ಚೆನ್ನೈ(ತಮಿಳುನಾಡು): ಬಿರಿಯಾನಿ ಎಂದಾಕ್ಷಣ ನೆನಪಾಗೊಂದು ಹೈದರಾಬಾದ್ ಬಿರಿಯಾನಿ. ಆದರೆ, ಚೆನ್ನೈನಲ್ಲಿ ಸಿಗುವ ವಿಶೇಷ ಬಿರಿಯಾನಿವೊಂದು ಸತತ 6ನೇ ವರ್ಷವೂ ಭಾರತದ ನೆಚ್ಚಿನ ಖಾದ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಹೌದು, ಚೆನ್ನೈನಲ್ಲಿ ಅನೇಕ ಬಗೆಯ ಖಾದ್ಯಗಳು ಸಿಗುತ್ತವೆ. ಅದರಲ್ಲೂ ಚಿಕನ್, ಮಟನ್, ಸೀಗಡಿ ಸೇರಿದಂತೆ ಹಲವು ಬಗೆಯ ಬಿರಿಯಾನಿಗಳು ನೆಚ್ಚಿನ ಖಾದ್ಯಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ಹೆಚ್ಚಿನವರು ಬಾಸುಮತಿ ರೈಸ್ ಮತ್ತು ಸೀರಗ ಸಾಂಬಾ ಅಕ್ಕಿಯಿಂದ ತಯಾರುಗೊಳ್ಳುವ ಬಿರಿಯಾನಿ ಇಷ್ಟಪಡುತ್ತಾರೆ. ಖಾಸಗಿ ಆಹಾರ ವಿತರಣಾ ಕಂಪನಿ(ಸ್ವಿಗ್ಗಿ) ಬಿಡುಗಡೆ ಮಾಡಿರುವ ಅಧ್ಯಯನವೊಂದರ ಪ್ರಕಾರ 2021ರಲ್ಲಿ ಚೆನ್ನೈನಲ್ಲಿ ನಿಮಿಷಕ್ಕೆ 115 ಬಿರಿಯಾನಿ ಸೇಲ್(ಸೆಕೆಂಡ್ಗೆ 2 ಬಿರಿಯಾನಿ) ಆಗಿವೆ ಎಂದು ತಿಳಿಸಿದೆ.

2021ರಲ್ಲಿ ಸ್ವಿಗ್ಗಿ ಕಂಪನಿಯಿಂದ 4.25 ಲಕ್ಷ ಹೊಸ ಗ್ರಾಹಕರು ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದು, ಒಟ್ಟು 6,04,44,000 ಜನರಿಗೆ ಬಿರಿಯಾರಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದೆ. ಕಳೆದ ಆರು ವರ್ಷಗಳಿಂದಲೂ ಬಿರಿಯಾನಿ ಮಾರಾಟವಾಗುವುದರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿರಿಯಾನಿ ಅಂಗಡಿ ಮಾಲೀಕ, ಟೇಸ್ಟ್ನಿಂದಾಗಿ ಜನರು ಹೆಚ್ಚಾಗಿ ಬಿರಿಯಾನಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಹಾಕುವ ಕೆಲವೊಂದು ಪದಾರ್ಥಗಳು ಮನಸ್ಸಿಗೆ ಮುದ ನೀಡುತ್ತವೆ. ಹೀಗಾಗಿ ಹೆಚ್ಚಿನ ಜನರು ಇದರಿಂದ ಆಕರ್ಷಣೆಗೊಳಪಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿರಿ: ಗ್ರಾಹಕರಿಗೆ ಗುಡ್ನ್ಯೂಸ್ : ಅಡುಗೆ ಎಣ್ಣೆ ಬೆಲೆಯಲ್ಲಿ ಶೇ.15ರವರೆಗೆ ಇಳಿಕೆ
ಹಬ್ಬ-ಹರಿದಿನಗಳಲ್ಲಿ ಹೆಚ್ಚಾಗಿ ಜನರು ಬಿರಿಯಾನಿ ಆರ್ಡರ್ ಮಾಡ್ತಾರೆ. ಇದರ ಮೇಲಿನ ಪ್ರೀತಿಯಿಂದಾಗಿ ಚೆನ್ನೈನ ಪ್ರತಿ ಬೀದಿಯಲ್ಲೂ ಬಿರಿಯಾನಿ ಶಾಪ್ ಓಪನ್ ಆಗಿವೆ ಎಂದು ಅಧ್ಯಯನದಲ್ಲಿ ತಿಳಿಸಿದೆ. ಚೆನ್ನೈನಲ್ಲೇ ಸಾವಿರಕ್ಕೂ ಅಧಿಕ ಬಿರಿಯಾನಿ ಅಂಗಡಿಗಳಿದ್ದು, ಬೇರೆ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ.