ಹೈದರಾಬಾದ್(ತೆಲಂಗಾಣ): ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎನ್ನುತ್ತಾರೆ. ಇಂದಿನ ದಿನಗಳಲ್ಲಿ ಮಂಟಪವನ್ನೇ ಸ್ವರ್ಗದ ರೀತಿ ಕೋಟಿಗಟ್ಟಲೆ ಹಣ ವ್ಯಯಿಸಿ ಅಲಂಕರಿಸಿ ವಿವಾಹ ಮಾಡುತ್ತಾರೆ. ವಿವಾಹ ಈ ಶ್ರೀಮಂತಿಕೆಯನ್ನು ತೋರ್ಪಡಿಸುವ ಒಂದು ವಿಧಾನವಾಗಿದೆ. ಅದ್ಧೂರಿ ಸೆಟ್ಗಳಲ್ಲಿ ವಿವಾಹ ಮಾಡಿಸಿ ಆಡಂಬರ ಮಾಡುವುದೇ ಈ ಕಾಲದ ಶೋಕಿ ಅನ್ನೋದು ಕೆಲವರ ಅಭಿಪ್ರಾಯ.
ವೇದಿಕೆ ವಧು ವರರ ಪ್ರವೇಶಕ್ಕೆ ಅದ್ಧೂರಿ ನೃತ್ಯದ ಮೂಲಕ ಸ್ವಾಗತ ಕೋರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಮ್ಯಾರೇಜ್ ಪ್ಲಾನರ್ಸ ಎಂದೇ ಕಾರ್ಯಕ್ರಮ ನಿರ್ವಹಣೆ ಮಾಡುವವರು ಇರುತ್ತಾರೆ. ಅವರು ಫೋಟೋಗ್ರಫಿಗೆ ಮತ್ತು ಬೇರೆ ಬೇರೆ ಇವೆಂಟ್ಗಳನ್ನು ಸೃಷ್ಟಿಸಿ ಮದುವೆಗೆ ಮೆರುಗು ತರಲು ಪ್ರಯತ್ನಿಸುತ್ತಾರೆ.
ಈ ರೀತಿಯ ಆಡಂಬರ ವಿವಾಹದ ಒಂದು ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. ವಿವಾಹ ವೇದಿಕೆಗೆ ವಧುವಿನ ಆಗಮನಕ್ಕೆ ರೋಪ್ ವೇ ರೀತಿಯಲ್ಲಿ ಸೀಲಿಂಗ್ಗೆ ಕೇಬಲ್ ನೇತಾಡುವ ಬುಟ್ಟಿಯ ರೀತಿಯ ರಚನೆಯಲ್ಲಿ ತಂದೆ ಕರೆದುಕೊಂಡು ಬರುತ್ತಾರೆ. ಈ ವಿಡಿಯೋ ಪಾಕಿಸ್ತಾನದಲ್ಲಿ ನಡೆದ ವಿವಾಹ ಕಾರ್ಯಕ್ರಮದ್ದು ಎಂದು ಹೇಳಲಾಗುತ್ತಿದೆ.
-
Please don't let this become a thing pic.twitter.com/rWRGsyENFp
— Fasi Zaka (@fasi_zaka) December 8, 2022 " class="align-text-top noRightClick twitterSection" data="
">Please don't let this become a thing pic.twitter.com/rWRGsyENFp
— Fasi Zaka (@fasi_zaka) December 8, 2022Please don't let this become a thing pic.twitter.com/rWRGsyENFp
— Fasi Zaka (@fasi_zaka) December 8, 2022
ಈ ವಿವಾಹದ ವಿಡಿಯೋ ನೆಟಿಜನ್‌ಗಳ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ಬಳಕೆದಾರರಾದ ಫಾಸಿ ಝಕಾ (@fasi_zaka) ಟ್ವೀಟ್ ಮಾಡಿದ ವಿಡಿಯೋದಲ್ಲಿ ಕೇಬಲ್‌ಗಳಿಂದ ಸೀಲಿಂಗ್‌ನಲ್ಲಿ ನೇತಾಡುವ ಗೊಂಚಲು ಆಕಾರದ ರೋಪ್ ವೇ ಮಧುಮಗಳನ್ನು ತಂದೆ ವಿವಾಹ ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ. ಇದನ್ನು ಹಂಚಿಕೊಂಡು, ಇದು ಅಪಘಾತದ ಸುದ್ದಿಯಾಗಲು ಬಿಡಬೇಡಿ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪೂರಕವಾಗಿ ನೆಟ್ಟಿಗರು, ವಿವಾಹ ಸ್ಥಳವನ್ನು ಈ ರೀತಿಯ ಶೋಕಿಗಳನ್ನು ಮಾಡಲು ಹೋಗಿ ಶೋಕದ ಮನೆ ಮಾಡಬೇಡಿ. ಅನಗತ್ಯ ಆಡಂಬರಗಳು ಅಪಘಾತಕ್ಕೆ ಕಾರಣವಾಗಬಹುದು. ಯಾವುದೇ ಸರಿಯಾದ ಸುರಕ್ಷತೆ ಇಲ್ಲದೇ ಈ ರೀತಿಯ ಸಾಹಸ ಮಾಡುವುದು ಸರಿಯಲ್ಲ ಎಂದು ಕಮೆಂಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಿನ ವಿವಾಹಗಳು ವಿಡಿಯೋಗ್ರಫಿ ಮತ್ತು ಫೋಟೋಗ್ರಫಿಗಾಗಿ ನಡೆಯುತ್ತದೆ. ಸಂಬಂಧ ಬೆಸೆಯುವ ಕಾರ್ಯಕ್ರಮ ಆಗಿರುವುದಿಲ್ಲ ಎಂದು ಕೆಲವರು ದೂರಿದ್ದಾರೆ. ಹಿಂದಿ ಬಿಗ್ಬಾಸ್ ವೇದಿಕೆಗೆ ಸಲ್ಮಾನ್ ಖಾನ್, ವಿದೇಶಿ ಪಾಪ್ ಹಾಡುಗಾರ್ತಿ ಈ ರೀತಿಯ ರೋಪ್ವೇಯಲ್ಲಿ ಮಾಡಿದ ಕಾರ್ಯಕ್ರಮಗಳನ್ನು ಕಮೆಂಟ್ನಲ್ಲಿ ಹಂಚಿಕೊಂಡು ಈ ರೀತಿಯ ಅಸುರಕ್ಷಿತ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಹೋದಲ್ಲಿ ಅಲ್ಲೇ ನೇತಾಡುವ ದಂಪತಿಯನ್ನು ನೋಡಲು ಚೆನ್ನಾಗಿರುತ್ತದೆ ಎಂದು ಮತ್ತೆ ಕೆಲವರು ಹಾಸ್ಯ ಮಾಡಿದ್ದಾರೆ.
ಇದನ್ನೂ ಓದಿ: 100 ಜನರೊಂದಿಗೆ ದಾಳಿ.. ನಿಶ್ಚಿತಾರ್ಥದಂದೇ ಯುವತಿ ಅಪಹರಿಸಿದ ಪ್ರೇಮಿ..6 ತಾಸಿನಲ್ಲೇ ಪ್ರಕರಣ ಭೇದಿಸಿದ ಪೊಲೀಸರು