ETV Bharat / bharat

ಎಲ್ಲವೂ ರೆಡಿಯಾಗಿತ್ತು... ಒಂದೇ ಒಂದು ಮೇಸೆಜ್​ನಿಂದ ಮುರಿದು ಬಿತ್ತು ಮದುವೆ!

author img

By

Published : May 1, 2021, 2:35 PM IST

ಮದುವೆ ಕ್ಯಾನ್ಸಲ್​ ಎಂದು ವರನೇ ವಧುವಿಗೆ ಮೆಸೇಜ್​ ಕಳುಹಿಸಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

groom refused to marry, groom refused to marry by messaging, groom refused to marry by messaging in kanpur, kanpur news, ಮದುವೆ ಬೇಡ ಎಂದ ವರ, ಮೇಸೆಜ್​ ಮೂಲಕ ಮದುವೆ ಬೇಡ ಎಂದ ವರ, ಕಾನ್ಪುರದಲ್ಲಿ ಮೇಸೆಜ್​ ಮೂಲಕ ಮದುವೆ ಬೇಡ ಎಂದ ವರ, ಕಾನ್ಪುರ ಸುದ್ದಿ,
ಒಂದೇ ಒಂದು ಮೇಸೆಜ್​ನಿಂದ ಮುರಿದು ಬಿತ್ತು ಮದುವೆ

ಕಾನ್ಪುರ: ಮದುವೆಗಾಗಿ ಕಾಯುತ್ತಿದ್ದ ವಧುವಿಗೆ ಮದುವೆ ಕ್ಯಾನ್ಸಲ್​ ಎಂದು ವರನೇ ಸಂದೇಶ ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕಾನ್ಪುರದ ಪಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಂಗಾಪುರ ನಿವಾಸಿ ಪುಷ್ಪ್ ಲತಾ ಜೊತೆ ಕರೌಲಿ ಗ್ರಾಮದ ಕ್ರಾಂತಿ ಸಿಂಗ್​ನೊಂದಿಗೆ ಏಪ್ರಿಲ್​ 28 ರಂದು ಮದುವೆ ನಿಶ್ಚಯವಾಗಿತ್ತು. ಅದರಂತೆ ಯುವತಿ ಕುಟುಂಬಸ್ಥರು ಮದುವೆ ಮಾಡಲು ತಯಾರಿ ನಡೆಸಿದ್ದರು. ಯುವತಿಯೂ ಸಹ ಮದುವೆಗೆ ಸಂತೋಷದಿಂದಲೇ ರೆಡಿಯಾಗಿದ್ದರು.

ಒಂದೇ ಒಂದು ಮೆಸೇಜ್​​​ನಿಂದ ಮುರಿದು ಬಿತ್ತು ಮದುವೆ

ಇನ್ನೇನು ಮದುವೆ ನಡೆಯಬೇಕು. ವರನ ಕುಟುಂಬಸ್ಥರು ವಧು ಮನೆಗೆ ಬರಬೇಕು. ಆದರೆ ವರ ಕೊನೆ ಕ್ಷಣದಲ್ಲಿ ನಾವು ನಿಮ್ಮ ಮನೆಗೆ ಬರುತ್ತಿಲ್ಲ. ಮದುವೆ ಕ್ಯಾನ್ಸಲ್​ ಮಾಡುತ್ತಿದ್ದೇವೆ ಎಂದು ವಧುವಿಗೆ ಮೊಬೈಲ್​ ಮೂಲಕ ಸಂದೇಶ ರವಾನಿಸಿದ್ದಾನೆ.

ಈ ಸಂದೇಶ ನೋಡಿದ ವಧು ದಿಗ್ಭ್ರಮೆಗೊಂಡಳು. ಬಳಿಕ ಪೊಲೀಸರಿಗೆ ದೂರು ನೀಡಿದರು. ವರನು ವರದಕ್ಷಿಣೆ ಆಸೆಯಿಂದ ಮದುವೆ ನಿರಾಕರಿಸಿದ್ದಾರೆ. ನಾನೂ ಈ ಮದುವೆ ಮಾಡಿಕೊಳ್ಳುವುದಿಲ್ಲ. ನನಗೆ ಇಲ್ಲಿಯವರೆಗೆ ಮದುವೆಗೆ ಖರ್ಚು ಮಾಡಿದ ಹಣ ಮತ್ತು ವರನ ಕುಟುಂಬಕ್ಕೆ ನೀಡಿದ ಹಣ ಹಾಗೂ ವರನ ಉದ್ಯೋಗವೂ ನಮಗೆ ಕೊಡಿಸಬೇಕೆಂದು ವಧು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.