ETV Bharat / bharat

ದೇಶಾದ್ಯಂತ ಬಿಎಸ್​ಎನ್​ಎಲ್ 4 ಜಿ ಸೇವೆ : 1.12 ಲಕ್ಷ ಟವರ್ ಅಳವಡಿಕೆಗೆ ಯೋಜನೆ ಸಿದ್ಧ

ಕೆಲವೇ ತಿಂಗಳಲ್ಲಿ ಅದು ಸಿದ್ಧವಾಗಲಿದೆ ಎಂದಿದ್ದಾರೆ. ರೈಲಿನೊಳಗೆ 4ಜಿ ನೆಟ್​ವರ್ಕ್​ ಸಂಪರ್ಕ ಕಲ್ಪಿಸುವ ಕುರಿತು ಪ್ರಶ್ನಿಸಿದಾಗ, 'ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ರೈಲುಗಳಲ್ಲಿ 4ಜಿ ನೆಟ್​ವರ್ಕ್​ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಸಂಪರ್ಕ ಕಡಿತಗೊಳ್ಳುತ್ತದೆ. 5ಜಿ ನೆಟ್‌ವರ್ಕ್ ಅಳವಡಿಸಿದರೆ ಮಾತ್ರ ರೈಲುಗಳಲ್ಲಿ ಇಂಟರ್ನೆಟ್ ಸಂಪರ್ಕ ಸಾಧ್ಯ ಎಂದಿದ್ದಾರೆ..

author img

By

Published : Apr 6, 2022, 4:10 PM IST

Bsnl
ಬಿಎಸ್​ಎನ್​ಎಲ್

ದೆಹಲಿ : ದೇಶಾದ್ಯಂತ 4G ಟೆಲಿಕಾಂ ನೆಟ್​ವರ್ಕ್​ ಸೇವೆ ನೀಡಲು ಬಿಎಸ್​ಎನ್​ಎಲ್ ಮುಂದಾಗಿದೆ. ಸುಮಾರು 1.12 ಲಕ್ಷ ಟವರ್​ಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್​ ಲೋಕಸಭೆಯಲ್ಲಿ ಹೇಳಿದ್ದಾರೆ.​'ಶೀಘ್ರದಲ್ಲೇ ಬಿಎಸ್​ಎಲ್​ಎಲ್​ 4G ಟೆಲಿಕಾಂ ನೆಟ್‌ವರ್ಕ್ ಹೊರತರಲು ಸಿದ್ಧವಾಗಿದೆ ಎಂಬುದನ್ನು ಹೇಳಲು ನನಗೆ ಸಂತೋಷವಾಗುತ್ತಿದೆ. ದೇಶದ ಇಂಜಿನಿಯರ್​ಗಳು ಹಾಗೂ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿದ್ದಾರೆ.

ದೇಶವು 4G ನೆಟ್‌ವರ್ಕ್‌ ಅಬಿವೃದ್ದಿಪಡಿಸಿರುವುದನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗುತ್ತಿದೆ. ಇದು ಸಂಪೂರ್ಣ ಕೋರ್ ನೆಟ್‌ವರ್ಕ್, ರೇಡಿಯೊ ನೆಟ್‌ವರ್ಕ್ ಅನ್ನು ಹೊಂದಿದೆ' ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ಹೇಳಿದರು. ಬಿಎಸ್​ಎನ್​ಎಲ್​ ತಕ್ಷಣವೇ 6,000 ಟವರ್‌ಗಳನ್ನು ಆರ್ಡರ್ ಮಾಡುವ ಪ್ರಕ್ರಿಯೆಯಲ್ಲಿದೆ.

ನಂತರ 6,000ಕ್ಕೂ ಹೆಚ್ಚು ಮತ್ತು ಅಂತಿಮವಾಗಿ 1 ಲಕ್ಷ ಟವರ್​ಗಳನ್ನು ದೇಶಾದ್ಯಂತ ಸ್ಥಾಪಿಸಲು ಮುಂದಾಗಲಿದೆ. ಇದರ ಜೊತೆಗೆ 5ಜಿ ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಿದೆ. ಕೆಲವೇ ತಿಂಗಳಲ್ಲಿ ಅದು ಸಿದ್ಧವಾಗಲಿದೆ ಎಂದಿದ್ದಾರೆ. ರೈಲಿನೊಳಗೆ 4ಜಿ ನೆಟ್​ವರ್ಕ್​ ಸಂಪರ್ಕ ಕಲ್ಪಿಸುವ ಕುರಿತು ಪ್ರಶ್ನಿಸಿದಾಗ, 'ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ರೈಲುಗಳಲ್ಲಿ 4ಜಿ ನೆಟ್​ವರ್ಕ್​ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಸಂಪರ್ಕ ಕಡಿತಗೊಳ್ಳುತ್ತದೆ. 5ಜಿ ನೆಟ್‌ವರ್ಕ್ ಅಳವಡಿಸಿದರೆ ಮಾತ್ರ ರೈಲುಗಳಲ್ಲಿ ಇಂಟರ್ನೆಟ್ ಸಂಪರ್ಕ ಸಾಧ್ಯ ಎಂದಿದ್ದಾರೆ.

ಓದಿ: ಡ್ರಾಪ್ಡ್​ ಹೆಡ್ ಸಿಂಡ್ರೋಮ್ ಕಾಯಿಲೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.