ETV Bharat / bharat

ಸಾಧುವಿಗೆ ಮನಸೋ ಇಚ್ಛೆ ಥಳಿಸಿ, ಕೂದಲು ಕತ್ತರಿಸಿ ಯುವಕನ ದುಷ್ಕೃತ ಕೃತ್ಯ: ವಿಡಿಯೋ ವೈರಲ್​ - ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಸಾಧುವಿಗೆ ಥಳಿತ

ಸಾರ್ವಜನಿಕವಾಗಿ ಸಾಧುವಿಗೆ ಯುವಕ ಥಳಿಸುತ್ತಿದ್ದರೂ ಜನರು ಮೂಕ ಪ್ರೇಕ್ಷಕರಾಗಿ ನಿಂತು ವಿಡಿಯೋ ಮಾಡಿದ್ದಾರೆ. ಅಲ್ಲದೇ, ವಿಡಿಯೋದಲ್ಲಿ ಆರೋಪಿಗೆ ಇತರ ಯುವಕರು ಸಾಥ್​ ನೀಡಿರುವುದು ಕೂಡ ದಾಖಲಾಗಿದೆ.

man thrashes sanyasi cuts hair in mp
ಸಾಧುವಿನ ಕೂದಲು ಕತ್ತರಿಸಿ ಯುವಕನ ದುಷ್ಕೃತ ಕೃತ್ಯ
author img

By

Published : May 24, 2022, 7:04 PM IST

Updated : May 24, 2022, 7:20 PM IST

ಖಾಂಡ್ವಾ (ಮಧ್ಯಪ್ರದೇಶ): ಭಿಕ್ಷೆ ಬೇಡಲು ಬಂದ ಸಾಧುವೊಬ್ಬರಿಗೆ ಯುವಕನೊಬ್ಬ ಮನಸೋ ಇಚ್ಛೆ ಥಳಿಸಿ, ಆತನ ಕೂದಲು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾಧುವಿಗೆ ಥಳಿಸಿರುವ ಮತ್ತು ಬಲವಂತದಿಂದ ಕೂದಲು ಕತ್ತರಿಸಿದ ವಿಡಿಯೋ ವೈರಲ್​ ಆಗಿದೆ.

ಇಲ್ಲಿನ ಪಟಜಾನ್​ ಗ್ರಾಮದಲ್ಲಿ ಈ ಸಾಧು ಭಿಕ್ಷೆ ಕೇಳುತ್ತಿದ್ದಾಗ ರೆಸ್ಟೋರೆಂಟ್​ನ ಮ್ಯಾನೇಜರ್​​ನ ಮಗ ಸ್ಥಳಕ್ಕೆ ಬಂದು ಕೂದಲು ಹಿಡಿದು ಎಳೆದಾಡಿ ಹೊಡೆಯಲು ಶುರು ಮಾಡಿದ್ಧಾನೆ. ಆದರೆ, ಕ್ಷೌರದ ಅಂಗಡಿಗೆ ಸನ್ಯಾಸಿಯನ್ನು ಎಳೆದುಕೊಂಡು ಬಂದು ಕತ್ತರಿಯಿಂದ ತಾನೇ ಕತ್ತರಿಸಿದ್ದಾನೆ. ಕೂದಲು ಕತ್ತರಿಸದಂತೆ ಆ ಸಾಧು ಎಷ್ಟೇ ಮನವಿ ಮಾಡಿದರೂ ಬಿಡಿದೇ ಕತ್ತರಿಸಿದ್ದಾನೆ. ಆದರೆ, ಈ ಸಾಧುವಿನೊಂದಿಗೆ ಈ ಯುವಕ ಹೀಗೆ ನಡೆದುಕೊಂಡ ಎಂಬ ಬಗ್ಗೆ ನಿಖರವಾಗಿ ಗೊತ್ತಾಗಿಲ್ಲ.

ಆರೋಪಿ ಪೊಲೀಸ್​ ವಶಕ್ಕೆ: ಸಾಧುವಿಗೆ ಥಳಿಸಿರುವ ದೃಶ್ಯಗಳು ಸ್ಥಳೀಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋದಲ್ಲಿ ಆರೋಪಿಯು ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಇದರ ಆಧಾರದ ಮೇಲೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯ ನಂತರ ಥಳಿತಕ್ಕೊಳಗಾದ ಸಾಧು ನಾಪತ್ತೆಯಾಗಿದ್ದಾನೆ. ನಾವೇ ಸ್ವಯಂ ಪ್ರೇರಣೆಯಿಂದ ಯುವಕನನ್ನು ವಶಕ್ಕೆ ಪಡೆದಿದ್ದೇವೆ. ಅಲ್ಲದೇ, ಸಾಧುವಿನ ಬಗ್ಗೆ ಶೋಧ ನಡೆಸಲಾಗುತ್ತಿದೆ ಎಂದು ಎಸ್​ಪಿ ವಿವೇಕ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ನಿಶ್ಚಿತಾರ್ಥವಾದ ಯುವ ಜೋಡಿ ಆತ್ಮಹತ್ಯೆ.. ಅಡವಿಬಾವಿಯಲ್ಲಿ ಪ್ರೇಮಿಗಳ ನಿಗೂಢ ಸಾವು

Last Updated : May 24, 2022, 7:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.