ETV Bharat / bharat

ಪ್ರಿಯಕರನ ಜೊತೆ ಮದುವೆಗೆ ಒತ್ತಾಯ; ಮರ್ಯಾದೆಗಂಜಿ ಸಹೋದರಿಯನ್ನೇ ಕೊಂದ ಅಣ್ಣ! - ಪ್ರಿಯಕರನೊಂದಿಗೆ ಯುವತಿ ಮದುವೆ

ತಾನು ಪ್ರೀತಿಸುತ್ತಿದ್ದ ಯುವಕನ ಮನೆಗೆ ತೆರಳಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಯುವತಿಯೋರ್ವಳು ಪಟ್ಟು ಹಿಡಿದಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವತಿಯ ಸಹೋದರ ಮರ್ಯಾದೆಗೆ ಹೆದರಿ ಆಕೆಯ ಕೊಲೆಗೈದಿದ್ದಾನೆ.

Brother murdered sister in UP
Brother murdered sister in UP
author img

By

Published : Apr 14, 2022, 3:50 PM IST

ಮೊರಾದಾಬಾದ್​​(ಉತ್ತರ ಪ್ರದೇಶ): ತಾನು ಪ್ರೀತಿ ಮಾಡ್ತಿದ್ದ ಯುವಕನ ಮನೆಗೆ ಬಂದಿರುವ ಯುವತಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಆತನ ಮೇಲೆ ಒತ್ತಡ ಹೇರಿದ್ದಾಳೆ. ಮರ್ಯಾದೆಗೆ ಹೆದರಿದ ಯುವತಿಯ ಸಹೋದರ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಮೊರಾದಾಬಾದ್ ಜಿಲ್ಲೆಯ ಭೋಜ್​ಪುರದ ರಾಣಿನಾಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನೀಲಂ ಎಂಬಾಕೆ ಅದೇ ಗ್ರಾಮದ ಯುವಕ ಮೋಹಿತ್​ ಯಾದವ್​​ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇದರ ಬಗ್ಗೆ ತಂದೆಗೆ ಗೊತ್ತಾಗುತ್ತಿದ್ದಂತೆ ಬೇರೆ ಕಡೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಈ ವಿಷಯ ಯುವತಿಗೆ ತಿಳಿದು ಪ್ರಿಯಕರನ ಮನೆಗೆ ಹೋಗಿ ತನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ.

ಇದನ್ನೂ ಓದಿ: 'ಭಾರತೀಯನೆಂದು ಸಾಬೀತುಪಡಿಸಲು ಬಲವಂತವಾಗಿ ಹಿಂದಿ ಕಲಿಯುವ ಅವಶ್ಯಕತೆಯಿಲ್ಲ'

ಆತ ಬೇರೆ ಜಾತಿಗೆ ಸೇರಿದ್ದ ಕಾರಣ ಕುಟುಂಬಸ್ಥರು ತಿಳಿ ಹೇಳಿದ್ದಾರೆ. ಆದರೆ, ಯುವತಿ ಮಾತ್ರ ತನ್ನ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ. ಇದರಿಂದ ಕೋಪಗೊಂಡಿರುವ ಸಹೋದರ ಸುಭಾಷ್​​ ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಪ್ರಿಯಕರನ ತಂದೆ, ಯುವತಿಯ ತಂದೆ ಹಾಗೂ ಸಹೋದರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.