರದಲ್ಲಿ ಫಲಿತಾಂಶ ಕೇಳುತ್ತಿದ್ದಂತೆ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬನಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

BSP WORKER HEART ATTACK IN GHAZIABAD
BSP WORKER HEART ATTACK IN GHAZIABAD
author img

By

Published : Mar 10, 2022, 12:55 PM IST

ಗಾಜಿಯಾಬಾದ್​(ಉತ್ತರ ಪ್ರದೇಶ): 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಉತ್ತರ ಪ್ರದೇಶದಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತಗೊಂಡಿದೆ. ಇದರ ಮಧ್ಯೆ ಗಾಜಿಯಾಬಾದ್​​​ ನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಫಲಿತಾಂಶ ಕೇಳಿ ಬಿಎಸ್​ಪಿ ಕಾರ್ಯಕರ್ತನಿಗೆ ಹೃದಯಾಘಾತವಾಗಿದೆ. ಮತ ಎಣಿಕೆ ವೇಳೆ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತನಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಫಲಿತಾಂಶ ಕೇಳಿ BSP ಕಾರ್ಯಕರ್ತನಿಗೆ ಹೃದಯಾಘಾತ... ಮತ ಎಣಿಕೆ ಕೇಂದ್ರದಲ್ಲೇ ಘಟನೆ

ಇದನ್ನೂ ಓದಿರಿ: ಉತ್ತರ ಪ್ರದೇಶದಲ್ಲಿ ಯೋಗಿ ಮೋಡಿ.. ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಗಾಜಿಯಾಬಾದ್​ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಎಸ್​ಪಿ ಅಭ್ಯರ್ಥಿಯಾಗಿ ಕೆಕೆ ಶುಕ್ಲಾ ಕಣಕ್ಕಿಳಿದಿದ್ದು, ಅವರ ಪರವಾಗಿ ಮತಕೇಂದ್ರಕ್ಕೆ ಅಂಕಿತ್ ಯಾದವ್​ ಆಗಮಿಸಿದ್ದರು. ಫಲಿತಾಂಶ ಕೇಳುತ್ತಿದ್ದಂತೆ ಅವರಿಗೆ ಹೃದಯಾಘಾತವಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಇದರ ಬೆನ್ನಲ್ಲೇ ಇತರ ಕಾರ್ಯಕರ್ತರು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

403 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಬಿಜೆಪಿ 264 ಸ್ಥಾನಗಳಲ್ಲಿ ಮುನ್ನಡೆಯಲಿದ್ದು, ಸಮಾಜವಾದಿ ಪಕ್ಷ 128 ಹಾಗೂ ಬಿಎಸ್​ಪಿ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.