ಅಹ್ಮದ್ನಗರ(ಮಹಾರಾಷ್ಟ್ರ) : ಜಿಲ್ಲೆಯ ಪ್ರಕಾಶ್ ಕೇಲ್ ಎಂಬ ಬಿಎಸ್ಎಫ್ ಯೋಧನನ್ನು ಹನಿ ಟ್ರ್ಯಾಪ್ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಅವರು ಪಂಜಾಬ್‌ನ ಇಂಡೋ - ಪಾಕ್ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ರು. ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಮುಸ್ಲಿಂ ಮಹಿಳೆಯರ ಸಂಪರ್ಕ ಹೊಂದಿದ್ದರು. ತದನಂತರ ಪ್ರಕಾಶ್ ಆಕೆಯನ್ನು ತನ್ನ ವಾಟ್ಸ್ಆ್ಯಪ್ ಗ್ರೂಪ್ಗೆ ಆ್ಯಡ್ ಮಾಡಿದ್ದರು.
ಈ ವಾಟ್ಸ್ಆ್ಯಪ್ ಗುಂಪಿನಲ್ಲಿದ್ದ ಬೇರೆ ಯೋಧರು ಕರ್ತವ್ಯ ಸಂಬಂಧದ ಕೆಲವು ಮಾಹಿತಿಯನ್ನು ಗ್ರೂಪ್ನಲ್ಲಿ ಶೇರ್ ಮಾಡ್ತಿದ್ರು. ಇದನ್ನು ಕಂಡ ನಂತರ ಆ ಪಾಕಿಸ್ತಾನಿ ಮಹಿಳೆ ಪಾಕ್ ಪರ ಏಜೆಂಟ್ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದಳು. ಈ ಹಿನ್ನೆಲೆ ಹನಿಟ್ರ್ಯಾಪ್ಗೆ ಒಳಗಾದ ಸೈನಿಕ ಪ್ರಕಾಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಈತನನ್ನು ನವೆಂಬರ್ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.