ETV Bharat / bharat

ಕಿಸ್​ಗೆ ಬೇಸತ್ತ ವಧು: ಮಾವನ ಮನೆಯಿಂದ ಬರಿಗೈಯಲ್ಲಿ ವರ ವಾಪಸ್​

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಹೂವಿನ ಹಾರ ಬದಲಾವಣೆ ವೇಳೆ ವರ ಮುತ್ತು ಕೊಟ್ಟಿದ್ದರಿಂದ ವಧು ಮದುವೆಯನ್ನೇ ಮುರಿದಿದ್ದಾಳೆ.

bride-refused-to-marry-in-sambhal-uttar-pradesh
ಕಿಸ್​ಗೆ ಬೇಸತ್ತ ವಧು: ಮಾವನ ಮನೆಯಿಂದ ಬರಿಗೈಯಲ್ಲಿ ವರ ವಾಪಸ್​
author img

By

Published : Nov 30, 2022, 10:22 PM IST

ಸಂಭಾಲ್ (ಉತ್ತರಪ್ರದೇಶ): ವಿವಾಹ ವೇದಿಕೆಯ ಮೇಲೆಯೇ ವರ ಮುತ್ತು ಕೊಟ್ಟಿರಿಂದ ಕೋಪಿಸಿಕೊಂಡ ವಧುವೊಬ್ಬಳು ಮದುವೆಯನ್ನೇ ಮುರಿದಿದ್ದಾಳೆ. ಹಿರಿಯರ ಸಂಧಾನ, ಪೊಲೀಸರ ರಾಜಿ ಪಂಚಾಯಿತಿ ನಂತರವೂ ಮದುವೆಯಾಗಲು ಯುವತಿ ನಿರಾಕರಿಸಿದ್ದಾಳೆ. ಇದರಿಂದ ವರ ಮಾವನ ಮನೆಯಿಂದ ಬರಿಗೈಯಲ್ಲಿ ವಾಪಸ್​ ಬರುವಂತಾಗಿದೆ.

ಹೌದು, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನವೆಂಬರ್ 26ರಂದು ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಬದೌನ್‌ನ ಬಿಲ್ಸಿ ನಿವಾಸಿ ಯುವಕನನ್ನು ಬಹ್ಜೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಡುಗಿಯನ್ನು ವಿವಾಹವಾಗಿದ್ದರು.

ಇದನ್ನೂ ಓದಿ: ಚಾಕುವಿನಿಂದ ಪತ್ನಿಯನ್ನು ಮನಬಂದಂತೆ ಇರಿದು ಕೊಂದ ಪತಿರಾಯ.. ಹೊಸಕೋಟೆಯಲ್ಲಿ ದಾರುಣ

ನಂತರ ಉಭಯ ಕುಟುಂಬಗಳ ಒಪ್ಪಿಗೆ ಮೇರೆಗೆ ಮಂಗಳವಾರ ವರ ಹಾಗೂ ಕುಟುಂಬಸ್ಥರು ಮೆರವಣಿಗೆ ಮೂಲಕ ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ಇಲ್ಲಿ ವಿವಾಹ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹೂವಿನ ಹಾರ ಬದಲಾವಣೆ ವೇಳೆ ವರ ವಧುವಿಗೆ ಮುತ್ತು ಕೊಟ್ಟಿದ್ದಾನೆ ಎನ್ನಲಾಗಿದೆ. ಸಾರ್ವಜನಿಕವಾಗಿ ತನಗೆ ಮುತ್ತು ಕೊಟ್ಟಿದ್ದರಿಂದ ವಧು ಸಿಟ್ಟಾಗಿದ್ದಾಳೆ.

ಇದೇ ವಿಚಾರವಾಗಿ ವಾಗ್ವಾದ ಸಹ ನಡೆದಿದೆ. ಆಗ ಗ್ರಾಮದ ಗಣ್ಯರು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೇಸತ್ತ ವಧು ಮದುವೆಯ ಇತರ ಆಚರಣೆಗಳನ್ನು ನಿಲ್ಲಿಸಿ ಗಲಾಟೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ವರನ ಕಡೆಯವರು ವಧುವಿನ ಬಳಿ ಮನವಿ ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ನನಗೆ ಮದುವೆ ಬೇಕಾಗಿಲ್ಲ ಎಂದು ವಧು ಹಠ ಹಿಡಿದಿದ್ದಾಳೆ.

ಇದನ್ನೂ ಓದಿ: ವಿವಾಹವಾಗಿ 16 ವರ್ಷ, ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ

ಇದಾದ ನಂತರ ಗ್ರಾಮದಲ್ಲಿ ಪಂಚಾಯಿತಿ ಏರ್ಪಡಿಸಲಾಗಿತ್ತು. ಆಗ ಕೂಡ ವಧು ವರನೊಂದಿಗೆ ಹೋಗುವುದಿಲ್ಲ ಎಂದು ಸಾರಾಸಗಟಾಗಿ ನಿರಾಕರಿಸಿದ್ದಾಳೆ. ಅಲ್ಲಿಂದ ಈ ವಿಷಯ ಬಹ್ಜೋಯಿ ಪೊಲೀಸ್ ಠಾಣೆಗೆ ತಲುಪಿದೆ. ಇಲ್ಲಿ ಸಂಧಾನ ನಡೆಸುವ ಯತ್ನವನ್ನೂ ಮಾಡಲಾಗಿದೆ. ಆದರೆ, ಅಲ್ಲಿ ಕೂಡ ವಧು ಒಪ್ಪಿಕೊಂಡಿಲ್ಲ. ಇದರಿಂದ ಪೊಲೀಸರು ಮದುವೆಯ ಎಲ್ಲ ವಿಧಿವಿಧಾನಗಳನ್ನು ರದ್ದುಪಡಿಸಿದ್ದಾರೆ.

ಇದನ್ನೂ ಓದಿ: ಪ್ರೇಮ ವಿವಾಹ.. ಸೊಸೆಯಾಗಿ ಒಪ್ಪದ ಕುಟುಂಬಸ್ಥರು: ಗರ್ಭಿಣಿ ಪತ್ನಿ ಜೊತೆಗೆ ಯುವಕ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.