ETV Bharat / bharat

ಹೆರಾಯಿನ್​ ಸಾಗಿಸುತ್ತಿದ್ದ ಪಾಕ್​ ವ್ಯಕ್ತಿಗೆ ಸೇನೆ ಗುಂಡೇಟು.. 8 ಕೆಜಿ ಮಾದಕವಸ್ತು ವಶ - ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆ

ಪಾಕಿಸ್ತಾನದಿಂದ ಹೆರಾಯಿನ್​ ಕಳ್ಳಸಾಗಣೆ ಮಾಡುತ್ತಿದ್ದಾಗ ಬಿಎಸ್​ಎಫ್​ ಯೋಧರು ಗುಂಡಿನ ದಾಳಿ ಮಾಡಿದ ಘಟನೆ ಪಂಜಾಬ್​ನ ಸಾಂಬಾದಲ್ಲಿ ನಡೆದಿದೆ.

narcotics-recovered
ಹೆರಾಯಿನ್​ ಸಾಗಿಸುತ್ತಿದ್ದ ಪಾಕ್​ ವ್ಯಕ್ತಿಗೆ ಸೇನೆ ಗುಂಡೇಟು
author img

By

Published : Aug 25, 2022, 9:43 AM IST

ಜಮ್ಮು ಕಾಶ್ಮೀರ: ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ಒಂದಲ್ಲ ಒಂದು ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಮದ್ದು, ಗುಂಡು ಬಂದೂಕುಗಳನ್ನು ಸಾಗಣೆ ಮಾಡುತ್ತಿದ್ದ ಪಾಕಿಸ್ತಾನಿಗಳು ಈಗ ಡ್ರಗ್ಸ್​ ವ್ಯವಹಾರಕ್ಕೂ ಕೈ ಹಾಕಿದ್ದಾರೆ. ಇಂದು ಬೆಳಗ್ಗೆ ಗಡಿಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದವನ ಮೇಲೆ ಸೇನೆ ಗುಂಡು ಹಾರಿಸಿದೆ. ಈ ವೇಳೆ 8 ಕೆಜಿ ಹೆರಾಯಿನ್​ ಸಿಕ್ಕಿದೆ.

ಜಮ್ಮು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಗಡಿ ಭದ್ರತಾ ಪಡೆ ಯೋಧರು ದಾಳಿ ನಡೆಸಿದ್ದಾರೆ. ಗಡಿ ದಾಟಿ ಬರುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆತ ಮತ್ತೆ ಪಾಕಿಸ್ತಾನದ ಕಡೆಗೆ ಓಡಿ ಹೋಗಿದ್ದಾನೆ.

ಹೆರಾಯಿನ್​ ಸಾಗಿಸುತ್ತಿದ್ದ ಪಾಕ್​ ವ್ಯಕ್ತಿಗೆ ಸೇನೆ ಗುಂಡೇಟು
ಹೆರಾಯಿನ್​ ಸಾಗಿಸುತ್ತಿದ್ದ ಪಾಕ್​ ವ್ಯಕ್ತಿಗೆ ಸೇನೆ ಗುಂಡೇಟು

ಕಳ್ಳಸಾಗಣೆ ಮಾಡುತ್ತಿದ್ದ 8 ಪ್ಯಾಕೆಟ್​ಗಳ ಹೆರಾಯಿನ್​ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಯೋಧರು ಇದನ್ನು ವಶಕ್ಕೆ ಪಡೆದಿದ್ದಾರೆ. ಪಾಕಿಸ್ತಾನಿ ವ್ಯಕ್ತಿ ಗುಂಡೇಟಿಗೆ ಗಾಯಗೊಂಡಿರುವುದು ರಕ್ತ ಕಲೆಗಳಿಂದ ಕಂಡು ಬಂದಿವೆ.

ಓದಿ: ಭಾರತದ ಮೇಲೆ ದಾಳಿ ಮಾಡಲು ಪಾಕ್​ ಸೇನೆ ಹಣ ನೀಡಿದೆ ಎಂದ ಭಯೋತ್ಪಾದಕ.. ರಕ್ತ ಹರಿಸಲು ಬಂದ ಉಗ್ರನ ಜೀವ ಉಳಿಸಿದ ಸೇನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.