ಮಲ್ಕನ್ಗಿರಿ(ಒಡಿಶಾ): ನೆಲದಲ್ಲಿ ಹುದುಗಿಸಿದ್ದ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಒಡಿಶಾದ ಮಲ್ಕನ್ಗಿರಿ ಪೊಲೀಸರು ಮತ್ತು ಗಡಿ ಭದ್ರತಾ ಪಡೆಯ ಯೋಧರು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಭದ್ರತಾ ಪಡೆಯ ವಿರುದ್ಧ ನಕ್ಸಲರು ರೂಪಿಸಿದ್ದ ಬಹುದೊಡ್ಡ ಸಂಚನ್ನು ವಿಫಲಗೊಳಿಸಿದ್ದಾರೆ.
ಒಡಿಶಾ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಸ್ವಾಭಿಮಾನ್ ಅಂಚಲ್ ಎಂಬ ಪ್ರದೇಶದಲ್ಲಿ ಸುಧಾರಿತ ಸ್ಫೋಟಕಗಳನ್ನು ಹೊರ ತೆಗೆಯಲಾಗಿದೆ ಎಂದು ಗಡಿ ಭದ್ರತಾ ಪಡೆಯ ಒಡಿಶಾ ವಿಭಾಗ ಟ್ವೀಟ್ ಮಾಡಿದೆ.
-
In a Joint Operation with Malkangiri Police, BSF unearthed two IEDs deep inside Swabhimaan Anchal, foiling a nefarious design against the Security Forces.@BSF_India@BSF_ADG_ANO@DGPOdisha@ANI pic.twitter.com/8ZmblJ5BkS
— BSF_ODISHA (@BSFODISHA) June 21, 2021 " class="align-text-top noRightClick twitterSection" data="
">In a Joint Operation with Malkangiri Police, BSF unearthed two IEDs deep inside Swabhimaan Anchal, foiling a nefarious design against the Security Forces.@BSF_India@BSF_ADG_ANO@DGPOdisha@ANI pic.twitter.com/8ZmblJ5BkS
— BSF_ODISHA (@BSFODISHA) June 21, 2021In a Joint Operation with Malkangiri Police, BSF unearthed two IEDs deep inside Swabhimaan Anchal, foiling a nefarious design against the Security Forces.@BSF_India@BSF_ADG_ANO@DGPOdisha@ANI pic.twitter.com/8ZmblJ5BkS
— BSF_ODISHA (@BSFODISHA) June 21, 2021
ಇದೇ ತಿಂಗಳ ಆರಂಭದಲ್ಲಿ ಮಲ್ಕನ್ಗಿರಿ ಜಿಲ್ಲೆಯ ಮಂಡಪಲ್ಲಿ ಏರಿಯಾದಲ್ಲಿ ಒಡಿಶಾ ಪೊಲೀಸರು ಮತ್ತು ಗಡಿ ಭದ್ರತಾ ಪಡೆಯ ಯೋಧರು ಟಿಫಿನ್ಸ್ ಬಾಕ್ಸ್ನ ಸುಧಾರಿತ ಸ್ಪೋಟಕಗಳನ್ನು ಜಪ್ತಿ ಮಾಡಿದ್ದರು.
ಇದನ್ನೂ ಓದಿ: 3 ತಿಂಗಳ ಬಳಿಕ ದೇಶದಲ್ಲಿ ಅತಿ ಕಡಿಮೆ ಕೋವಿಡ್ ಕೇಸ್ ಪತ್ತೆ
ಇನ್ನು ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ಜೂನ್ 20ರಂದು ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ್ದು, ಹಲವು ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಿದ್ದರು.