ಫಿರೋಜ್‌ಪುರ್ (ಪಂಜಾಬ್) : ಇಲ್ಲಿನ ಫಿರೋಜ್‌ಪುರ್ ಗಡಿ ಪ್ರದೇಶದಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಬಿಎಸ್ಎಫ್ ಪಡೆ ತಡರಾತ್ರಿ ಹೊಡೆದುರುಳಿಸಿದೆ. ಈ ಹೆಕ್ಸಾಕಾಪ್ಟರ್ ಪಾಕ್ ಕಡೆಯಿಂದ ಭಾರತ ಗಡಿ ದಾಟುತಿತ್ತು ಎಂದು ವರದಿಯಾಗಿದೆ.
ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ತಿಂಗಳ ಆರಂಭದಲ್ಲಿ ಸಹ ಇದೇ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸಿದ್ದ ಘಟನೆ ನಡೆದಿತ್ತು.
ಆದರೆ, ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಡ್ರೋನ್ ಒಂದನ್ನು ಹೊಡೆದುರುಳಿಸಲಾಗಿದೆ. ಈ ಡ್ರೋನ್ನಲ್ಲಿ ಮೇಡ್ ಇನ್ ಚೀನಾ ಎಂದು ನಮೂದಿಸಿರುವುದು ಸಹ ಪತ್ತೆಯಾಗಿದೆ.
ಇದನ್ನೂ ಓದಿ: ಹುತಾತ್ಮ ಜವಾನನ ಸಹೋದರಿ ಮದುವೆಯಲ್ಲಿ ಯೋಧರು ಭಾಗಿ: ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ ಭೂಮಿ ಪುತ್ರರು!