ಜೈಸಲ್ಮೇರ್: ಭಾರತದ ಗಡಿ ಭದ್ರತಾ ಪಡೆಯ ಮಹಿಳಾ ಸೈನಿಕರು ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದರು. ಪಾಕಿಸ್ತಾನದ ಗಡಿಯಲ್ಲಿರುವ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸೈನಿಕರು ಯೋಗ ಪ್ರದರ್ಶನ ನೀಡಿದರು.
ಮಹಿಳಾ ಸೇನೆಯು ಥಾರ್ ಮರುಭೂಮಿಯಲ್ಲಿ ಮಾಡಿದ ಯೋಗ ಮತ್ತು ಪ್ರಾಣಾಯಾಮ ಎಲ್ಲರ ಗಮನ ಸೆಳೆದಿದೆ. ಯೋಗ ಮಾಡಿದರೆ ದೇಹ ಮತ್ತು ಮನಸ್ಸು ಸದೃಢವಾಗುವುದರ ಜತೆಗೆ ಆರೋಗ್ಯವಾಗಿರುತ್ತದೆ. ಎಲ್ಲರೂ ಯೋಗ ಮಾಡಿ ಎಂದು ಸೈನಿಕರು ಕರೆ ನೀಡಿದರು.
ಇದನ್ನೂ ಓದಿ:Yoga Day: ತಲೆ ಕೆಳಗಾಗಿ ದೇಗುಲ ಸುತ್ತಿದ ಸಂತೋಷ್ ತ್ರಿವೇದಿ..!
ಥಾರ್ ಮರುಭೂಮಿ ಬೇಸಿಗೆಯಲ್ಲಿ 50 ಡಿಗ್ರಿ ತಾಪಮಾನವಿದ್ದರೆ, ಚಳಿಗಾಲದಲ್ಲಿ ಮೈನಸ್‌ಗೆ ಇಳಿಯುತ್ತದೆ.