ETV Bharat / bharat

ರಾಷ್ಟ್ರಪತಿ ಚುನಾವಣೆ: ಎನ್​ಡಿಎ ಅಭ್ಯರ್ಥಿ ಮುರ್ಮು ಬೆಂಬಲಿಸಿದ ಮಾಯಾವತಿ - ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ನಮಗೆ ಆಹ್ವಾನಿಸಿರಲಿಲ್ಲ. ಇದು ಅವರ ಜಾತಿವಾದವನ್ನು ತೋರಿಸುತ್ತದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.

bsp-chief-mayawati-backs-ndas-presidential-candidate-murmu
ಎನ್​ಡಿಎ ಅಭ್ಯರ್ಥಿ ಮುರ್ಮು ಬೆಂಬಲಿಸಿದ ಮಾಯಾವತಿ
author img

By

Published : Jun 25, 2022, 3:12 PM IST

ಲಖನೌ(ಉತ್ತರ ಪ್ರದೇಶ): ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಬೆಂಬಲಿಸಿದೆ. ಈ ನಿರ್ಧಾರವನ್ನು ಬಿಜೆಪಿ ಅಥವಾ ಎನ್‌ಡಿಎ ಬೆಂಬಲಿಸಿಯೋ ಅಥವಾ ವಿರೋಧದ ಕಾರಣಕ್ಕೋ ತೆಗೆದುಕೊಂಡಿಲ್ಲ. ಪಕ್ಷ ಮತ್ತು ಪಕ್ಷದ ಚಳವಳಿ ಗಮನದಲ್ಲಿಟ್ಟುಕೊಂಡೇ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ಲಖನೌದಲ್ಲಿಂದು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಎನ್‌ಡಿಎಯ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದರು. ಇದೇ ವೇಳೆ ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಭೆಗೆ ನಮಗೆ ಆಹ್ವಾನಿಸಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಟಿಎಂಸಿ ನಾಯಕಿಯಾದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜೂನ್ 15ರಂದು ಕರೆದ ಸಭೆಗೆ ಆಯ್ದ ಪಕ್ಷಗಳಿಗೆ ಮಾತ್ರ ಆಹ್ವಾನಿಸಿದ್ದರು. ಅಲ್ಲದೇ, ಜೂನ್ 21ರಂದು ಎನ್​ಸಿಪಿ ವರಿಷ್ಠ ಶರದ್ ಪವಾರ್ ಸಭೆ ಕರೆದಾಗಲೂ ಬಿಎಸ್​ಪಿಗೆ ಆಹ್ವಾನ ನೀಡಿರಲಿಲ್ಲ. ಇದು ಅವರ ಜಾತಿವಾದವನ್ನು ತೋರಿಸುತ್ತದೆ ಎಂದು ಆರೋಪಿಸಿದ್ಧಾರೆ.

ಮುರ್ಮು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ಶರದ್ ಪವಾರ್​​ಗೆ ಕರೆ ಮಾಡಿ ಬೆಂಬಲ ಕೋರಿದ್ದರು. ಇತ್ತ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಎನ್‌ಡಿಎ ಅಭ್ಯರ್ಥಿಯನ್ನು ಅವಿರೋಧ ಆಯ್ಕೆ ಮಾಡುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ಹೆಚ್‌.ಡಿ. ದೇವೇಗೌಡರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಿವೆ.

ಇದನ್ನೂ ಓದಿ: ಶಿಂದೆ ಬಣದ 'ಆ' ಒಂದು ತಪ್ಪಿನಿಂದ ಬಚಾವಾಗುತ್ತಾ ಉದ್ಧವ್ ಸರ್ಕಾರ..?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.