ETV Bharat / bharat

ಪಾಕ್ ನುಸುಳುಕೋರನಿಗೆ ಗುಂಡಿಕ್ಕಿ ಹತ್ಯೆಗೈದ ಗಡಿ ಭದ್ರತಾ ಪಡೆ

ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್​ ನುಸುಳುಕೋರನನ್ನು ಬಿಎಸ್ಎಫ್​ ಪಡೆ ಗುಂಡಿಕ್ಕಿ ಹತ್ಯೆಗೈದಿದೆ.

pakistani infiltrator
ಪಾಕ್​ ನುಸುಳುಕೋರನ ಹತ್ಯೆ
author img

By

Published : Jun 1, 2023, 11:29 AM IST

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಸಾಂಬಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಎಚ್ಚರಿಕೆ ನೀಡಿದ ನಂತರವೂ ಒಳನುಸುಳಲು ಯತ್ನಿಸಿದ ಪಾಕಿಸ್ತಾನ​ ಪ್ರಜೆಯನ್ನು ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್‌) ಗುಂಡಿಕ್ಕಿ ಹತ್ಯೆ ಮಾಡಿವೆ. ಇಂದು ಮುಂಜಾನೆ (ಜೂನ್ 1 ) ಸಾಂಬಾ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯನ್ನು ಪಾಕಿಸ್ತಾನದ ಕಡೆಯಿಂದ ನುಸುಳಲು ಯತ್ನಿಸಿದಾಗ ಘಟನೆ ನಡೆದಿದೆ.

ಅನುಮಾನಾಸ್ಪದ ಚಲನವಲನ ಪತ್ತೆ ಹಚ್ಚಿದ ಸೇನೆ ಆತನಿಗೆ ಮೊದಲು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆದರೆ ಇದನ್ನು ಉಲ್ಲಂಘಿಸಿದ ವ್ಯಕ್ತಿ ಮುನ್ನುಗ್ಗಿ ಬಂದಾಗ ಬಿಎಸ್ಎಫ್​ ಗುಂಡು ಹಾರಿಸಿ ಆತನನ್ನು ಹೊಡೆದುರುಳಿಸಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪಾಕಿಸ್ತಾನಿ ನುಸುಳುಕೋರನ ಬಂಧನ: ಏಪ್ರಿಲ್​ 5 ರಂದು ನುಸುಳುಕೋರನನ್ನು ಬಿಎಸ್​ಎಫ್​ ಬಂಧಿಸಿತ್ತು. ಆರೋಪಿ ಗಡಿಯಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿ ದಾಟಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಗಡಿಯಲ್ಲಿ ಎಚ್ಚರಿಕೆವಹಿಸಿ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ತಕ್ಷಣ ಆತನನ್ನು ಸೆರೆ ಹಿಡಿದಿದ್ದಾರೆ. ಬಿಒಪಿ ಬಳಿಯ ಗೇಟ್​ನಿಂದ ಕೆಳಗಿಳಿದ ಕೂಡಲೇ ಆತ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನದ ನಗರ್‌ಪಾರ್ಕರ್‌ನ ನಿವಾಸಿ ದಯಾರಾಮ್ ಎಂದು ಆತನನ್ನು ಗುರುತಿಸಲಾಗಿದೆ. ಆರೋಪಿಯ ಬಂಧನವನ್ನು ಬಿಎಸ್ಎಫ್ ಖಚಿತಪಡಿಸಿದೆ.

ಶಸ್ತ್ರಸಜ್ಜಿತ ನುಸುಳುಕೋರನ ಹತ್ಯೆ: ಜನವರಿ 3, 2023 ರಂದು ಭಾರತ-ಪಾಕ್​ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನಿ ನುಸುಳುಕೋರನನ್ನು ಗುಂಡು ಹಾರಿಸಿ ಹತ್ಯೆಗೈದಿತ್ತು. ಗುರುದಾಸ್‌ಪುರ ಸೆಕ್ಟರ್‌ನ ಬಾರ್ಡರ್ ಔಟ್‌ಪೋಸ್ಟ್ ಚನ್ನಾದಲ್ಲಿ ಬಿಎಸ್‌ಎಫ್ ಬೆಳಿಗ್ಗೆ ಶಂಕಿತನ ಚಲನವಲನ ಗಮನಿಸಿದ್ದಾರೆ. ಆತ ಗಡಿ ಬೇಲಿ ಕಡೆ ಚಲಿಸಿದಾಗ ಸುತ್ತುವರೆಯಲಾಗಿದೆ. ನಂತರ ಶಸ್ತ್ರಸಜ್ಜಿತನಾಗಿದ್ದ ನುಸುಳುಕೋರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಚಂಢೀಗಡದಲ್ಲಿ ಪಾಕ್​ ಡ್ರೋನ್‌ಗೆ ಗುಂಡು: ಕೆಳೆದ ಮೇ ತಿಂಗಳಿನಲ್ಲಿ ಭಾರತದೊಳಗೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವಾಗ ಪಾಕಿಸ್ತಾನಿ ಕಳ್ಳಸಾಗಣೆದಾರರ ಎರಡು ಪ್ರಯತ್ನಗಳನ್ನು ಪಂಜಾಬ್​ನ ಅಮೃತಸರದಲ್ಲಿ ಗಡಿ ಭದ್ರತಾ ಪಡೆ ವಿಫಲಗೊಳಿಸಿತ್ತು. ಇದರ ನಂತರ ಡ್ರೋನ್​ನಿಂದ ಅಮೃತಸರ ಸೆಕ್ಟರ್‌ನ ಎರಡು ಸ್ಥಳಗಳಲ್ಲಿ ಪಾಕಿಸ್ತಾನದ ಕಡೆಯಿಂದ ಡ್ರೋನ್ ಮೂಲಕ ಕಳುಹಿಸಲಾದ ಹೆರಾಯಿನ್ ಅನ್ನು ಬಿಎಸ್‌ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದರು.

ಶಂಕಿತ ಮಹಿಳೆಗೆ ಗುಂಡಿಕ್ಕಿ ಹತ್ಯೆ: ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು ಅಪರಿಚಿತ ಮಹಿಳೆಯೊಬ್ಬಳು ದಾಟಿದ್ದು, ಪಾಕ್ ನುಸುಳುಕೋರಳೆಂದು ಶಂಕಿಸಿ ಆಕೆಯನ್ನು ಭಾರತ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಪರಿಚಿತ ಶಂಕಿತ ಮಹಿಳೆ ಬಾರಾಮುಲ್ಲಾ ಜಿಲ್ಲೆಯ ಕಮಲಕೋಟೆ ಪ್ರದೇಶದಲ್ಲಿ ನಿಯಂತ್ರಣ ರೇಖೆ ದಾಟಿ ಗಡಿ ಬೇಲಿಯ ಸಮೀಪ ಬರುತ್ತಿದ್ದಳು. ಆಕೆಗೆ ಸೈನಿಕರು ಎಚ್ಚರಿಕೆ ನೀಡಿದರೂ ಮಹಿಳೆ ಗಮನ ಹರಿಸಲಿಲ್ಲ. ಇದರಿಂದಾಗಿ ಭದ್ರತಾ ಪಡೆಗಳು ಆಕೆಯ ಮೇಲೆ ಗುಂಡು ಹಾರಿಸಿದ್ದವು. ಇದರಿಂದಾಗಿ ಮಹಿಳೆ ಮೃತಪಟ್ಟಿದ್ದಳು.

ಇದನ್ನೂ ಓದಿ: G20 ಕಾಶ್ಮೀರದ ಪ್ರವಾಸೋದ್ಯಮ, ಆಹಾರ ಪದ್ಧತಿ, ಸಂಸ್ಕೃತಿಯನ್ನು ಉತ್ತೇಜಿಸಿದೆ: ಶೆರ್ಪಾ ಅಮಿತಾಬ್ ಕಾಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.