ETV Bharat / bharat

ಕಣ್ಣಿಗೆ ಬಟ್ಟೆ ಕಟ್ಟಿ ಕಣ್ಣಾ ಮುಚ್ಚಾಲೆ ಆಟ.. ಭಾವಿ ಪತಿಯ ಕತ್ತು ಕೊಯ್ದು ವಧು ಎಸ್ಕೇಪ್​! - BRIDE PLAYED HIDE AND SEEK GAME WITH FIANCE

ವಧುವೊಬ್ಬಳು ತನ್ನ ಭಾವಿ ಪತಿಯೊಂದಿಗೆ ಕಣ್ಣಾ ಮುಚ್ಚಾಲೆ ಆಟವಾಡಿ, ಆತನ ಕತ್ತು ಕೊಯ್ದು ಮದುವೆ ಇಷ್ವವಿಲ್ಲವೆಂದು ಹೇಳಿ ಪರಾರಿಯಾಗಿದ್ದಾಳೆ. ಕತ್ತು ಕೊಯ್ದ ಆಕೆಯೇ ಯುವಕನನ್ನು ಆಸ್ಪತ್ರೆಗೂ ದಾಖಲಿಸಿ ಬಳಿಕ ಪರಾರಿಯಾಗಿದ್ದಾಳೆ.

An assaulted young man
ಹಲ್ಲೆಗೊಳಗಾದ ಯುವಕ
author img

By

Published : Apr 19, 2022, 9:48 AM IST

Updated : Apr 19, 2022, 12:41 PM IST

ಅನಕಪಲ್ಲಿ(ಆಂಧ್ರಪ್ರದೇಶ): ವಧುವೊಬ್ಬಳು ಭಾವಿ ಪತಿಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಿದ್ದು, ಚಾಕುವಿನಿಂದ ಆತನ ಕತ್ತು ಕೊಯ್ದು ಪರಾರಿಯಾಗಿರುವ ವಿಚಿತ್ರ ಘಟನೆ ಆಂಧ್ರಪ್ರದೇಶ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಮಡುಗುಳ ಮಂಡಲ ಘಟ್ಟ ರಸ್ತೆಯ ಅಡ್ಡೆಪಲ್ಲಿ ರಾಮನಾಯುಡು ಹಾಗೂ ರವಿಕಮಠಂನ ವಿಯ್ಯಪು ಪುಷ್ಪ ಅವರ ವಿವಾಹ ನಿಶ್ಚಯವಾಗಿತ್ತು. ಯುವಕನ ಜೊತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ನಟಿಸಿದ ಯುವತಿ, ಏಕಾಏಕಿ ಹಲ್ಲೆ ನಡೆಸಿ ಚಾಕುವಿನಿಂದ ಕತ್ತು ಕೊಯ್ದಿದ್ದಾಳೆ.

ಅನಕಪಲ್ಲಿ ಜಿಲ್ಲೆಯ ಬುಚ್ಚಯ್ಯ ಪೇಟೆ ಮಂಡಲದ ಕೊಮ್ಮಲಪುಡಿಯಲ್ಲಿ ಈ ಘಟನೆ ನಡೆದಿದೆ. ಮುಂದಿನ ತಿಂಗಳು 20ಕ್ಕೆ ಇವರಿಬ್ಬರ ವಿವಾಹ ನಿಗದಿಯಾಗಿತ್ತು. ಇವರಿಬ್ಬರು ಸೋಮವಾರ ವಡ್ಡಾಡಿಯಲ್ಲಿ ಖರೀದಿಗೆಂದು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಶಾಪಿಂಗ್ ಮುಗಿಸಿ ಕೋಮಲ್ಲಪುಡಿ ಉಪನಗರದಲ್ಲಿರುವ ಬಾಬಾ ಆಶ್ರಮದಲ್ಲಿ ಸಮಯ ಕಳೆಯಲೆಂದು ಗಾಡಿ ನಿಲ್ಲಿಸಿದ್ದರು.

ಈ ವೇಳೆ ಹುಡುಗನ ಜೊತೆ ಕಣ್ಣಾ ಮುಚ್ಚಾಲೆ ಆಟ ಆಡುವಂತೆ ಹೇಳಿ ಚಾಕುವಿನಿಂದ ಹುಡುಗನ ಕತ್ತು ಕೊಯ್ದಿದ್ದಾಳೆ. ಅದಷ್ಟೇ ಅಲ್ಲದೇ ನಂತರ ತನ್ನ ಸ್ವಂತ ದ್ವಿಚಕ್ರ ವಾಹನದಲ್ಲಿ ಭಾವಿ ಪತಿಯನ್ನು ರವಿಕಮಠದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಆಸ್ಪತ್ರೆಗೆ ಸೇರಿಸಿದ ಆಕೆ, ಯುವಕನ ಗಂಟಲಿಗೆ ಏನೋ ಇರಿದಿದೆ ಎಂದು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದಾಳೆ.

ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಸ್ಥಿತಿ ಗಂಭೀರವಾಗಿದ್ದರಿಂದ ಅನಕಾಪಲ್ಲಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆಕೆಗೆ ಮದುವೆ ಇಷ್ಟವಿಲ್ಲದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಯುವಕ ಹೇಳಿದ್ದಾನೆ. ದಾಳಿ ಮಾಡಿದ ನಂತರ ಅವಳೇ ಹುಡುಗನ ಬಳಿ ಮದುವೆ ಇಷ್ಟ ಇಲ್ಲವೆಂದು ಹೇಳಿಕೊಂಡಿದ್ದಾಳೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣು ಬಿಗಿದುಕೊಂಡ!

Last Updated : Apr 19, 2022, 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.