ETV Bharat / bharat

ಮದುವೆ ನಿರಾಕರಿಸಿದ ವಧು; ಪಕ್ಕದ ಮನೆ ಹುಡುಗಿಗೆ ತಾಳಿ ಕಟ್ಟಿದ ವರ! - ಉತ್ತರ ಪ್ರದೇಶದ ಮಥುರಾ

ಕೊನೆ ಕ್ಷಣದಲ್ಲಿ ವಧು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿರುವ ಕಾರಣ ವರನಿಗೆ ಬೇರೆ ಯುವತಿ ಜೊತೆ ಮ್ಯಾರೇಜ್ ಮಾಡಿಸಲಾಗಿದೆ.

BRIDE REFUSED MARRIAGE
BRIDE REFUSED MARRIAGE
author img

By

Published : Jul 3, 2021, 7:46 PM IST

ಮಥುರಾ(ಉತ್ತರ ಪ್ರದೇಶ): ಹಿರಿಯರು ಒಪ್ಪಿ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ವರನೊಂದಿಗೆ ಮದುವೆ ಮಾಡಿಕೊಳ್ಳಲು ವಧು ಹಿಂದೇಟು ಹಾಕಿದ್ದಾಳೆ. ಹೀಗಾಗಿ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಹುಡುಗಿಯೋರ್ವಳಿಗೆ ತಾಳಿ ಕಟ್ಟಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಥುರಾ ಜಿಲ್ಲೆಯ ಮಂತ್​ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಬೇಕಾಗಿತ್ತು. ಈ ವೇಳೆ ಆಕೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾಳೆ. ತನಿಗೆ ವರ ಇಷ್ಟವಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಆಕೆಯ ಮನವೊಲಿಕೆ ಮಾಡಲು ಅನೇಕ ಸಲ ಪ್ರಯತ್ನಪಟ್ಟರು ವಿಫಲವಾಗಿದೆ. ತನಿಗೆ ವಧು ಇಷ್ಟವಿಲ್ಲ. ಯಾವುದೇ ಕಾರಣಕ್ಕೂ ಆತನೊಂದಿಗೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ಕಾಲ್ಕಿತ್ತಿದ್ದಾಳೆ.

ಇದನ್ನೂ ಓದಿರಿ: ನಮೋ ಜೊತೆ ಫೋನ್​ನಲ್ಲಿ ಮಾತನಾಡುವ ಅವಕಾಶ ಗಿಟ್ಟಿಸಿಕೊಂಡ 'ಚಾಯ್​ವಾಲಾ'!

ಪಕ್ಕದ ಮನೆ ಹುಡುಗಿಗೆ ತಾಳಿ ಕಟ್ಟಿದ ವರ!

ವಧು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಂತೆ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದೆ. ಈ ವಳೆ ಪಂಚಾಯ್ತಿ ನಡೆಸಲಾಗಿದ್ದು, ವರ ಮಾಧವ್​ ಅದೇ ಗ್ರಾಮದಲ್ಲಿ ವಾಸವಾಗಿದ್ದ ಶಿವಾಣಿ ಜೊತೆ ಮದುವೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಅರ್ಧಕ್ಕೆ ನಿಂತಿದ್ದ ಮದುವೆ ಕೊನೆಗೂ ನಡೆದು ಹೋಗಿದೆ. ಹೀಗಾಗಿ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.