ETV Bharat / bharat

ವರದಕ್ಷಿಣೆಗೆ ಬೇಡಿಕೆ ಇಟ್ಟ ವರನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ವಧುವಿನ ಸಂಬಂಧಿಕರು! - ವರದಕ್ಷಿಣೆ

ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವರನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ.

bride-relatives-tied-the-groom-to-tree-and-beat-him-for-demanding-dowry-in-uttar-pradesh
ವರದಕ್ಷಿಣೆಗೆ ಬೇಡಿಕೆ... ವರನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ವಧುವಿನ ಸಂಬಂಧಿಕರು!
author img

By

Published : Jun 15, 2023, 9:31 PM IST

ವರದಕ್ಷಿಣೆಗೆ ಬೇಡಿಕೆ... ವರನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ವಧುವಿನ ಸಂಬಂಧಿಕರು!

ಪ್ರತಾಪಗಢ (ಉತ್ತರ ಪ್ರದೇಶ): ಕೇಳಿದಷ್ಟು ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಮಾತುಕತೆ ಹಂತದಲ್ಲೇ ಮದುವೆ ಸಂಬಂಧಗಳು ಮುರಿದು ಬೀಳುವುದೋ ಅಥವಾ ವರನ ಕಡೆಯವರು ವಿವಾಹ ಸಮಾರಂಭವನ್ನೇ ಅರ್ಧಕ್ಕೆ ಮೊಟಕುಗೊಳಿಸುವುದನ್ನೆಲ್ಲ ಕೇಳಿದ್ದೇವೆ. ಆದರೆ, ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವರನನ್ನೇ ಮರಕ್ಕೆ ಕಟ್ಟಿ ಹಾಕಿ ವಧುವಿನ ಕುಟುಂಬಸ್ಥರು ಹಾಗೂ ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ.

ಇಲ್ಲಿನ ಮಾಂಧಾತಾ ಪೊಲೀಸ್ ಠಾಣಾ ವ್ಯಾಪ್ತಿಯ ಹರಖ್‌ಪುರ ಗ್ರಾಮದ ನಿವಾಸಿ ರಾಮ್ ಕಿಶೋರ್ ವರ್ಮಾ ಎಂಬವರು ತಮ್ಮ ಮಗಳನ್ನು ಜೌನ್‌ಪುರದ ಅಮರಜೀತ್​ ವರ್ಮಾ ಎಂಬಾತನಿಗೆ ಕೊಟ್ಟು ಮದುವೆ ಮಾಡಿಸುತ್ತಿದ್ದರು. ಬುಧವಾರ ರಾತ್ರಿ ವರನ ಕಡೆಯಿಂದ ಮದುವೆ ದಿಬ್ಬಣ ಗ್ರಾಮಕ್ಕೆ ಬಂದಿತ್ತು. ಇಡೀ ಗ್ರಾಮದಲ್ಲಿ ಮದುವೆಯ ಸಂಭ್ರಮದ ವಾತಾವರಣ ಇತ್ತು. ವರ ಹಾಗೂ ವಧು ಎರಡೂ ಕಡೆಯವರು ವಿವಾಹಕ್ಕೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ, ಬೆಳಗ್ಗೆ ವರ ಅಮರಜೀತ್​ ವರ್ಮಾ ವೇದಿಕೆ ಏರುತ್ತಿದ್ದಂತೆ ವರದಕ್ಷಿಣೆಗಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ವೇದಿಕೆ ಮೇಲೆ ವರ ಅಮರಜೀತ್​ ವರ್ಮಾನ ಹೊಸ ವರಸೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವಧುವಿನ ಮನೆಯವರಿಗೂ ಕೋಪ ಬರುವಂತೆ ಮಾಡಿದೆ. ಅವರು ವರನ ವರ್ತನೆ ಬಗ್ಗೆ ಆಕ್ರೋಶಗೊಂಡಿದ್ದಾರೆ. ಇದೇ ವಿಚಾರವಾಗಿ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ವರನನ್ನು ಸಾಕಷ್ಟು ಮನವೊಲಿಸಿದರೂ ವರದಕ್ಷಿಣೆ ಇಲ್ಲದೇ ಮದುವೆಯಾಗಲು ಆತ ಒಪ್ಪಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ವಧುವಿನ ಸಂಬಂಧಿಕರು ಕೊನೆಗೆ ವರನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಸಂಪೂರ್ಣ ಘಟನೆಯ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತೊಂದೆಡೆ, ಇದರ ಮಾಹಿತಿ ಪಡೆದ ಪೊಲೀಸರು ಆಗಮಿಸಿ ಎರಡೂ ಕಡೆಯವರನ್ನು ವಿಚಾರಿಸಿದ್ದಾರೆ. ಅಲ್ಲದೇ, ಠಾಣೆಗೆ ಕರೆದೊಯ್ದು ಸಂಧಾನ ಮಾಡಿಸಲು ಯತ್ನಿಸಿದ್ದಾರೆ. ಆದರೂ, ಪೊಲೀಸರು ಮಧ್ಯಪ್ರದೇಶದ ಬಳಿಕವೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಅಲ್ಲದೇ, ವರದ ಸ್ನೇಹಿತರು ಕೂಡ ಯಾರೊಂದಿಗೋ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಎರಡು ಕುಟುಂಬಗಳು ತಮ್ಮ ಪಟ್ಟು ಬಿಡದ ಕಾರಣಕ್ಕೆ ಮದುವೆ ಮುಂದೂಡಲಾಗಿದೆ ಎಂದು ಮಾಂಧಾತಾ ಪೊಲೀಸ್ ಠಾಣೆ ಪ್ರಭಾರಿ ಪುಷ್ಪರಾಜ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ವಧುವಿನ ತಂದೆಯ ವಿಲಕ್ಷಣ ಷರತ್ತು.. ಮುರಿದು ಬಿದ್ದ ಮದುವೆ: ಆ ಷರತ್ತುಗಳ ಗಮ್ಮತ್ತೇನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.