ETV Bharat / bharat

ಭಾರತ ಪಾಕಿಸ್ತಾನ ಗಡಿ ಬಳಿ ಮಾದಕವಸ್ತು ಕಳ್ಳ ಸಾಗಣೆ:ಶಂಕಿತ ಮೂವರನ್ನು ಬಂಧಿಸಿದ ಬಿಎಸ್​ಎಫ್​ - 30 ಕೋಟಿ ಮೌಲ್ಯದ ಹೆರಾಯಿನ್

ಭಾರತ ಪಾಕಿಸ್ತಾನ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ-ಶಂಕಿತ ಮೂವರು ಆರೋಪಿಗಳನ್ನು ಬಂಧಿಸಿದ ಬಿಎಸ್​ಎಫ್ ಪಡೆ- ಆರೋಪಿಗಳ ವಿರುದ್ಧ ಮುಂದುವರಿದ ತನಿಖೆ

BSF arrested suspected smuggler
ಕಳ್ಳ ಸಾಗಣೆ ಶಂಕಿತ ಮೂವರನ್ನು ಬಂಧಿಸಿದ ಬಿಎಸ್​ಎಫ್
author img

By

Published : Jan 22, 2023, 11:00 PM IST

ಶ್ರೀ ಗಂಗಾ ನಗರ (ರಾಜಸ್ಥಾನ): ಭಾರತ-ಪಾಕಿಸ್ತಾನ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಮೂವರು ಯುವಕರನ್ನು ಶಂಕೆಯ ಮೇಲೆ ಶನಿವಾರ ರಾತ್ರಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಂಧಿಸಿದ್ದಾರೆ. ಹರಿಯಾಣದ ನೋಂದಣಿಯ ಕಾರಿನಲ್ಲಿ ಮೂವರು ಆರೋಪಿಗಳು ಪಾನಮತ್ತರಾಗಿ ಪ್ರಯಾಣಿಸುತ್ತಿದ್ದರು. ಗಡಿಭದ್ರತಾ ಪಡೆಯು ಮೂವರನ್ನು ವಶಕ್ಕೆ ಪಡೆದು ಅವರಿಂದ 48,000 ನಗದು, ಐದು ಮೊಬೈಲ್ ಫೋನ್​, ಇಂಟರ್ನೆಟ್ ಡಾಂಗಲ್ ಅನ್ನು ವಶಕ್ಕೆ ಪಡೆದಿದ್ದಾರೆ.

ಬಿಎಸ್‌ಎಫ್ ಗುಪ್ತಚರದ ಇನ್ಸ್‌ಪೆಕ್ಟರ್ ಆನಂದ್ ಕುಲು ಪ್ರಕಾರ : ಕಳೆದ ಕೆಲವು ದಿನಗಳಲ್ಲಿ ಹಲವು ಡ್ರೋನ್ ಚಲನವಲನಗಳು ದಾಖಲಾದ ಹಿನ್ನೆಲೆ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ. ಬಂಧಿತ ಕಳ್ಳಸಾಗಣೆದಾರರಲ್ಲಿ ಇಬ್ಬರು ಹರಿಯಾಣದ ನಿವಾಸಿ, ಅವರಲ್ಲಿ ಒಬ್ಬರು ಪಂಜಾಬ್ ಮೂಲದವರಾಗಿದ್ದಾರೆ. ಇವರೆಲ್ಲ ಗಡಿಯ ಇನ್ನೊಂದು ಬದಿಯಿಂದ ಎಸೆಯುವ ಹೆರಾಯಿನ್ ಪಾಕೆಟ್​ಗಳನ್ನು ಸಂಗ್ರಹಿಸಲು ಗಡಿಯನ್ನು ತಲುಪಿದ್ದರು ಎಂದು ಶಂಕಿಸಲಾಗಿದೆ. ಮೂವರು ಕಳ್ಳಸಾಗಣೆದಾರರನ್ನು ಬಿಎಸ್​ಎಫ್ ಪಡೆ ಪೊಲೀಸರಿಗೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್​ಎಫ್ ಪಡೆ ಒಪ್ಪಿಸಿರುವ ಮೂವರು ಕಳ್ಳಸಾಗಣೆ ಶಂಕಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಘಟನೆ ಸಂಬಂಧಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಮಾಹಿತಿಗಾಗಿ ತನಿಖೆ ಕೈಗೊಂಡಿದ್ದಾರೆ ಎಂದು ಠಾಣೆಯ ಮುಖ್ಯಸ್ಥ ಬಲವಂತ್ ರಾಮ್ ತಿಳಿಸಿದ್ದಾರೆ.

ಇದಕ್ಕೂ ಮುಂಚೆ 30 ಕೋಟಿ ಮೌಲ್ಯದ ಹೆರಾಯಿನ್ ವಶ :ಇದಕ್ಕೂ ಮುನ್ನ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‌ನಿಂದ 30 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ಬಿಎಸ್‌ಎಫ್ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಅಕ್ರಮ ಕಳ್ಳಸಾಗಣೆ ವಿವರಗಳನ್ನು ಬಹಿರಂಗಪಡಿಸಿದ ಬಿಎಸ್ಎಫ್ ಅಧಿಕಾರಿಗಳು, ಆಗಸ್ಟ್ 14 ರಂದು ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಿಎಸ್‌ಎಫ್ ಗುಪ್ತಚರ ಮಾಹಿತಿಯ ನಂತರ, ಪಂಜಾಬ್‌ನ ಇಬ್ಬರು ಕಳ್ಳಸಾಗಣೆದಾರರನ್ನು ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಬಳಿ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಬಂಧಿಸಲಾಗಿದೆ.

ಮಾದಕವಸ್ತು ಕಳ್ಳಸಾಗಣೆಗೆ ಪಾಕಿಸ್ತಾನದಿಂದ ಡ್ರೋನ್‌ ಬಳಕೆ: ಡ್ರೋನ್‌ ಬೀಳಿಸಿದ ಮೂರು ಚೀಲಗಳನ್ನು ಪರಿಶೀಲಿಸಿದಾಗ ಆ ಮೂರು ಚೀಲಗಳಲ್ಲಿದ್ದ ಪ್ಯಾಕಿಂಗ್ ಸಾಮಗ್ರಿ ಸೇರಿದಂತೆ ಸುಮಾರು ಆರು ಕೆಜಿ ತೂಕದ ಆರು ಪಾಕೆಟ್ ಹೆರಾಯಿನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹೆರಾಯಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 30 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಬಿಎಸ್ಎಫ್ ಪಡೆ ತಿಳಿಸಿದೆ.

ಈ ಬಿಎಸ್​ಎಫ್ ಪಡೆ ಡ್ರೋನ್‌ಗೆ ಗುಂಡು ಹಾರಿಸಿದವು. ಈ ವೇಳೆ ಇಲ್ಲು ಬಾಂಬ್‌ಗಳನ್ನು ಸಹ ಲಾಬ್ ಮಾಡಿತು. ಪಂಜಾಬ್ ನಂಬರ್ ಪ್ಲೇಟ್ ಕಾರಿನಲ್ಲಿ ಪಂಜಾಬ್‌ನಿಂದ ಬಂದ ಇಬ್ಬರು ಕಳ್ಳಸಾಗಣೆದಾರ ಪತ್ತೆಗೆ ಶೋಧ ನಡೆಸಲಾಗುತ್ತಿದೆ, ಕಳ್ಳಸಾಗಣೆ ದಾರರು ಬಳಕೆ ಮಾಡಿದ್ದ ಪಂಜಾಬ್‌ನ ನಂಬರ್ ಪ್ಲೇಟ್​ನ ಕಾರು ಬಿಟ್ಟು ಹೋಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್​ಎಫ್ ತಿಳಿಸಿದೆ.

ಇದನ್ನೂಓದಿ:ಚೀನಾದಲ್ಲಿ ಒಂದೇ ವಾರ ಕೋವಿಡ್​ನಿಂದ 13 ಸಾವಿರ ಸಾವು.. ಶೇ 80 ಜನತೆಗೆ ವಕ್ಕರಿಸಿದ ಸೋಂಕು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.